Showing posts with label ಒಂದಾನು ಒಂದು ದಿನ ಶಿಂಧುವಿನೊಳ್ ನೆರೆದು indiresha. Show all posts
Showing posts with label ಒಂದಾನು ಒಂದು ದಿನ ಶಿಂಧುವಿನೊಳ್ ನೆರೆದು indiresha. Show all posts

Friday 27 December 2019

ಒಂದಾನು ಒಂದು ದಿನ ಶಿಂಧುವಿನೊಳ್ ನೆರೆದು ankita indiresha

ಒಂದಾನು ಒಂದು ದಿನ ಶಿಂಧುವಿನೊಳ್ ನೆರೆದು ಬಂದಾರು ದೇವತೆಗಳುವೃಂದಾವು ದುಷ್ಟ ಜನರಿಂದಾಲೆ ಭೂಮಿ ನೊಂದಾಳುಎಂದುಸುರಿತಾ ಪ

ಕಂದರ್ಪತಾತ ನಿನಗೊಂದಿಸಿ ಬೇಡುವೆನು ಛಂದಾದಸೂರ್ಯಸುತನಾಮಂದಿರದೋಳ್ ಜನಿಸಿ ನಂದಾದಿ ಗೋಕುಲದಿ ನಿಂದಾತ್ಮಲೀಲೆ ತೋರೊ ಅ.ಪ.

ಅಂದಾಡಿದೂತ ಸುರವೃಂದಾರ ವಾಕ್ಯಗಳ ಕಿವಿಯಿಂದಾಲೆಕೇಳಿ ಹರಿಯುಛಂದಾದಿ ನೀವುಗಳು ಮುಂದಾಗಿ ಜನಿಸುವದು ಹಿಂದಾಗಿನಾ ಜನಿಸುವೇಅಂದಾಡಿದಂಥ ಹರಿ ಸುಂದರಾ ಮಾತವನು ತಂದಾನುಬ್ರಹ್ಮ ಮನದೀಇಂದ್ರಾದಿಗಳಿಗೆಲ್ಲ ಅವನಂದದ್ದು ಪೇಳೆ ನಿಜಮಂದಿರಖೋಗಿರೆಂದಾ 1

ಎಲ್ಲಾ ಅಮರರೂ ನಿಜವಲ್ಲಾಭಿಯರು ಸಹ ಅಲ್ಲಲ್ಲೆಜನಿಸುತಿಹರೂಫುಲ್ಲಾಕ್ಷತಾ ಮಥುರೆಯಲಿಟ್ಟು ಗೋಕುಲದಿ ಮೆಲ್ಲಾನೆಬೆಳೆಯುತಿರಲುಅಲ್ಲಿದ್ದ ಗೋಪಿಯರು ಯಲ್ಲಾರು ತಾವು ನಿಜವಲ್ಲಾಭೆರೆಂದು ಹರಿಯೋಳ್‍ಎಲ್ಲಾನು ಬಿಟ್ಟು ಅವನಲ್ಲಿಗೆ ಸ್ನೇಹವನು ಉಲ್ಹಾಸಮಾಡುತಿರಲು 2

ಇಂದೀವರಾಕ್ಷ ಇಹ ಬಂದಾ ಸುರೇಂದ್ರಗಣ ನೊಂದಾನುಒಂದು ಬಿಡದೇವೃಂದಾವನಾದಿ ತನನಂಥಾ ದಿನಗಳೆಲ್ಲ ಒಂದೊಂದೇಲೀಲೆ ತೋರಿಇಂದ್ರಾನ ಗರ್ವಕಳೆದಿಂದೆತ್ತಿ ಪರ್ವತವ ಒಂದಂಗುಲಿಯಲ್ಲಿಧರಿಸೀಮುಂದೇಳು ದಿವಸ ವ್ರಜ ಮಂದೀಯ ಕಾಯ್ದ ಕರ ವೃಂದಾವನದಲ್ಲಿಳುಹಿದಾ 3

ವಂದೀನ ರಾತ್ರಿ ರವಿನಂದಿನಿಯೋಳ್ ಹರಿಯುನಿಂದೂದಲಾಗ ಕೊಳಲುವೃಂದಾದರಾಗಗಳಿಂದಾಲೆ ಕೇಳಿ ವ್ರಜದಿಂದಾವರಾನಿಹರೂಮಂದೀರದೊಳಗೆ ನಿಜ ಕಂದಾರು ನಾಥಗಳು ಛಂದಾದವಸ್ತ್ರಂಗಳುವಂದಾನು ನೋಡದಲೆ ವಂದಾರು ಯಮುನೆಯಲಿಂದಾರುಮೈಯ್ಯ ಮರೆತು 4

ಬಂದೇವು ನಾವು ನಿಜ ಮಂದೀರ ಬಿಟ್ಟು ನಿಮ್ಮ ಸುಂದರಕೊಳಲ ಧ್ವನಿಗೇಛಂದಾದ ಸ್ಮರಣೆ ಸುಖದಿಂದಿತ್ತು ನಮಗೆ ದ್ವಿಜೇಂದ್ರೇತಕಾಯೋ ಯನಲುಅಂದಾವರಾಮಾತು ನಂದಾನುಸೂನ ದಯದಿಂದಾಲೆಕೇಳಿ ಹರಿಯೂಮುಂದಣಿಯಾಗ ಅವರಿಂದಾಲೆ ಕೂಡಿ ದಯದಿಂದಾಲೆನಲಿದು ಮರೆದೂ 5

ಬಂದಾನು ಮಥುರೆಯಲಿ ಕೊಂದಾನು ಮಾತುಳನೆತಂದೀಯಾ ಬಂಧನವ ಬಿಡಿಸೀಸಾಂದೀಪಗಿತ್ತು ಕಂದಾನಸೂನ ಕುರು ನಂದಾರಕೊಲ್ಲಿಸಿದನೂಇಂದ್ರತ್ವ ಜ್ವಾಲೆಗಳೂ ಅಂತಿತ್ತು ರಾಜ ಸುಖ ಸಂದೇಹ ಸಂತೋಷದೀಇಂದ್ರಾದಿ ಸರ್ವಸುರ ಸಂದೇಹ ಪ್ರಾರ್ಥಿಸಿದ ಒಂದೊಂದೆ ಮಹಿಮೆಗಳನೂ 6

ಛಂದಾಗಿ ಮಾಡಿದ್ವಶ ಮಡುಹಿಕರ ವೃಂದಾವಪಾಲಿಸಿದನೂನಂದಾತ್ಮ ಜಾತವು ಒಂದೊಂದೆ ಮಹಿಮೆಗಳ ತಂದೊಮ್ಮೆಮನದಿ ಸ್ಮರಿಸೀಬೆಂದಾವು ಪಾಪಗಳು ಬಂದಾವು ಸೌಖ್ಯಗಳುಸಂದೇಹವಿಲ್ಲನಿದರೋಳ್‍ಕಂದಾರ ಕೊಡುವ ಧನ ವೃಂದಾವು ಪೊರೆವಾ ಮಂದೀರವಿತ್ತು ಸಲಹುವ 7

ಇಂದೆನ್ನ ಮಾನಸದಿ ತಂದಾತ್ಮ ರೂಪವನೂ ಛಂದಾಗಿ ಸಂತೈಸಲೀನಂದಬಾಲಾಷ್ಟಕವನೂ ಇಂದುವಾವರು ಪಠಿಸುವಾ ಇಂದಿರೇಶನು ಪಾಲಿಸುವನೂ 8
********