Showing posts with label ಏಳುತಲೆದ್ದು ಮನವೆ ನೀ ವಲೀ ನಿಜಖೂನ ಕುಲಕೋಟಿ mahipati. Show all posts
Showing posts with label ಏಳುತಲೆದ್ದು ಮನವೆ ನೀ ವಲೀ ನಿಜಖೂನ ಕುಲಕೋಟಿ mahipati. Show all posts

Wednesday, 1 September 2021

ಏಳುತಲೆದ್ದು ಮನವೆ ನೀ ವಲೀ ನಿಜಖೂನ ಕುಲಕೋಟಿ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಏಳುತಲೆದ್ದು ಮನವೆ ನೀ ವಲೀ ನಿಜಖೂನ ಕುಲಕೋಟಿ ಉದ್ಧರಿಸುವ ನೆಲೆನಿಭ ಸ್ಥಾನ ಬೆಳಗಾಗಲಿಕ್ಕೇರಿತು ನೀ ಒಳಿತಾಗಿ ಪೂರ್ಣ ತಿಳಕೊಂಡು ಮಾಡು ಗುರುಮೂರ್ತಿಗೆ ಸುನಮನ 1 

ಒಳಮುಖನಾಗರಿಯೋ ನೀ ಸುಲಲಿತ ಜ್ಞಾನ ಅಲೇಶ ಮಾಡದೆ ನೀ ಬ್ಯಾಗ ಬಲಿ ನಿಜಧ್ಯಾನ ಥಳಥಳಗುಡುತಲ್ಯದ ಒಳಿತಾಗಿ ಪೂರ್ಣ ತಿಳಕೊಂಡು ಮಾಡು ಗುರುಮೂರ್ತಿಗೆ ಸುನಮನ 2 

ತೊಳಿಬೇಕೆಲೊ ಮನದ ಹೀನ ಮಲಿನಗುಣ ಕರ್ಮ ತಮಂಧತನ ಕಳೆಕಾಂತಿಯುಳ್ಳ ಕರುಣಾರ್ಣವ ಸ್ವಾಮಿ ಪೂರ್ಣ ತಿಳಕೊಂಡು ಮಾಡು ಗುರುಮೂರ್ತಿಗೆ ಸುನಮನ 3 

ಸಲೆ ಮೊರೆಹೊಕ್ಕು ನೀ ಸದಾಬಲಿ ಭಕ್ತಿ ಪೂರ್ಣ ಅನುದಿನ ಸದ್ವಸ್ತು ಶರಣ ಸಕಳ ಸುರವುತಲ್ಯದೆ ಬಲ್ಲ ಸ್ವಾಮಿ ಕರುಣ ತಿಳಕೊಂಡು ಮಾಡು ಗುರುಮೂರ್ತಿಗೆ ಸುನಮನ 4 

ಇಳೆಯೊಳಿದೆ ಸಕಲಪುಣ್ಯಶಿರೋನಿಧಾನ ಘಳಿಸುವದೊಂದೆ ಸುಫಳಿತ ಸುದಿವ್ಯ ಘನ ತಿಳಿಯೊ ಸುಮನವೆ ಮಹಿಪತಿಸ್ವಾಮಿ ಪೂರ್ಣ ಒಲುವಾಂಗೆ ಮಾಡು ಗುರುಮೂರ್ತಿಗೆ ಸುನಮನ 5

***