Showing posts with label ಮಂಜುಳ ವೇಣುಗಾನವ ಮಾಡಿ prasannavenkata. Show all posts
Showing posts with label ಮಂಜುಳ ವೇಣುಗಾನವ ಮಾಡಿ prasannavenkata. Show all posts

Friday 15 November 2019

ಮಂಜುಳ ವೇಣುಗಾನವ ಮಾಡಿ ankita prasannavenkata

by ಪ್ರಸನ್ನವೆಂಕಟದಾಸರು
ಮಂಜುಳ ವೇಣುಗಾನವ ಮಾಡಿ ಮೋಹಿಪ ಜಗವಕಂಜಜನಯ್ಯ ಮುರಾರಿ ಕಾಮಿನಿಯರಿಗುಪಕಾರಿ ಪ.

ಯಮುನೆಯ ಪುಲಿನದಿ ಯದುಕುಲ ಚಂದ್ರ ಹೊಂದೆರಮಣೀರ್ವಕ್ಷ ಮಧ್ಯದಿ ರಾಜಿಸುತ ಕುಲಾಂಬುಧಿ 1

ಪೂರ್ಣ ಪೀಯೂಷಕರನು ಪೂರ್ವಾಚಲಕೆ ಸಾರ್ದನುಪೂರ್ಣಾನಂದ ಮುಕುಂದ ಪವನ ಸಂಚಾರದಿಂದ 2

ಕುಂದನೀಲೋತ್ಪಲ ಜಾಜಿಕಮಲಮಲ್ಲಿಗೆ ಜುಜಿ( ?)ಮಂದಾರಪುನ್ನಾಗಭುಜಮೂಲದಿ ಗೋಪಾಲರಾಜ3

ಕುಸುಮಾಕರಕುಂಜದಿ ಕುಶಲಕ್ರೀಡಿತನಾದಿಸುಸಪ್ತ ಸ್ವರದಿಂದ ಸುಖದಾನಂದ ಮುಕುಂದ 4

ಕತ್ತಲೆವಿರಿ ಸಂಪಿಗೆಕಮಲಮೊಲ್ಲೆ ಮಲ್ಲಿಗೆಸುತ್ತಿದ ಎಳೆಪಲ್ಲವ ಮಾರನಂತಹ ಚೆಲುವ 5

ಮುತ್ತಿನ ಚೊಲ್ಲೆಯಲ್ಲಿಯ ಮುಂಗುರುಳಲ್ಲಿ ವಲಯಕಸ್ತೂರಿ ತಿಲಕ ಒಪ್ಪೆ ಕವಿದಡರ್ವದ್ವೀರೇಫೆ 6

ಕಡೆಗಣ್ಣಿನ ನೋಟದಿ ಕುಡಿಹುಬ್ಬಿನ ಮಾಟದಿಮಡದೇರ್ಗೆ ಮಾರಶರ ಮೂಡಿಸುತತಿ ಸುಂದರ 7

ಮುಗುಳುನಗೆಮೊಗದ ಮಣಿಕುಂಡಲ ಕರ್ಣದಯುಗ ಕರ್ಣಾಕರ್ಣಿಕರಾಯತ ನಟ ನರಾಕಾರ 8

ವನಮಾಲೆವೈಜಯಂತಿಶ್ರೀವತ್ಸಕೌಸ್ತುಭಕಾಂತಿಮಿನುಗುವಾಮೋದ ಗಂಧಮುಡಿ ತೋರೋ ಶ್ರೀ ಗೋವಿಂದ 9

ಹಾರಕೇಯೂರ ಕಂಕಣ ಹೊಳೆವ ಮಧ್ಯಒಡ್ಯಾಣಚಾರುಪೀತಾಂಬರೋತ್ತರಿ ಚೀರದಿಂದೆಸೆವಹರಿ10

ವಾಮಬಾಹುವಿಲೊಪ್ಪುವ ವೇಣುವಿನ ಘನರವಬ್ರಹ್ಮ ಗಂಧರ್ವರ ಗಾನ ಬಗೆಗೆ ಮೀರುವ ದೇವ 11

ಸುಲಲಿತಂದುಗೆ ಗೆಜ್ಜೆ ಸಂದ್ರೇಖೆ ಶೋಭಿತಹೆಜ್ಜೆಕೆಲದ ಗೋಪಾಂಗನೇರ ಕಾಮಧೇನು ಸಾರೋತ್ತರ 12

ಧರೆಗೆರಗಿದ ಜಡೆ ಸಲೆ ಕಾಳಿಂದಿ ಮೇಲಾಡೆ ಸಕಳ ಪಕ್ಷಿಮೃಗವು ಸಂಚರಿಸದೆ ನಿಂದವು 13

ಜಡಂಗಳು ಚೇತರಿಸೆ ಜನದ ಚೇಷ್ಟೆ ಥಂಬಿಸೆಕಡುರಸತುಂಬಿತುಳುಕಲಜಭವಾಂಡೊಲಿಯಲು14

ವೃಕ್ಷಗಳ ಶೃಂಗಾರಿಯ ವತ್ಸಗಳಾವದೊರೆಯಈಕ್ಷಿಸಿ ತೃಣ ಮೆಲ್ಲದೆಯಿದ್ದವು ಗೀತಕೇಳುತ 15

ನೀರಸ ತರುಫಲಾಗೆ ನಿತ್ಯಪ್ರಜÕತೆಗೆನೀರದಗೆ ಸ್ವರಗೈಯೆ ನಿಗಮನಯ್ಯ ಮರೆಯ 16

ಮಂಗಳಮೇಘಘರ್ಜನೆ ಮಾಡಿದವು ಮೆಲ್ಲಮೆಲ್ಲನೆರಂಗನ ಮೇಲಮೃತ ಧಾರೆಯವಿತ್ತವರ್ಥಿಯಿಂದ 17

ನಂದವ್ರಜದ ವನವು ನಂದನ ಚೈತ್ಯಾಧಿಕವುನಂದಸೂನುವಿನ ಗೀತ ನಾದ ವೇದಾನಂತಾನಂತ 18

ಕಮಲಜ ಭವೇಂದ್ರಾದಿಕರು ಭ್ರಾಂತಿಯನೈದಿದರುಅಮರಜನ ನಾರೇರು ಅಂಗಜವಶವಾದರು 19

ಗೋಷ್ಠದ ಗೊಲ್ಲ ಗೋಪೇರ ಗೋವರ್ಧನ ಗೋಪಾಲರದೃಷ್ಟಕೆ ಸುರಮುನಿ ಗಂಧರ್ವರು ಪೊಗಳಿದರಾಗ 20

ಸುರಭ್ಯಾಗಾರದಿ ಕೃಷ್ಣ ಸಂಚರಿಸಲು ಸರ್ವೇಷ್ಠಪೂರಣವಪ್ಪಿತುಧರೆಪರಮಮಂಗಳ ಸಾರಿ21

ಸುರರುಸುಖ ಸಂಭೃತ ಶರಧಿಯೊಳೋಲಾಡುತಸಿರಿಮಂಗಳವ ಹೇಳಿ ಸುರಿದರರಳ ಮಳೆ22

ಪ್ರಸನ್ನತರ ಚರಿತ ಪ್ರಸನ್ನಾವ್ಯಾಕೃತಗಾತ್ರಪ್ರಸನ್ನಪೂರ್ಣ ಪ್ರಜೆÕೀಷ್ಠ ಪ್ರಸನ್ನವೆಂಕಟಕೃಷ್ಣ 23
********