Showing posts with label ಶೋಕವಾಗುವುದು ಯಾತಕೆ ಎಲಾ ಕಾಕುಲಾತೀ ಸಲ್ಲ vijaya vittala. Show all posts
Showing posts with label ಶೋಕವಾಗುವುದು ಯಾತಕೆ ಎಲಾ ಕಾಕುಲಾತೀ ಸಲ್ಲ vijaya vittala. Show all posts

Thursday, 17 October 2019

ಶೋಕವಾಗುವುದು ಯಾತಕೆ ಎಲಾ ಕಾಕುಲಾತೀ ಸಲ್ಲ ankita vijaya vittala

ವಿಜಯದಾಸ
ಶೋಕವಾಗುವುದು ಯಾತಕೆ ಎಲಾ |
ಕಾಕುಲಾತೀ ಸಲ್ಲ ಕರಣಶುದ್ಧನಾಗು ಪ

ಜೀವಕ್ಕೆ ಎಂಬೆನೆ ಆನಂತಕಲ್ಪಕ್ಕೆ
ಜೀವನಿತ್ಯ ಸುಖೀ ಎಲ್ಲಿದ್ದರೂ
ಸಾವೆ ಹುಟ್ಟೀಯಲ್ಲಿ ಸತತದಲಿ ಚರಿಸಿದರು
ಕ್ಲೇಶ 1

ಶರೀರಕೆಂಬೆನೆ ಚೇತನ ತಪ್ಪಿದರೆ
ಇರುವುದು ಜಡವಾಗಿ ಬಿದ್ದುಕೊಂಡು
ಹಿರಿದಾಗಿ ತಿಳಿವುದು ಜಡಕೆ ಲೇಪನವುಂಟೆ
ಚರಾಚರದಲಿ ಇದೆ ಸಿದ್ಧವಾಗಿಪ್ಪಯಾ 2

ಪರಿ ಜ್ಞಾನದಲಿದು
ಸಾರ ಕಾಣಿಸದು ಸಂಸಾರದೊಳಗೆ
ಮಾರಜನಕ ನಮ್ಮ ವಿಜಯವಿಠ್ಠಲ ಹರಿಯ
ಸಾರದಲೆ ಅಭಿಮಾನ ಬಿಡದವಗೆ ಇದೆ ಉಂಟು 3
**********