Showing posts with label ಪ್ರಥಮಾಂಗ ಪ್ರಥಮಾಂಗ ಪೃಥ್ವಿ ಸುರಾರ್ಚಿತ ಅತುಳ shyamasundara PRATHAMAANGA PRATHAMAANGA PRUTHVI SURAARCHITA ATULA. Show all posts
Showing posts with label ಪ್ರಥಮಾಂಗ ಪ್ರಥಮಾಂಗ ಪೃಥ್ವಿ ಸುರಾರ್ಚಿತ ಅತುಳ shyamasundara PRATHAMAANGA PRATHAMAANGA PRUTHVI SURAARCHITA ATULA. Show all posts

Friday, 3 December 2021

ಪ್ರಥಮಾಂಗ ಪ್ರಥಮಾಂಗ ಪೃಥ್ವಿ ಸುರಾರ್ಚಿತ ಅತುಳ ankita shyamasundara PRATHAMAANGA PRATHAMAANGA PRUTHVI SURAARCHITA ATULA

ಪ್ರಥಮಾಂಗ | ಪ್ರಥಮಾಂಗ

ಪೃಥ್ವಿಸುರಾರ್ಚಿತ | ಅತುಳ ಮಹಿಮ ಗುರು ಪ

ದಶವರೂಢನ ಕುಶಲವ ತ್ವರಿತದಿ

ವಸುಧಿಜೆಗರುಹಿದ | ಅಸಮಚರಿತ ಗುರು 1

ಕುಂಜರ ಪುರಪತಿ | ಭಂಧನ ಭಾವಿ

ಕಂಜಜ ಕಾಯೊ ಮೃತ್ಯುಂಜಯವಂದಿತ 2

ಅಧಮಾದ್ವೈತರ | ಮದವಳಿಯಲು ನಡು

ಸದನನ ಸುದತಿಯ | ಉದರೊಳುದಿಸಿದ 3

ಬಕಕೀಚಕ ಖಳ | ನಿಕರ ತರಿದ ಪಾ |

ವಕ ಸಖ ವೃಕೋಪದರ | ಸುಖ ತೀರ್ಥರಗುರು 4

ಹೇಮೋದರಪಿತ | ಶಾಮಸುಂದರನ ಪ್ರೀತ

ಪ್ರೇಮದ ಸುತ | ಸುತ್ರಾಮನಮಿತ ಗುರು 5

***