Showing posts with label ಬೆಳಗುವಾರತಿ ಬನ್ನಿ ಲಲನೆಯರೆಲ್ಲರು ಸುಲಭಾ ಭಕ್ತರಿಗಾದಾ ಚೆಲುವ ಶ್ರೀಕೃಷ್ಣಗ gurumahipati. Show all posts
Showing posts with label ಬೆಳಗುವಾರತಿ ಬನ್ನಿ ಲಲನೆಯರೆಲ್ಲರು ಸುಲಭಾ ಭಕ್ತರಿಗಾದಾ ಚೆಲುವ ಶ್ರೀಕೃಷ್ಣಗ gurumahipati. Show all posts

Wednesday, 1 September 2021

ಬೆಳಗುವಾರತಿ ಬನ್ನಿ ಲಲನೆಯರೆಲ್ಲರು ಸುಲಭಾ ಭಕ್ತರಿಗಾದಾ ಚೆಲುವ ಶ್ರೀಕೃಷ್ಣಗ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಬೆಳಗುವಾರತಿ ಬನ್ನಿ ಲಲನೆಯರೆಲ್ಲರು| ಸುಲಭಾ ಭಕ್ತರಿಗಾದಾ ಚೆಲುವ ಶ್ರೀಕೃಷ್ಣಗ ಪ 

ಮಲ್ಲಯುದ್ದವನೆ ಮಾಡಿ ಮಾವ ಕಂಸನ ಕೊಂದು ಇಳೆಯೊಳು ಜಯವರಿಸಲು ನಡೆತಂಡನು 1 

ದುಷ್ಟಬುದ್ದಿಯನ್ನುಳ್ಳ ಜಟ್ಟೇರ ಮಡಹಿಸಿ| ಸೃಷ್ಟಿಯ ಭಾರನಿಳಹಿಸಿ ಶಿಷ್ಟರ ಕಾಯ್ದನು 2 

ಗಂಡರ ಗಂಡ ಪ್ರಚಂಡನಾಗಿ ಮೆರೆದನು| ಕುಂಡಲ ಭೂಷಿತ ಗಂಡ ಕಪೋಲಾ 3 

ವರ ಉಗ್ರಸೇನಗ ಅರಸುತನವನಿತ್ತಾ| ಗುರು ಮಹಿಪತಿ ಸುತ ಪೊರೆವ ಶ್ರೀ ಅರಸಗೆ4

***