ಮೆದುಳಿಗೆ ಕಸರತ್ತು
ಕೆಳಗೆ ನೀಡಿದ ಅಂಕಿತನಾಮಗಳನ್ನು ಹೊಂದಿರುವ ಹರಿದಾಸಿಯರ ಪೂರ್ವನಾಮಗಳು ತಿಳಿಸಿ
ಗುರುಪ್ರಸನ್ನವೇಂಕಟವಿಠಲ
ಕಪಿಲ, ಕಪಿಲನಾಮಕ
ಆನಂದಮಯವಿಠಲ
ಶ್ರೀರಾಮ
ಮಂಗಳಾತ್ಮಕ ರಾಮವಿಠಲ
ವೇಣುವೆಂಕಟರನ್ನ
ಹರಿತ್ರಿವಿಕ್ರಮವ್ಯಾಸವಿಠಲ
ಶ್ರೀ ಮುದ್ದುಕೃಷ್ಣ
ಯಶೋದೇಶಕೃಷ್ಣ
ಪಾಂಡುರಂಗವಿಠಲ
ಉತ್ತರಗಳು -: --
ಗುರುಪ್ರಸನ್ನವೇಂಕಟವಿಠಲ - ಹರಿದಾಸಿ ತಾಯಿ ನಾಮಗಿರಿಯಮ್ಮ
ಕಪಿಲ, ಕಪಿಲನಾಮಕ - ಹರಿದಾಸಿ . ತಾಯಿ ದೊಡ್ಡಿ ಸುಧಾಬಾಯಿ.
ಆನಂದಮಯವಿಠಲ - ಹರಿದಾಸಿ ತಾಯಿ ಕಮಲಾಬಾಯಿ
ಶ್ರೀರಾಮ - ಹರಿದಾಸಿ ತಾಯಿ ಸರೋಜಾಬಾಯಿ
ಮಂಗಳಾತ್ಮಕ ರಾಮವಿಠಲ - ಹರಿದಾಸಿ ತಾಯಿ ಸುಂದರಾಬಾಯಿ ಚೆಂಜಿ
ವೇಣುವೆಂಕಟರನ್ನ - ಹರಿದಾಸಿ ತಾಯಿ ಕಮಲಮ್ಮ ಭಟವರ್ತಿ
ಹರಿತ್ರಿವಿಕ್ರಮವ್ಯಾಸವಿಠಲ - ಹರಿದಾಸಿ ತಾಯಿ ರಮಾಬಾಯಿ
ಶ್ರೀ ಮುದ್ದುಕೃಷ್ಣ - ಹರಿದಾಸಿ ತಾಯಿ ರತ್ನಾಬಾಯಿ ಕಳಲೆ
ಯಶೋದೇಶಕೃಷ್ಣ - ಹರಿದಾಸಿ ತಾಯಿ ಯಶೋದಮ್ಮ ಉಡುಪಿ
ಪಾಂಡುರಂಗವಿಠಲ - ಹರಿದಾಸಿ ತಾಯಿ ಪ್ರಯಾಗವ್ವ ( ಭಾಗಮ್ಮ)
by smt. Padma Sirish
ಜೈ ವಿಜಯರಾಯ
ನಾದನೀರಾಜನದಿಂ ದಾಸಸುರಭಿ 🙏🏽
***
ಅರ್ಥಗಳನ್ನು ತಿಳಿಸಿ...
1. ಗುಡಾಕೇಶ -
2. ಗುಂಡಕ್ರಿಯೆ -
3. ಪರಾಕು -
4. ಮತ್ತಿಮರ -
5. ವಿಯದ್ಭೂಮಿಪತಿಜಾಮಾತ -
6. ಶಿರೀಶ -
7. ಕ್ಷೀಣದೈವ -
8. ಕದುವು -
9. ಭೋಗ -
10. ಚಳಕಿ -
ಉತ್ತರಗಳು
1. ಗುಡಾಕೇಶ - ಗುಡಾಕಾ ಎಂದರೆ ಸಂಸ್ಕೃತದಲ್ಲಿ ಆಲಸ್ಯ ಮತ್ತು ನಿದ್ರೆ ಎನ್ನುವ ಅರ್ಥಗಳಿದ್ದವೆ. ನಿದ್ರೆಯನ್ನು ಗೆದ್ದ ಅರ್ಜುನನು ಗುಡಾಕೇಶನೆಂದು ಕರೆಸಿಕೊಂಡನು.
