Showing posts with label ಇವನೆವೆ ಮಾನವನು ನೋಡಿರೋ ಇವನೆವೆ ಮಾನವನು gurumahipati. Show all posts
Showing posts with label ಇವನೆವೆ ಮಾನವನು ನೋಡಿರೋ ಇವನೆವೆ ಮಾನವನು gurumahipati. Show all posts

Wednesday, 1 September 2021

ಇವನೆವೆ ಮಾನವನು ನೋಡಿರೋ ಇವನೆವೆ ಮಾನವನು ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಇವನೆವೆ ಮಾನವನು ನೋಡಿರೋ ಇವನೆವೆ ಮಾನವನು ಪ 

ದಾವನು ಶ್ರಿ ಹರಿ ಪಾವನ ನಾಮವ ಆವಾಗ ನೆನೆವುತ ಸಾವಧನಾದಾ ಅ.ಪ 

ಹಿಂದಿನ ಪುಣ್ಯದಲಿ ನಾನೀಗ ಬಂದೆನು ನರದೇಹದಲಿ | ಮುಂದಾವ ಗತಿಗಳೋ ಛಂದದ ತಿಳಿಯದು | ಮಂದರ ಧರ ಸಲಹೆಂದು ಮೊರೆಯಿಡುವ 1 

ಇದ್ದಷ್ಟರೊಳುದಾವ ಶೇವೆಗೆ ಕದ್ದಿರ ತನುಮನವಾ | ಸಿದ್ಧರ ನೆರೆಯಲಿ ಶಿದ್ಧ ಬೋಧಾಮೃತ | ಬುದ್ಧಿಲಿ ಸೇವಿಸಿ ಗದ್ದಳವಾಗಾ 2 

ಗುರು ಮಹಿಪತಿ ಸ್ವಾಮಿ ಚರಣಕ ಶರಣೆಂದವನು ಪ್ರೇಮಿ | ಗುರು ವಚನವನಂದದಿ ಧರೆಯೊಳು ನಡೆಯುತ | ಗುರು ಭಕ್ತಿ ಜಾಗಿಸಿ ಗುರುತನಕ ಬಂದಾ 3
***