Showing posts with label ನಾಮ ಮುದ್ರೆಯ ಧರಿಸೋ ಶ್ರೀಹರಿಯ ದಿವ್ಯ uragadrivasa vittala. Show all posts
Showing posts with label ನಾಮ ಮುದ್ರೆಯ ಧರಿಸೋ ಶ್ರೀಹರಿಯ ದಿವ್ಯ uragadrivasa vittala. Show all posts

Monday, 2 August 2021

ನಾಮ ಮುದ್ರೆಯ ಧರಿಸೋ ಶ್ರೀಹರಿಯ ದಿವ್ಯ ankita uragadrivasa vittala

ನಾಮ ಮುದ್ರೆಯ ಧರಿಸೋ ಶ್ರೀಹರಿಯ ದಿವ್ಯ ಪ

ನಾಮ ಮುದ್ರೆಯ ಧರಿಸೆ ಆ ಯಮನಾಳುಗಳ

ಭೀಮವಿಕ್ರಮದ ಭಯ ಲೇಶವಿಲ್ಲವೋ ಅ.ಪ


ಚಕ್ರದೊಳು ಹೀಂಕಾರನಾಮಕನಾಗಿ

ನಕ್ರವೈರಿಯ ಕಾಯ್ವ ತಮವನ್ನು ಹರಿಸಿ

ವಿಕ್ರಮ ಕೃಧ್ಧೋಲ್ಕ ತಮಲೋಕದೊಳು ಇದ್ದು

ಚಕ್ರಧರಿಸದ ಜೀವರ ಕ್ರೂರತನದಲಿ ಶಿಕ್ಷಿಪಾ 1


ಶಂಖದೊಳು ಪ್ರತೀಹಾರನಾಮಕ ಹರಿ ಇರುವ

ಶಂಕಿಸಬೇಡವೊ ಮೋಹವ ಹರಿಸುವ

ಶಂಕಿಸುವವನ ಪಾಪಪಂಕದೊಳಿಟ್ಟು

ಮಂಕುಕವಿಸಿ ಮಹೋಲ್ಕ ಶಿಕ್ಷಿಪನಯ್ಯ 2


ಗದೆಯೊಳು ನಿಧನನಾಮಕ ಹರಿಯು ತಾನಿದ್ದೂ

ಒದಗುವ ಮನಮೋಹವನ್ನು ಹರಿಸುವ

ಮುದದಿ ಮರೆಯುವವರನಾ ವೀರೋಲ್ಕ ತಾ

ಸದೆ ಬಡಿಯುವನು ತನ್ನ ಗದೆಯಿಂದಲಿ ನಿತ್ಯ 3


ಪದುಮನೊಳು ಪ್ರಸ್ತಾವನಾಮದಿ

ಮುದದಿ ಭಕ್ತರ ಅಂಧತಾಮಿಶ್ರವ ಹರಿಸುವ

ಪದ್ಮರಹಿತ ಮಾನವರ ದ್ಯುಲ್ಕರೂಪದಿ

ವಧಿಸುವ ತಾಮಿಶ್ರ ನರಕದೊಳು ನಿತ್ಯ 4


ನಾರಾಯಣ ಮುದ್ರೆಯೊಳು ಉದ್ಗೀಥನು

ಹರಿಭಕುತರ ಅಂಧತಾಮಿಶ್ರ ಕಳೆವನು

ದುರುಳ ಕಲ್ಯಾದ್ಯರ ಸಹಸ್ರೋಲ್ಕ ರೂಪದಿ

ಕ್ರೂರತನದಿ ಅಂಧಂತಮದೊಳಿಡುವನು 5


ನೇಮದಿ ದ್ವಾದಶ ಊಧ್ರ್ವಪುಂಡ್ರಗಳು

ಕಮಲ ತುಲಸಿಮಣಿಮಾಲೆಗಳ ಕೊರಳೊಳು

ವಿಮಲ ಮನಸಿನಿಂದ ಧರಿಸುವ ಮನುಜರಿಗೆ

ಯಮನಾಳುಗಳ ಭಯ ಲೇಶವಿಲ್ಲೆಂದಿಗೂ 6


ಪಂಚರೂಪಾತ್ಮಕ ಹರಿಯನ್ನೆ ನೆನೆಯುತ

ಪಂಚ ಪಂಚ ಕರಣಗಳ ಕಾರ್ಯ ಒಪ್ಪಿಸೇ

ಪಂಚನರಕಬಾಧೆ ಕಿಂಚಿತ್ತ್ತಾದರು ಇಲ್ಲ

ಪಂಚಾನನನುತ ಶ್ರೀ ವೇಂಕಟೇಶನ ದಿವÀ್ಯ7

****