2. ಗುಂಡಕ್ರಿಯೆ - ಪುಡಿಮಾಡು. ಕುಟ್ಟಿಹಾಕು, ವಾದಿಗಳ ವಾದಗಳನ್ನು ಪುಡಿಮಾಡಿ ಶ್ರೀಮದಾಚಾರ್ಯರ ತತ್ವವನ್ನು ಸ್ಥಾಪನೆ ಮಾಡಿದ ಶ್ರೀ ಭಾವಿಸಮೀರ ಶ್ರೀಮದ್ವಾದಿರಾಜಗುರುಸಾರ್ವಭೌಮರ ಅದ್ಭುತವಾದ ಗ್ರಂಥ - ಗುಂಡಕ್ರಿಯೆ. ಅಲ್ಲದೆ ಗುಂಡಕ್ರಿಯೆ ಎಂಬುದು ಕರ್ಣಾಟಕ ಸಂಗೀತದಲ್ಲಿನ ಒಂದು ಶ್ರೇಷ್ಠರಾಗವೂ ಹೌದು. ಈಗಿನಕಾಲದಲ್ಲಿ ಅದನ್ನು ಯಾರೂ ಬಳಸುತ್ತಿಲ್ಲವೆಂಬುದು ಶೋಚನೀಯ.
3. ಪರಾಕು - ಬಹುಪರಾಕ್ ಅಂತ ಅಂತಿವಲ್ವಾ - ಆ ಸಂದರ್ಭಕ್ಕೆ ಸ್ತುತಿಸುವುದು, ಹೊಗಳುವುದು ಎಂದರ್ಥ , ಪರಾಕು ಮಾಡದೆ - ನಿರ್ಲಕ್ಷ್ಯಮಾಡದೆ, ಉದಾಸೀನ ಮಾಡದೆ, ಗಮನವಿಡು ಎಂದರ್ಥ. ಭಕ್ತರ ಬಿನ್ನಹ ಪರಾಕು - ಇದರಲ್ಲಿ ಬಂದಂತೆ - ಮನ್ನಿಸು ಹೀಗೆಲ್ಲ ಆಯಾ ಸಂದರ್ಭವನ್ನು ಹಿಡಿದು ಅರ್ಥಗಳಿವೆ.
4. ಮತ್ತಿಮರ - ಸಾಲವೃಕ್ಷ, ಅರ್ಜುನವೃಕ್ಷ
5. ವಿಯದ್ಭೂಮಿಪತಿಜಾಮಾತ - ವಿಯನ್ಮಂಡಲ - ಆಕಾಶಮಂಡಲ - ವಿಯದ್ಭೂಮಿಪತಿ - ಆಕಾಶ ಎಂಬ ಹೆಸರುಳ್ಳ ಭೂಪತಿಗೆ ಅರ್ಥಾತೆ ಆಕಾಶರಾಜನ ಅಳಿಯ - ವೆಂಕಪ್ಪ.
6. ಶಿರೀಶ - ಶಿರಿ - ಲಕ್ಷ್ಮೀದೇವಿಯರು,ಆಕೆಯ ಈಶ- ಒಡೆಯ - ಪರಮಾತ್ಮ - ಮತ್ತೊಂದು ಅರ್ಥ ರುದ್ರದೇವರಿಗೆ ಇಷ್ಟವಾದ ಒಂದು ಹೂವಿನ ಹೆಸರೂ ಸಹ ಶಿರೀಶಪುಷ್ಪ. ಈ ಹೂವು ತುಂಬಾ ಸುನ್ನಿತವಾಗಿದ್ದು, ಮುಟ್ಟಿದರೆ ಮುರಿದುಹೋಗುವಂತಿರುತ್ತದೆ.
7. ಕ್ಷೀಣದೈವ - ಕ್ಷೀಣಿಸು, ಶಕ್ತಿಯಿಲ್ಲದಿರುವುದು - ಕ್ಷೀಣದೈವ - ಶಕ್ತಿಯಿಲ್ಲದ ದೈವಗಳು, ಕ್ಷುದ್ರದೇವತೆಗಳು.
