..
kruti by bhupati vittalaru ( kakhandaki Ramacharyaru)
ಬಾರಪ್ಪ ನೀ ಬಾರಪ್ಪಾ ಭಾರತಿರಮಣಾ ಮುಖ್ಯಪ್ರಾಣಾಗೋ'ನದಿನ್ನಿ ಹಣ್ಣಮಪ್ಪಾ ನೀ ಗಾಲವ ಕ್ಷೇತ್ರಕೆ ಬಾರಪ್ಪಾ ಪ
ಗಾಲವಕ್ಷೇತ್ರಕ್ಕೆ ಬಾರಪ್ಪಾ ನೀ ಹೋಳಿಗೆತುಪ್ಪಾ ಹೊಡೆಯಪ್ಪಾಕೃಷ್ಣವೇಣಿಯ ತಟದ ಶಿಲೆಯೊಳು ಒಡಮೂಡುತ ನೀ ಇದ್ದೆಪ್ಪಾ1
ಶಿಷ್ಟರಾದ ಶ್ರೀ ಉಮರ್ಜಿ ಆಚಾರ್ಯರ ನಿಷ್ಠೆಗೆ ಒಲಿದು ಬಂದೆಪ್ಪಾಶರಧಿಗೆ ಜಿಗಿದು ಸೀತಾದೇವಿಗೆ ರಾಮಮುದ್ರಿಕೆಯ ಕೊಟ್ಟೆಪ್ಪಾದುರುಳ ರಾವಣನ ಲಂಕಾಪಟ್ಟಣ ಸುಟ್ಟ ಕಪಿವರನು ನೀನಪ್ಪಾದುಷ್ಟ ಕೌರವನ ತೊಡೆಯ ಒಡೆದು ಗದೆಪಿಡಿದ ಭೀಮ ನೀ ಹೌದಪ್ಪಾ 2
ದುಃಶಾಸನನ ಕರುಳ ಬಗೆದು ನರಸಿಂಹನ ಪ್ರೀತಿ ಪಡೆದೆಪ್ಪಾಹರಿಯದ್ವೇಗಳ ದುರ್ಮತಗಳನು ಮುರಿದು ಮಧ್ವಯತಿ ಆದೆಪ್ಪಾರಾಶಿ ರಾಶಿ ಸದಗ್ರಂಥ ರಚಿಸಿ ನೀ ವ್ಯಾಸರ ಸನ್ನಿಧಿ ಪಡೆದೆಪ್ಪಾಕೃಷ್ಣವೇಣಿತಟ ನರಾಹರಿ ಇರುವನು ರಾಯರು ಇರುವರು ಬಾರಪ್ಪಾ 3
ಎಲ್ಲಿ ನರಹರಿ ಎಲ್ಲಿ ರಾಯರು ಅಲ್ಲಿ ನೀ ಇರಬೇಕಪ್ಪಾಪಾಪಿಷ್ಠರ ಗತಿಭಯಂಕರನು ನೀಪುಣೈವಂತರಿಗೆ ಸುಲಭಪ್ಪಾಭೂಪತಿವಿಠ್ಠಲನ ಭಕ್ತರ ಪೊರೆಯಲು ನೀ ಗಾಲವ ಕ್ಷೇತ್ರಕೆ ಬಾರಪ್ಪಾ 4
ರುದ್ರದೇವರು
***