Showing posts with label ಮರೆತು ಹೋದೆನೊ ದೇವ ರಂಗಯ್ಯ ರಂಗ kamalanabha vittala MARETU HODENO DEVA RANGAYYA RANGA. Show all posts
Showing posts with label ಮರೆತು ಹೋದೆನೊ ದೇವ ರಂಗಯ್ಯ ರಂಗ kamalanabha vittala MARETU HODENO DEVA RANGAYYA RANGA. Show all posts

Sunday, 5 December 2021

ಮರೆತು ಹೋದೆನೊ ದೇವ ರಂಗಯ್ಯ ರಂಗ ankita kamalanabha vittala MARETU HODENO DEVA RANGAYYA RANGA


kruti by Nidaguruki Jeevubai

ಮರೆತು ಹೋದೆನೊ ದೇವ ರಂಗಯ್ಯ ರಂಗ

ಸಿರಿದೇವಿ ರಮಣನೆ ಪರನೆಂದು ತಿಳಿಯದೆ ಪ


ನೀರೊಳು ಮುಳುಗುತ್ತ ಮೀನಮತ್ಸ್ಯನು ಎಂದು

ವೇದವ ತಂದಿತ್ತೆ ದೇವೇಶನೆ

ವಾರಿಧಿಶಯನನೆ ವಾರಿಜಾಕ್ಷನು ಎಂದು

ಸಾರಸಾಕ್ಷನ ಗುಣ ಸ್ಮರಿಸದೇ ಮನದಲಿ 1


ಬೆಟ್ಟ ಬೆನ್ನಿಲಿ ಪೊತ್ತು ಪೊಕ್ಕು ನೀರೊಳು ಬೇಗ

ಭಕ್ತರನುದ್ಧರಿಸಿದ ದೇವನ

ಪೃಥ್ವಿಯ ಕೋರೆಯಿಂದೆತ್ತಿ ಅಸುರನ ಕೊಂದ

ಸಿಸ್ತು ತೋರಿದ ಪರವಸ್ತುವ ಸ್ಮರಿಸದೆ 2


ಘುಡು ಘುಡಿಸುತ ಬಂದು ಒಡಲ ಸೀಳಲು ಖಳನ

ಅಡವಿ ಮೃಗವು ಎಂದು ಬೆರಗಾದೆನೊ

ಹುಡುಗನಂದದಿ ಪೋಗಿ ಪೊಡವಿಪಾಲಕನ ಬೇಡಿ

ಕೊಡಲಿಯ ಪಿಡಿಯುತ್ತ ತಾಯತರಿದನ ಸ್ಮರಿಸದೆ 3


ನಾರಿಯನರಸುತ ವನವ ಚರಿಸಿದಿ

ನಾರಿಚೋರನ ಕೊಂದೆ ವಾನರ ಸಹಿತ

ನವನೀತ ಚೋರನೆ ಮನೆಮನೆಗಳ ಪೊಕ್ಕು

ಗಾರು ಮಾಡಿದ ಕೃಷ್ಣ ಹರಿಯೆಂದು ಸ್ಮರಿಸದೆ 4


ಬೆತ್ತಲೆ ನಿಂತರು ಉತ್ತಮ ನೆನಿಸಿದಿ

ಸತ್ಯಮೂರುತಿ ಪುರುಷೋತ್ತಮನೆ

ಕತ್ತಿ ಕಯ್ಯಲಿ ಪಿಡಿದು ಮತ್ತೆರಾವುತನಾಗಿ

ಸುತ್ತಿ ಸುತ್ತಿದ ಸರ್ವೋತ್ತಮನರಿಯದೆ 5


ಭಕ್ತವತ್ಸಲಸ್ವಾಮಿ ಭಯನಿವಾರಣನೆಂದು

ಭೃತ್ಯರು ನೃತ್ಯದಿ ಕುಣಿಯುವರೊ

ಸತ್ಯ ಸಂಕಲ್ಪನೆ ಸತ್ಯಭಾಮೆಯ ಪ್ರಿಯ

ಭಕ್ತರೊಡೆಯ ಪರವಸ್ತುವ ಸ್ಮರಿಸದೆ6


ಕರುಣವಾರಿಧಿಯೆಂದು ಸ್ಮರಿಸುವ ಭಕುತರ

ಪರಿ ಪರಿ ಅಘಗಳು ಪರಿಹಾರವೊ

ಶರಧಿಸುತೆಯ ಪತಿ ಕಮಲನಾಭ ವಿಠ್ಠಲ

ಸ್ಮರಿಸದೆ ಅಪರಾಧ ಸಲಹೆಂದು ಸ್ಮರಿಸದೆ 7

***