8. ಕದುವು - ಕೆಸರು, ಒಂದುರೀತಿಯ ಇಕ್ಕಟ್ಟಿರುವ ತಗ್ಗು.
9. ಭೋಗ - ಹಾವು(ಭೋಗಿ ಶಯನ - ಹಾವಿನಮೇಲೆ ಮಲಗಿದ್ದ- ಶೇಷಶಾಯಿಯಾದ ಪರಮಾತ್ಮ), ಭೋಗಿಸುವುದು, ಅನುಭವಿಸುವುದು
10. ಚಳಕಿ - ತೋಳಿಗೆ ಹಾಕಿಕೊಳ್ಳುವ ಆಭರಣ, ತೋಳುಬಳೆ
ಪ್ರಶ್ನೆ :
ಪ್ರಯಾಗ ತ್ರೀವೇಣಿ ಸಂಗಮದಲ್ಲಿ ವೇಣಿ ದಾನ ಮಾಡಿದ ದೇವಿ ಯಾರು ? ಎಷ್ಟು ಅಂಗುಳ ದಾನ ಮಾಡಿದರು ? ಅಲ್ಲಿ ಇದ್ದ ಬ್ರಾಹ್ಮಣ ದಂಪತಿಗಳಿಗೇ ರತ್ನ ಗಳು ತುಂಬಿದ ಮರದ ಬಾಗಿಣ ಗಳು ಕೊಟ್ಟವರ್ಯಾರು ?
ಬರೇ ರತ್ನಗಲು ಅಲ್ಲಾ ನವರತ್ನ ಗಳು ತುಂಬಿದ ಮರದ ಬಾಗಿನ.
ಉತ್ತರ
ಸೀತಾದೇವಿ ನವರತ್ಮ ಗಳು ತುಂಬಿ ಬ್ರಾಹ್ಮಣ ದಂಪತಿಗಳಿಗೆ ಮರದ ಭಾಗಿನ ಕೊಟ್ಟಳು . ತ್ರೀವೇಣಿ ಯಲ್ಲಿ ತನ್ನ ಹೆರಳಿನ 3 ಅಂಗುಳ ತುದಿಯನ್ನು ಕತ್ತರಿಸಿ ನವರತ್ನ ಸಮೇತರಾಗಿ ವೇಣಿಗೆ ದಾನಮಾಡಿದಳು .
by smt. Padma Sirish
ಜೈ ವಿಜಯರಾಯ
ನಾದನೀರಾಜನದಿಂ ದಾಸಸುರಭಿ 🙏🏽
***
ಹರಿದಾಸರ- ಅಂಕಿತನಾಮಗಳನ್ನು. ತಿಳಿಸಿ
1. ಶ್ರೀ ವಿಠೋಬಾಚಾರ್ಯ ವೈದ್ಯ
2. ಶ್ರೀ ಚಿಟ್ಟೂರು ಶ್ರೀನಿವಾಸರಾಯರು
3. ಶ್ರೀ ಭೀಮರಾವ್ ರಾಘವೇಂದ್ರರಾವ್ ಕುಲಕರ್ಣಿ
4. ಶ್ರೀ ದೇವೀದಾಸ
5. ಶ್ರೀ ಕೊಡಗೇಹಳ್ಳಿ ನರಸಪ್ಪನವರು
6. ಹರಿದಾಸಿ. ತಾಯಿ ಕಂದಿ ಪದ್ಮಾವತೀಬಾಯಿ
7. ಶ್ರೀ ಸಂತೆಬೆನ್ನೂರು ರಾಮಾಚಾರ್ಯರು
8. ಶ್ರೀ ಮದ್ದಿಕೇರಿ ಭೀಮಸೇನರಾಯರು
9. ಶ್ರೀ ಕುಂಭಕೋಣದ ವೆಂಕಟದಾಸರು
10. ಹರಿದಾಸಿ. ತಾಯಿ ನಂಜನಗೂಡು ರಂಗಮ್ಮ
ಉತ್ತರ
1. ಶ್ರೀ ವಿಠೋಬಾಚಾರ್ಯ ವೈದ್ಯ - ವಿಠಲೇಶ
2. ಶ್ರೀ ಚಿಟ್ಟೂರು ಶ್ರೀನಿವಾಸರಾಯರು - ಶ್ರೀಶಕೇಶವ
3. ಶ್ರೀ ಭೀಮರಾವ್ ರಾಘವೇಂದ್ರರಾವ್ ಕುಲಕರ್ಣಿ - ಐಹೊಳೆ ವೆಂಕಟ
4. ಶ್ರೀ ದೇವೀದಾಸ - ಗುರುಮಧ್ವಪತಿಕೃಷ್ಣ
