ಪುರಂದರದಾಸರು
ರಾಗ ರೇಗುಪ್ತಿ ಝಂಪೆತಾಳ)
ಕೇಳೊ ಕೋಪಿಸಬೇಡ ಹೇಳಿದರೆ ಫಲವಿಲ್ಲ
ಹೇಳಲಂಜುವೆನು ನಿನ್ನ
ಬಾಳಬಳಗಗಳೆಲ್ಲ ಪಾಲಿಸು ಅಭೀಷ್ಟವನು
ವ್ಯಾಳಗಿರಿ ವೆಂಕಟೇಶ ಈಶ ||ಪ||
ತಲೆಹೊಡಕ ಹಿರಿಯ ಮಗ ಧರೆಗೆ ಪೂಜಿತನಲ್ಲ
ಬಲು ಭಂಡ ಕಿರಿಯ ಮಗನು
ಲಲನೆ ಲೋಭಿಗಳ ಮನೆ ನಿಲಿಸಿಹಳು ಸೊಸೆ ತಾನು
ಹೊಲೆಯಕುಲವರಿಯದವಳು ||
ಮಗಳ ಮಾರ್ಗವು ಡೊಂಕು, ಮೈದುನ ಗುರುದ್ರೋಹಿ ಮೊ-
ಮ್ಮಗನು ಬಲು ಚಾಡಿಖೋರ
ಹಗರಣೆಗ ನೀಯೆಂಜಲ್ಹಣ್ಣನು ಮೆದ್ದು ಮೂ-
ಜಗದೊಡೆಯನೆನಿಸಿ ಮೆರೆದೆ ತಿರಿದೆ ||
ಹಲವಂಗದವನೆಂದು ಆಡಲೇತಕೆ ಕುಡುತೆ
ಪಾಲ ಸವಿದುಂಡ ರನ್ನ
ನೆಲೆಗೆ ಸಿಲುಕದ ನೀನು ಪುರಂದರವಿಠಲನೆ
ಸಲಹಿದಾಸನ ಮಾಡಿದೆ ಬಿಡದೆ ||
********
ಕೇಳು ಕೋಪಿಸಬೇಡ ಹೇಳಲಿಕಂಜುವೆ
ಬಾಳು ಬಡತನವ ನಾನು ಪ.
ತಲೆಗೊಯ್ಕ ಹಿರಿಯ ಮಗ ಇಳೆಗೆ ಪೂಜಿತನಲ್ಲಬಲು ಭಂಡ ನಿನ್ನಯ ಕಿರಿಯ ಮಗ ||ಲಲನೆಯು ಸೇರಿದಳು ಬಲು ಲೋಭಿಗಳ ಮನೆಯಹೊಲಕುಲವರಿಯಳು ನಿನ್ನ ಸೊಸೆಯು ರಂಗ 1
ಮಗಳ ಮಾರ್ಗವುಡೊಂಕು | ಮೈದುನ ಗುರುದ್ರೋಹಿಮಗನ ಮಗನು ಚಾಡಿಗಾರಹಗರಣಕೆ ನೀಚರ ಹಣ್ಣು ಮೆದ್ದೆಂಜಲಜಗದೊಡೆಯನೆನಿಸಿಕೊಂಡೆ - ನೀನುಂಡೆ 2
ಲಕ್ಷ್ಮೀಪತಿಯು ಎನಿಸಿಭಿಕ್ಷೆ ಬೇಡಲು ಪೋದೆಪಕ್ಷಿಯ ಪೆಗಲೇರಿ ರಾಜನೆನಿಸಿದೆ ||ಸಾಕ್ಷಾತು ಪುರಂದರವಿಠಲನೆ ನಿನ್ನಗುಣಲಕ್ಷಣ ಪೇಳಲಳವೆ - ಕಳೆವೆ 3
*******