..
ಗುರುರಾಯ ನೀ ಎನ್ನ ತವರ ಮನಿ | ಶರಣರಿಗೆ ಕೈವಲ್ಯದಾನಿ ಪ
ಗುರುವೆ ಎನ್ನ ಬಂಧು | ಬಂದು ಪೇಳಿರಿ ವಾಕ್ಯ ಎನಗೊಂದು | ಬಿಡಿಸೀದಿ ಈ ಜೀವಶಿವ ಸಂದು | ನಿಜರೂಪ ತೋರಿದಿ ಕೃಪಾಸಿಂಧು 1
ನಿನ್ನಂಥ ಉದಾರಿ ಎಲ್ಲಿ ಕಾಣೆ | ಸತತ ಸದ್ಬೋಧಕೊಟ್ಟು ಕಾಯುವನೆ | ಶಾಂತಿ ಶಮ ದಮವು ಕೊಡುತಾನೆ |ಅಂತರ ಬಾಹ್ಯದಲಿ ತಾ ತುಂಬ್ಯಾನೆ 2
ಇರಲಾರೆನು ಬಿಟ್ಟು ಅರಕ್ಷಣಾ | ಗುರುರಾಯ ಎನ್ನಜೀವದ ಪ್ರಾಣ | ದೊರಕಿದಿ ಪರಮವೇ ದಾನಸಾರಿ ಪೇಳುವ ಜ್ಞಾನಬೋಧ ಪೂರ್ಣ 3
***