5. ಶ್ರೀ ಕೊಡಗೇಹಳ್ಳಿ ನರಸಪ್ಪನವರು - ಆನಂದಪೂರ್ಣವಿಠಲ
6. ಹರಿದಾಸಿ ತಾಯಿ ಕಂದಿ ಪದ್ಮಾವತೀಬಾಯಿ - ವೆಂಕಟರಮಣ
7. ಶ್ರೀ ಸಂತೆಬೆನ್ನೂರು ರಾಮಾಚಾರ್ಯರು - ಕಮಲಾಪತಿವಿಠಲ
8. ಶ್ರೀ ಮದ್ದಿಕೇರಿ ಭೀಮಸೇನರಾಯರು - ಶ್ರೀ ಸುಖದಸುಂದರವಿಠಲ
9. ಶ್ರೀ ಕುಂಭಕೋಣದ ವೆಂಕಟದಾಸರು - ಪ್ರಸನ್ನವೇಂಕಟವಿಠಲ
10. ಹರಿದಾಸಿ ತಾಯಿ ನಂಜನಗೂಡು ರಂಗಮ್ಮ - ಬಾಲಕೃಷ್ಣ
ಈ ಕೆಳಗಡೆ ಉಲ್ಲೇಖಿಸಿದ ಅಂಕಿತನಾಮವನ್ನು ಹೊಂದಿರುವ ದಾಸರ ಪೂರ್ವನಾಮಗಳು ತಿಳಿಸಿ
1. ಕರಿಗಿರೀಶ -
2. ತಂದೆಶ್ರೀಪತಿವಿಠಲ -
3. ಇಭವರದವಿಠಲ -
4. ನಡುಪುರೇಶ -
5. ಹೊನೂರೇಶ -
6. ತಂದೆಗೋಪಾಲವಿಠಲ -
7. ತಂದೆಸಿರಿವಿಠಲ
8. ಬಿಂದುಮಾಧವವಿಠಲ -
9. ಕಮಲನಾಭವಿಠಲ -
10. ನಾಗೇಶಶಯನ -
ಉತ್ತರಗಳು
1. ಕರಿಗಿರೀಶ - ಶ್ರೀ ವರವಣಿ ರಾಮರಾಯರು
2. ತಂದೆಶ್ರೀಪತಿವಿಠಲ - ಶ್ರೀ ಹರಪನಹಳ್ಳಿ ವೆಂಕಟದಾಸರು
3. ಇಭವರದವಿಠಲ - ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರು
4. ನಡುಪುರೇಶ - ಶ್ರೀ ರಾಘವಾರ್ಯ ಒಡೆಯರು
5. ಹೊನೂರೇಶ - ತಾಯಿ ತುರಡಗಿ ತಿಮ್ಮಮ್ಮನವರು
6. ತಂದೆಗೋಪಾಲವಿಠಲ - ಶ್ರೀ ರಂಗಪ್ಪದಾಸರು
7. ತಂದೆಸಿರಿವಿಠಲ - ಹರಿದಾಸಿ ತಾಯಿ ಸರೋಜಾಬಾಯಿ ಬೆಳ್ಳಿಗುಂಡು
8. ಬಿಂದುಮಾಧವವಿಠಲ - ಹರಿದಾಸಿ ರುಕ್ಮಿಣೀಬಾಯಿ ನರಸಾಪುರ
9. ಕಮಲನಾಭವಿಠಲ - ಹರಿದಾಸಿ ತಾಯಿ ನಿಡಗುರಕಿ ಜಿವೋಬಾಯಿ
10. ನಾಗೇಶಶಯನ - ಹರಿದಾಸಿ ತಾಯಿ ಪದ್ಮಾಬಾಯಿ ಕೋಲಾರ್
by smt. Padma Sirish
ಜೈ ವಿಜಯರಾಯ
ನಾದನೀರಾಜನದಿಂ ದಾಸಸುರಭಿ 🙏🏽
***
1. ಮುಗುಟಖಾನ ಹುಬ್ಬಳ್ಳಿಯ ನರಸಿಂಹ ದೇವರನ್ನು 12 ವರ್ಷಗಳ ಕಾಲ ಪೂಜಿಸಿದ ದಾಸರು?
