ಆ ಬಾಲೆಯರಬಗೆ ಬಗೆ ಸೋಲಿಸಿಬರುವಂಥ ಮೇಲು ಮೇಲಾದ ಕೋಲ ಪ.
ಸಾಗರನ ತನುಜಳು ಬಳುಕುತಬಾಗುತ ನಾಗವೇಣಿ ರುಕ್ಮಿಣಿಆಗ ಗೋವಿಂದಗೆ ಬೇಗನೆ ವಂದಿಸಿ ಹೋಗಬೇಕು ಮುಯ್ಯಕ್ಕೆ1
ಬಡನಡು ಬಳುಕುತ ಮಡದಿ ಮೋಹದ ರಾಣಿಖಂಡಿ ಮುದ್ದು ಸುರಿಯುತಲೆ ನಡೆದು ಬಂದು ಕೃಷ್ಣನಡಿಗೆರಗಿಭಾಮೆ ನುಡಿದಳು2
ಪೊಡವಿ ಪಾಲಿಪವಪ್ಪನೀ ನಡೆಮುಯ್ಯಕ್ಕೆನುತಲಿ ನುಡಿದಳು ಸತ್ಯಭಾಮೆ ಉಡಬೇಕು ವಸ್ತ್ರಂಗಳಇಡಬೇಕು ಭೂಷಣನಡೆ ಬೇಗ ಕೃಷ್ಣರಾಯ 3
ಚಂದ್ರವದನೆಯರ ಮುಯ್ಯಇಂದೇ ತಿರುಗಿಸಬೇಕಮಂದರೋದ್ದರ ಮಾಧವ ಸಿಂಧೂಶಯನ ನೀನು ಬಂದರೆಮುಯ್ಯಕ್ಕೆ ಛsÀಂದ ತೋರುವುದೆಂದರು 4
ನೀಲ ಮೊದಲಾದ ಬಾಲೆಯರು ರಂಗಗೆ ಮೇಲೆ ಮೇಲೆ ವಂದಿಸಿ ಶ್ರೀಲೋಲ ರಾಮೇಶÀ ನೀಆಲಸ್ಯ ಮಾಡದೆ ಪಾಲಿಸಬೇಕೆಂದರು5
****