ಥಳಕು ಥಳಕು ಹೊಳೆವೋತನ್ನ ಬೆಳಕು ತುಂಬಿಭವನದೊಳು ಝಳಕು ಝಳಕು ಬಂದ ನಮ್ಮಜಾಣರಂಗನ ನೋಡುವ ಬಾರೆ ಅಂಗನೆ ಪ.
ನೀಲ ಮಾಣಿಕ ರತ್ನದಿವ್ಯನಿಲವುಗನ್ನಡಿ ಹೊಳೆವ ಮಹಲಗಳ ಇಳಿದು ಬಂದ1
ಕೋಟಿ ಕೋಟಿ ಸೂರ್ಯರಂತೆ ಧಾಟತೋರೋ ಅಂಗಳದಿ ದಾಟಿ ದಾಟಿ ಇಳಿದು ಬಂದ 2
ನೂರು ಸೂರ್ಯರ ಬೆಳಕುತೋರುವಂತೆ ದ್ವಾರಗಳನು ವಾರಿಜಾಕ್ಷ ಇಳಿದು ಬಂದ 3
ಮುತ್ತಿನ ತ್ವಾರಣನವರತ್ನ ಹಂದರ ದಾಟಿಚಿತ್ರ ಚಾವಡಿ ಇಳಿದು ಬಂದ 4
ವಜ್ರ ಮಾಣಿಕವು ಬಹಳ ಸಜ್ಜ ತೊರೋ ಅಂಗಳದಿ ನಿರ್ಜರೋತ್ತಮನು ಬಂದ 5
ಪಚ್ಚದ ಪಾವಟಿಗೆ ರತ್ನಹಚ್ಚಿದ ಹೊಸ್ತಿಲವ ದಾಟಿಅಚ್ಯುತಾನಂತ ಬಂದ 6
ನಾಗಶಯನ ತನ್ನ ಮನೆಯ ಬಾಗಿಲ ಮುಂದೊಪ್ಪುತಿರಲು ಭಾಗವತರ ಮ್ಯಾಳದಿಂದ ಬಂದ7
ರುದ್ರಾದಿಗೊಂದ್ಯನ ಮುಂದೆ ಅಧ್ಯಾನ(ಅಧೀನ) ವೆಂಬುವರು ಕೋಟಿಮುದ್ದು ತೋರೋದಮ್ಮ ಸಭೆಯು 8
ಅಲ್ಲೆ ಅಲ್ಲೆ ನಿಂತ ಜನರು ಚಲ್ವರಮೆ ಅರಸನ ಮ್ಯಾಲೆಮಲ್ಲಿಗೆ ಸೂರ್ಯಾಡೋರೆಷ್ಟ 9
***