2. ಭವಾನುಭವಸಾರ ಎನ್ನುವ ದೀರ್ಘಕೃತಿಯನ್ನು ರಚಿಸಿದವರು?
3. ಶ್ರೀಪೂರ್ಣಬೋಧ ಗುರುತೀರ್ಥ ಪಯೋಽಬ್ಧಿ ಪಾರಾ
ಕಾಮಾರಿ ಮಾಽಕ್ಷ ವಿಷಮಾಕ್ಷ-ಶಿರಃ ಸ್ಪೃಶಂತೀ ಶ್ರೀಮದಪ್ಪಣಾಚಾರ್ಯ ವಿರಚಿತ ಈ ಸ್ತೋತ್ರವನ್ನು ಕನ್ನಡೀಕರಿಸಿದವರು?
4. ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಚರಿತ್ರೆಯನ್ನು ಬುರ್ರಕಥೆ ಎನ್ನುವ ಆಂಧ್ರದ ಜನಪದ ಶೈಲಿಯಲ್ಲಿ ರಚಿಸಿದವರು?
5. ಕದರಮಂಡಲಗಿ ಪ್ರಾಣದೇವರ ಉತ್ಸವಗಳಲ್ಲಿ ವಿಶೇಷವಾದ ತೆಪ್ಪೋತ್ಸವದ ಕುರಿತು ಸ್ತುತಿಮಾಡಿದವರು?
6. ವಡ್ಡಿ - ಪದದ ಅರ್ಥ
7. ಪಸುಧಿಪಾರ್ದನ ಎಂದು ಯಾರಿಗೆ ಹೆಸರು?
8. ಜಗತ್ರಾಣ - ಪದದಲ್ಲಿ ತ್ರಾಣ ಪದದ ಅರ್ಥ?
9. ಕುಲಿಶಧರ ಯಾರು?
10. ಗಂಗಾದೇವಿಯರನ್ನು ತ್ರಿಪಥಗಾಮಿನಿ, ತ್ರಿಪಥಗೆ ಎಂದು ಏಕೆ ಕರೆದರು?
ಉತ್ತರಗಳು
1. ಮುಗುಟಖಾನ ಹುಬ್ಬಳ್ಳಿಯ ನರಸಿಂಹ ದೇವರನ್ನು 12 ವರ್ಷಗಳ ಕಾಲ ಪೂಜಿಸಿದ ದಾಸರು?
ಉತ್ತರ - ಪ್ರಾತಃಸ್ಮರಣೀಯರು ಶ್ರೀ ತಿರುಪತಿ ಪಾಂಡುರಂಗಿ ಹುಚ್ಚಾಚಾರ್ಯರು
2. ಭವಾನುಭವಸಾರ ಎನ್ನುವ ದೀರ್ಘಕೃತಿಯನ್ನು ರಚಿಸಿದವರು?
ಉತ್ತರ - ಶ್ರೀ ದಾಸರ ಲಕ್ಷ್ಮೀನಾರಾಯಣ ದಾಸರು (ಶ್ರೀಕಾಂತ ಅಂಕಿತ)
151 ನುಡಿಗಳುಳ್ಳ ಅದ್ಫುತವಾದ ದೀರ್ಘಕೃತಿ. ಶ್ರೀ ಕರಿಗಿರಿಕ್ಷೇತ್ರಸ್ಥ ನರಸಿಂಹದೇವರನ್ನು ಸ್ತುತಿಸುವ ಮಂಗಳಾಚರಣೆಯ ಪದ್ಯದಿಂದ ಮೊದಲುಗೊಂಡು ಪರಂಪರಾಗತ ಗುರುಗಳಾದ ಶ್ರೀ ವಿಜಯಪ್ರಭುಗಳನ್ನು ಸ್ತುತಿಸಿ, ಕೊನೆಯನುಡಿಯಲ್ಲಿ ತಾವು ಯಾರ ಪುತ್ರರು ಯಾರ ಅನುಗ್ರಹದಿಂದ ಈ ಕೃತಿರಚನೆಯಾಯಿತು ಎಂದು ತಿಳಿಸಿ ಮಂಗಳವನ್ನು ಪಾಡುತ್ತಾರೆ ಶ್ರೀ ದಾಸರು. ಈ ಕೃತಿ ಭಾಮಿನಿಷಟ್ಪದಿಯಲ್ಲಿ ರಚಿತವಾಗಿದೆ.
