ಶ್ರೀ ರಾಯರ ಸ್ತುತಿ
ರಚನೆ. ಶ್ರೀಮತಿ ಗೋದಾವರೀ ಬಾಯಿ ರಂಗಾರಾವ್ ಕುಲಕರ್ಣಿ, ಮುಂಬೈ.
ಅಂಕಿತ. ಸಿರಿನಾರಾಯಣ
ರಾಗ ಧಾನಿ
ತಾಳ. ತ್ರಿ
ಗತಿಗೋತ್ರ ನೀ ಸುಯತೀಂದ್ರ
ಪಥ ತೋರೋ ಶ್ರೀ ರಾಘವೇಂದ್ರ !! ಪಲ್ಲವಿ !!
ಸ್ತುತಿಸಲು ಶ್ರೀ ಹರಿ ದಯಾಸಾಂದ್ರ
ಮತಿ ನೀಡು ಸುತ ಶ್ರೀ ಸುಧೀಂದ್ರ !! ಅನುಪಲ್ಲ !!
ಒಂದೇ ಸುಮನದಿ ನಿನ್ನ ಸ್ಮರಣ
ವಂದಿಸುವರಘ ರಾಶಿ ಹರಣ
ಪೊಂದುವರು ಸಕಲೇಷ್ಟ ಪೂರ್ಣ
ತಂದೆ ಉದ್ಧರಿಸು ಕಂದಳನ !! 1 !!
ಪ್ರತಿದಿನ ಮೃತ್ತಿಕಾ ತೀರ್ಥ ಪಾನ
ಅತಿ ಸುಲಭ ವಿರಜಾ ನದಿ ಸ್ನಾನ
ಯತಿ ಸಾರ್ವಭೌಮ ಗೈದಾನ
ಸುತೆಗೆ ಶ್ರೀಪತಿ ಭಕ್ತಿ ಜ್ಞಾನ !! 2 !!
ವರ ಮಂತ್ರಾಲಯ ತುಂಗಾ ವಾಸ
ಸಿರಿ ನಾರಾಯಣ ಮರುತ ದಾಸ
ಸುರ ಧೇನು ತರು ಭಕ್ತ ಪೋಷ
ಗುರುರಾಜ ಭುವನೈಕ ಭೂಷ !! 3 !!
****