Showing posts with label ಮಂಗಳ ಮುಖ್ಯಪ್ರಾಣನಿಗೆ others. Show all posts
Showing posts with label ಮಂಗಳ ಮುಖ್ಯಪ್ರಾಣನಿಗೆ others. Show all posts

Sunday, 4 April 2021

ಮಂಗಳ ಮುಖ್ಯಪ್ರಾಣನಿಗೆ others

ಮಂಗಳ ಮುಖ್ಯಪ್ರಾಣನಿಗೆ |

ಜಯ ಮಂಗಳ ವಾಯು ಕುಮಾರನಿಗೆ || ಪ ||


ಅಂಜನಾ ದೇವಿಯ ಕಂದಗೆ ಮಂಗಳ |

ಕಂಜಾಕ್ಷ ಹನುಮಂತಗೆ ಮಂಗಳ |

ಸಂಜೀವನ ತಂದಾತಗೆ ಮಂಗಳ |

ಸಜ್ಜನ ಪರಿ ಪಾಲಗೆ ಮಂಗಳ || ೧ ||


ಅತಿ ಬಲವಂತ ಶ್ರೀಭೀಮಗೆ ಮಂಗಳ |

ಪ್ರತಿ ಮಲ್ಲರ ಗೆಲಿದವಗೆ ಮಂಗಳ |

ಸತಿಯ ಸೀರೆಯ ಸೆಳೆಯ ಬಂದವನ |

ಪೃಥುವಿಮ್ಯಾಲೆ ಕೆಡಹಿದಾತಗೆ ಮಂಗಳ || ೨ ||


ಸರಸ ಸುಶಾಸ್ತ್ರವ ಪೇಳ್ದವಗೆ ಮಂಗಳ |

ನಿರುತ ಶ್ರೀರಾಮರ ಬಂಟಗೆ ಮಂಗಳ |

ದೊರೆ ಶ್ರೀಕೃಷ್ಣನ ಪೂಜೆಯ ಮಾಡುವ |

ಗುರು ಮಧ್ವಮುನಿರಾಯರಿಗೆ ಮಂಗಳ || ೩ ||

***