3. ಶ್ರೀಪೂರ್ಣಬೋಧ ಗುರುತೀರ್ಥ ಪಯೋಽಬ್ಧಿ ಪಾರಾ
ಕಾಮಾರಿ ಮಾಽಕ್ಷ ವಿಷಮಾಕ್ಷ-ಶಿರಃ ಸ್ಪೃಶಂತೀ ಶ್ರೀಮದಪ್ಪಣಾಚಾರ್ಯ ವಿರಚಿತ ಈ ಸ್ತೋತ್ರವನ್ನು ಕನ್ನಡೀಕರಿಸಿದವರು?
ಉತ್ತರ - ಶ್ರೀ ಸಿರಿವಿಠಲರು(ಶ್ರೀ ಬೆಳ್ಳಿ ಕಲಮದಾನಿ ನಾರಾಯಣರಾಯರು)
4. ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಚರಿತ್ರೆಯನ್ನು ಬುರ್ರಕಥೆ ಎನ್ನುವ ಆಂಧ್ರದ ಜನಪದ ಪ್ರಕಾರದಲ್ಲಿ ರಚಿಸಿದವರು?
ಉತ್ತರ - ಮುರಳೀಧರ ಅಂಕಿತಸ್ಥರಾದ ತಾಯಿ ಪಳ್ಳೆ ಕೃಷ್ಣವೇಣಮ್ಮನವರು
5. ಕದರಮಂಡಲಗಿ ಪ್ರಾಣದೇವರ ಉತ್ಸವಗಳಲ್ಲಿ ವಿಶೇಷವಾದ ತೆಪ್ಪೋತ್ಸವದ ಕುರಿತು ಸ್ತುತಿಮಾಡಿದವರು?
ಉತ್ತರ - ಗೋಪಾಲಕೃಷ್ಣವಿಠಲಾಂಕಿತಸ್ಥರಾದ ತಾಯಿ ಅಂಬಾಬಾಯಿನವರು.
6. ವಡ್ಡಿ - ಪದದ ಅರ್ಥ
ಉತ್ತರ : ಔಢ್ರದೇಶ. ಒಡಿಸ್ಸಾ ರಾಜ್ಯವನ್ನು ವಡ್ಡಿ ಎಂದು ಕಲಿಯುತ್ತಾರೆ
ಕೂಸು ಕಂಡೀವಮ್ಮ ಅಮ್ಮಾ ನಿಮ್ಮ ಕೂಸುಕಂಡೀವಮ್ಮ ಎನ್ನುವ ಶ್ರೀಮತ್ಪುರಂದರದಾಸಾರ್ಯರ ಪದದಲ್ಲಿ ಈ ಪ್ರಯೋಗ ಬರುತ್ತದೆ.
ವಡ್ಡಿ ಜಗನ್ನಾಥ ಗಿಡ್ಡಾಗಿದ್ದಾನೆ. - ಪೂರಿಯ ಜಗನ್ನಾಥನನ್ನ ಇಲ್ಲಿ ವಡ್ಡಿ ಜಗನ್ನಾಥ ಎಂದಿದ್ದಾರೆ.
7. ಪಸುಧಿಪಾರ್ದನ ಎಂದು ಯಾರಿಗೆ ಹೆಸರು?
