Showing posts with label ಎಂದೆಂದೂ ನಿನ್ನ ಪಾದವ ನಂಬಿದೆ others. Show all posts
Showing posts with label ಎಂದೆಂದೂ ನಿನ್ನ ಪಾದವ ನಂಬಿದೆ others. Show all posts

Friday, 27 December 2019

ಎಂದೆಂದೂ ನಿನ್ನ ಪಾದವ ನಂಬಿದೆ others

ದ್ವಿಜಾವಂತಿ ರಾಗ ಆದಿತಾಳ

ಎಂದೆಂದೂ ನಿನ್ನ ಪಾದವ ನಂಬಿದೆ 
ತಂದೆ ಪಾಲಿಸೋ ಹರಿಯೆ
ಬಂಧನಗಳ ನೀನಿಂದು ಓಡಿಸು ಎನ್ನ 
ಸಿಂಧುರವರದ ಸಿಂಧುಸುತೆಯ ರಮಣ ||ಪ||

ಗಂಗೆ ಕಾವೇರಿಯೊಳು ಅಂಗವ ತೊಳೆದರು ಹೋಗದು ಅಂಗದ ಕಲ್ಮಶವು
ಹಿಂಗದೆ ನಾನಾ ಜಪಗಳು ಮಾಡಿದರು ಈ ಸಂಗವೆಂದಿಗೂ ಹರಿಯದು
ರಂಗನೆ ನೀನು ಸಂಕಲ್ಪಿಸಿದೊಡೆ ಸಂಗ
ಹಿಂಗಿ ಹೋಗುವುದಯ್ಯ ಪಾಪವು ಸಹಿತಲೆ ||೧||

ವ್ರತತಪ ದಾನಗಳಿಂದ ರಾಗದ್ವೇಷ ಗತಿಗೆಟ್ಟು ಪೋಪುದೇನೈ
ಸತಿಸುತರಾಸೆಗಳು ಸುರರ ಪೂಜೆಗಳಿಂದ ಅತಿ ವೃದ್ಧಿಯಾಗುವುವೈ
ಪತಿತಪಾವನ ನಿನ್ನ ಅನುದಿನ ನುತಿಸಲು
ಶಿಥಿಲಗಳಾಗಿ ಇವುಗಳು ತೊಲಗುವವಲ್ಲದೆ ||೨||

ವೈಕುಂಠದರಸ ಎಂಬ ಸಿರಿನರಹರಿಯೆ ಪೋಷಿಸದಿದ್ದರೆ ನೀನು
ಪಾಕಶಾಸನನು ಪಶುಪತಿಯೆ ಮೊದಲಾದ ಲೋಕಪಾಲರು ಪೊರೆವರೆ
ಏಕ ಭಕ್ತಿಯಿಂದ ಏಕ ಚಿತ್ತದೊಳಿರ್ಪೆ
ಲೋಕನಾಥನೆ ನೀ ಲೋಕಿಸಲು ಎನ್ನ ||೩||
*******