Showing posts with label ಳಳ- RSS- ನುನುಗ್ಗು ಮುಂದಕೆ ನೀ others NUGGU MUNDAKE NEE rss. Show all posts
Showing posts with label ಳಳ- RSS- ನುನುಗ್ಗು ಮುಂದಕೆ ನೀ others NUGGU MUNDAKE NEE rss. Show all posts

Friday, 24 December 2021

ನುಗ್ಗು ಮುಂದಕೆ ನೀ others NUGGU MUNDAKE NEE rss

antara lyrics differ

 

RSS song  


ನುಗ್ಗು ಮುಂದಕೆ ನೀ ನುಗ್ಗು ಮುಂದಕೆ

ಹಿಗ್ಗಿನಿಂದ ಬಗ್ಗು ಬಡಿದು ಸೊಕ್ಕಿ ಮೆರೆವ ಅರಿಗಳ

ಲಗ್ಗೆ ಹಾಕಿ ಸಗ್ಗಸಿರಿಗೆ ನುಗ್ಗು ಗೆಲುವಿನಂಗಳಕ್ಕೆ  ||ಪ||


ನೋವನೆಲ್ಲ ನುಂಗಿ ನೀನು ನಮ್ಮನೆಲ್ಲ ಸಲಹಿದೆ

ನಿನ್ನ ನಾವು ಮರೆತ ನೋವು ಎದೆಯನೆಲ್ಲ ತುಂಬಿದೆ

ಅಂದುಗೈದ ಪಾಪ ತೊಳೆದು ಮತ್ತೆ ಶುದ್ಧರಾಗಲು

ಬಿಡದೆ ನಿನ್ನ ಸೇವಿಸುವ ಸತ್ವಶೀಲ ಸುತರೊಲು   ||೧||


ನಿನ್ನ ಅಂಗ ಅಂಗವೆಲ್ಲ ಭಂಗವಾಗಿ ಹೋದ ಚಿತ್ರ

ಕಾಣುತಿಹುದು ಕಣ್ಣ ಮುಂದೆ ಭೀತಿ ತರುವ ವಿಷದ ಚಕ್ರ

ಅಮ್ಮ ನಿನ್ನ ಮಕ್ಕಳೆಲ್ಲ ತುಂಬಿಕೊಂಡು ಭೇದಭಾವ

ಕಾದಿ ಮಡಿವ ದೃಶ್ಯ ಕಂಡು ನೊಂದೆ ತಾಯೇ ಭಾರತೀ ||೨||


ಮತ್ತಮುತ್ತಿದಂಥ ಘೋರ ಅಂಧಕಾರ ತೊಡೆವೆನಿಂದು

ಎನ್ನ ಬಾಳ ಭವ್ಯ ಗುರಿಯ ತೋರಿಸಿದೆ ಸಂಘವಿಂದು

ಎನ್ನ ಸರ್ವಶಕ್ತಿ ಸುರಿದು ಸಂಘ ಕಾರ್ಯಗೈದು ನಾನು

ಭವ್ಯ ಬಾಳು ಬಾಳುವಂತೆ ಹರಸು ಎನ್ನ ಓ ಪ್ರಭೋ  ||೩||

***


nuggu muMdake nI nuggu muMdake

higginiMda baggu baDidu sokki mereva arigaLa

lagge hAki saggasirige nuggu geluvinaMgaLakke ||pa||


nOvanella nuMgi nInu nammanella salahide

ninna nAvu mareta nOvu edeyanella tuMbide

aMdugaida pApa toLedu matte SuddharAgalu

biDade ninna sEvisuva satvaSIla sutarolu ||1||


ninna aMga aMgavella BaMgavAgi hOda citra

kANutihudu kaNNa muMde BIti taruva viShada cakra

amma ninna makkaZLella tuMbikoMDu BEdaBAva

kAdi maDiva dRuSya kaMDu noMde tAyE BAratI ||2||


mattamuttidaMtha GOra aMdhakAra toDeveniMdu

enna bALa Bavya guriya tOriside saMGaviMdu

enna sarvaSakti suridu saMGa kAryagaidu nAnu

Bavya bALu bALuvaMte harasu enna O praBO ||3||

***