Showing posts with label ವೆಂಕಟೇಶ ಕಾಯೋ ಕಿಂಕರ jagannatha vittala. Show all posts
Showing posts with label ವೆಂಕಟೇಶ ಕಾಯೋ ಕಿಂಕರ jagannatha vittala. Show all posts

Saturday, 14 December 2019

ವೆಂಕಟೇಶ ಕಾಯೋ ಕಿಂಕರ ankita jagannatha vittala

ಜಗನ್ನಾಥದಾಸರು
ವೆಂಕಟೇಶ ಕಾಯೋ ಕಿಂಕರರವನೆಂದು ಪ

ಪಂಕಜಾಸನ ಶಂಕರರಾರ್ಚಿತ
ಶಂಬಸುದರ್ಶನಾಂಕಿತ ಅ.ಪ.

ವಾಸುದೇವ ನೀನೆ ಶ್ರೀ ಸರಸಿಜಭವ
ವೀಶ ಫಣಿಪ ವಹೇಶ ವಾಸವರಾಶೆ ಪೂರೈಸಿ
ಪೋಷಿಸುವ ಜಗದೀಶ ಜೀವನದ ವಾ
ರಾಶಿಜಾಧಿಪ ಭೇಶ ರವಿ ಸಂಕಾಶ ಕರಿವರಕ್ಲೇಶ ಹಾ 1

ಸ್ವರಮಣ ಭಕುತರ
ಕಾಮಿತಪ್ರದ ಕೈರವದಳಶ್ಯಾಮ ಸುಂದರನೆ
ಹೇಮ ಶೃಂಗೀವರಧಾಮ ದೀನಬಂಧು
ಸನ್ನುತ ಸೋಮಧರ
ಸುತ್ರಾಮ ಮುಖ ಸುರಸ್ತೋಮನಾ 2

ತ್ರಿಗುಣಾತೀತ ನರಮೃಗರೂಪ ನಾನಿನ್ನ
ಪೊಗಳಬಲ್ಲೆನೆ ನಿಗಮವೇದ್ಯನೆ ಜಗನ್ನಾಥ ವಿಠಲ
ಸ್ವಗತಭೇದ ಶೂನ್ಯನೆ ಮುಗಿವೆ ಕರಗಳ ಪನ್ನಗನಗಾಧಿಪ
ಪೊಗರೊಗುವ ನಗೆಮೊಗವ ಸೊಬಗಿನ ಸುಗುಣನೆ 3
*********