ಉತ್ತರ : ವಸುಧಿಪ + ಅರ್ದನ - ದುಷ್ಟರಾಜರುಗಳನ್ನು ಕೊಂದು ಹಾಕಿದ ಶ್ರೀ ಪರಶುರಾಮದೇವರನ್ನು ವಸುಧಿಪಾರ್ದನ ಎಂದು ದಾಸರುಗಳು ಸ್ತುತಿಸಿದ್ದು ದಶಾವತಾರ ಪದಗಳಲ್ಲಿ ಕಾಣುತ್ತೇವೆ.
8. ಜಗತ್ರಾಣ - ಪದದಲ್ಲಿ ತ್ರಾಣ ಪದದ ಅರ್ಥ?
ಉತ್ತರ : ಬಲ ,ಶಕ್ತಿ. ಜಯಜಯ ಜಗತ್ರಾಣ - ಎಂದು ಶ್ರೀ ಮುಖ್ಯಪ್ರಾಣದೇವರನ್ನು ಸ್ತುತಿಸಿದ್ದನ್ನು ಕಾಣುತ್ತೇವೆ.
9. ಕುಲಿಶಧರ ಯಾರು?
ಉತ್ತರ : ಕುಲಿಶ - ವಜ್ರಾಯುಧ. ವಜ್ರಾಯುಧವನ್ನು ಧರಿಸಿದವರು ಇಂದ್ರದೇವರು ವಾದಿಗಳೆಂಬ ಪರ್ವತಕ್ಕೆ ಕುಲಿಶದಂತೆ -ವಾದಿಗಳೆಂಬ ಪರ್ವತವನ್ನು ಸೀಳಿಹಾಕುವ ವಜ್ರಾಯುಧದಂತೆ ಎಂದು ನಮ್ಮ ಪರಂಪರೆಯ ಯತಿಕುಲವರ್ಯರನ್ನು ಹೊಗಳಿದ್ದು ಕಾಣುತ್ತೇವೆ
10. ಗಂಗಾದೇವಿಯರನ್ನು ತ್ರಿಪಥಗಾಮಿನಿ, ತ್ರಿಪಥಗೆ ಎಂದು ಏಕೆ ಕರೆದರು?
ಉತ್ತರ : ಪರಮಾತ್ಮನ ಅಂಗುಷ್ಟದಿಂದ ಹುಟ್ಟಿಬಂದ ತಾಯಿ ಗಂಗೆ ಮೂರೂಲೋಕದಲ್ಲಿ ಪ್ರವಹಿಸುವದರಿಂದ ಗಂಗಾದೇವಿಯರನ್ನು ತ್ರಿಪಥಗ, ತ್ರಿಪಥಗಾಮಿನಿ ಎಂದು ಕರೆಯುತ್ತಾರೆ
ಪರಮಾತ್ಮನ ಅಂಗುಷ್ಟದಿಂದ ಹುಟ್ಟಿದ ಕಾರಣಕ್ಕೆ ಸ್ವರ್ಗಲೋಕದಲ್ಲಿ, ನಂತರ ಭಗೀರಥನ ಪ್ರಯತ್ನದಿಂದ ಭೂಲೋಕದಲ್ಲಿ, ಪಾತಾಳಲೋಕದಲ್ಲಿ ಪ್ರವಹಿಸುವವಳು.
by smt. Padma Sirish
ಜೈ ವಿಜಯರಾಯ
ನಾದನೀರಾಜನದಿಂ ದಾಸಸುರಭಿ 🙏🏽
**
1. ಶ್ರೀ ವಿಜಯಪ್ರಭುಗಳು ತಿರುಪತಿ ವೆಂಕಪ್ಪನ ದರ್ಶನದ ನಂತರ ರಚಿಸಿದ ನಿಂದಾಸ್ತುತಿ ಯಾವುದು?.
2. ಶ್ರೀ ಕನಕದಾಸಾರ್ಯರ ಹರಿಭಕ್ತಿಸಾರ ರಚಿತವಾದಧ್ಧು ಯಾವ ಛಂದಸ್ಸಿನಲ್ಲಿ? .
3. ಪ್ರಾಕೃತ ವಾಯುಸ್ತುತಿ ಎಂದು ಕರಿಯಲ್ಪಡುವುದು?.
4. ಶ್ರೀ ನರಹರಿತೀರ್ಥರು ರಾಜ್ಯವಾಳಿದ್ದು ಎಷ್ಟು ವರ್ಷಗಳು?.
5. ತಾಯಿ ತುರಡಗಿತಿಮ್ಮಮ್ಮನವರ ಕಾಲಮಾನ
6. ಕಾಶಿಯಲ್ಲಿ ಗಂಗೆಯಲ್ಲಿ ಮಿಂದಾಗ ಶಾಪವನ್ನು ಕಳೆದುಕೊಂಡವರು ಯಾರು?.
7 . ಶ್ರೀ ಏರಿ ಶೇಷಾಚಾರ್ಯರು ದೇಹ ತ್ಯಾಗ ಮಾಡಿದ ಊರು?.
8. ವಿಶ್ವಪಾವನಮಠದ ಸ್ಥಾಪಕರು?.
9. ಚಂದ್ರಿಕಾ ಮುದ್ರಣಾಲಯದಿಂದ ಹೊರಬಂದ ಸಾಹಿತ್ಯ.
10. ಜಾಬಾಲಿ ಋಷಿಗಳ ಅಂಶಜರೆಂದು ಪ್ರಸಿದ್ಧರಾದವರು?.
**
ಉತ್ತರಗಳು
1. ಶ್ರೀ ವಿಜಯಪ್ರಭುಗಳು ತಿರುಪತಿ ವೆಂಕಪ್ಪನ ದರ್ಶನದ ನಂತರ ರಚಿಸಿದ ನಿಂದಾಸ್ತುತಿ.
ತೊಳಸದಕ್ಕಿಯ ತಿಂಬ
2. ಶ್ರೀ ಕನಕದಾಸಾರ್ಯರ ಹರಿಭಕ್ತಿಸಾರ ರಚಿತವಾದ ಛಂದಸ್ಸು .
ಭಾಮಿನೀ ಷಟ್ಪದಿ
3. ಪ್ರಾಕೃತ ವಾಯುಸ್ತುತಿ ಎಂದು ಕರಿಯಲ್ಪಡುವುದು.
ಶ್ರೀ ಶ್ರೀಪಾದರಾಜ ಗುರುಸಾರ್ವಭೌಮ ವಿರಚಿತ ಶ್ರೀ ಮಧ್ವನಾಮ
4. ಶ್ರೀ ನರಹರಿತೀರ್ಥರು ರಾಜ್ಯವಾಳಿದ ವರ್ಷಗಳು.
12 ವರ್ಷಗಳ ಕಾಲ
5. ತಾಯಿ ತುರಡಗಿತಿಮ್ಮಮ್ಮನವರ ಕಾಲಮಾನ
1728 - 1813
6. ಕಾಶಿಯಲ್ಲಿ ಗಂಗೆಯಲ್ಲಿ ಮಿಂದಾಗ ಶಾಪವನ್ನು ಕಳೆದುಕೊಂಡವರು.
ಶ್ರೀ ರಾಘವಾರ್ಯ ಒಡೆಯರು ಸರ್ಪದಶಾಪ
7 . ಶ್ರೀ ಏರಿ ಶೇಷಾಚಾರ್ಯರು ದೇಹ ತ್ಯಾಗ ಮಾಡಿದ ಊರು.
ಸೂಲಿಬೆಲೆ
8. ವಿಶ್ವಪಾವನಮಠದ ಸ್ಥಾಪಕರು.
ಶ್ರೀಮಚ್ಚಂದ್ರಿಕಾಚಾರ್ಯರು
9. ಚಂದ್ರಿಕಾ ಮುದ್ರಣಾಲಯದಿಂದ ಹೊರಬಂದ ಸಾಹಿತ್ಯ.
ಶ್ರೀ ವಿದ್ಯಾಪ್ರಸನ್ನತೀರ್ಥರ ಕೃತಿಗಳು
10. ಜಾಬಾಲಿ ಋಷಿಗಳ ಅಂಶಜರೆಂದು ಪ್ರಸಿದ್ಧರಾದವರು.
ಶ್ರೀ ಕಾಶೀದಾಸರು
by smt. Padma Sirish
ಜೈ ವಿಜಯರಾಯ
ನಾದನೀರಾಜನದಿಂ ದಾಸಸುರಭಿ 🙏🏽
***