Showing posts with label ಭಕ್ತವತ್ಸಲನೆಂಬ ಚಿಹ್ನೆ ನಿನಗೆಯುಕ್ತವಲ್ಲದೆ prasannavenkata. Show all posts
Showing posts with label ಭಕ್ತವತ್ಸಲನೆಂಬ ಚಿಹ್ನೆ ನಿನಗೆಯುಕ್ತವಲ್ಲದೆ prasannavenkata. Show all posts

Thursday, 14 November 2019

ಭಕ್ತವತ್ಸಲನೆಂಬ ಚಿಹ್ನೆ ನಿನಗೆಯುಕ್ತವಲ್ಲದೆ ankita prasannavenkata

by ಪ್ರಸನ್ನವೆಂಕಟದಾಸರು
ಭಕ್ತವತ್ಸಲನೆಂಬ ಚಿಹ್ನೆ ನಿನಗೆಯುಕ್ತವಲ್ಲದೆ ಆರಿಗೊಪ್ಪುವುದು ಕೃಷ್ಣ ಪ.

ಎಲ್ಲ ಜಗದ ತಂದೆ ನಿನ್ನ ಮಗ ಆ ನಂದನೊಲ್ಲಭೆಯ ಕಂದನಾದಚೆಲ್ಲುವೆ ಅರಸಿ ನಿನ್ನಂಗನೆ ಲಕುಮವ್ವಗೊಲ್ಲತೇರಿಗೆಂತು ಸೋತಿದ್ದೆ ಸ್ವಾಮಿ 1

ಮಂದಿ ರಾಜಾಂಡಕೋಟಿಗೆ ಗುರುವರ್ಯ ನೀನುಸಾಂದೀಪನi್ಞ್ಯಳಿಗವ ಮಾಡ್ದೆಮಂದಜಾಸನಆ ವಾಯು ನಿನ್ನ ಓಲೈಸುತಿರೆಕಂದನೆನಿಸಿದೆ ಯಶೋದಾದೇವಿಗೆ ಸ್ವಾಮಿ 2

ಮೂರು ಚಾವಡಿ ಪಾರುಪತ್ಯದ ಪ್ರಭುವೆ ನೀನೇರಿದೆ ನರನ ಬಂಡಿಯನುದ್ವಾರಕೆಯ ಅರಸೆ ನೀ ಚೀರಿದರೋಡಿ ಬಂದುಆ ರಮಣಿಯಮಾನಉಳಿಸಿದೆ ಸ್ವಾಮಿ3

ಮುಕ್ತದ್ರುಹಿಣರಿಂದಸೇವ್ಯನೀ ಧರ್ಮನಮಖದೊಳೆಂಜಲ ಪತ್ರ ತೆಗೆದೆಪ್ರಕಟಿತನಿತ್ಯಮಹಾತೃಪ್ತ ನೀ ವಿದುರನಕಕುಲತೆಯ ಔತಣಗೊಂಡು ಮುದಿಸಿದೆ ಸ್ವಾಮಿ 4

ಹಲವು ಶ್ರ್ರುತಿಗಳಿಗೆ ನೀ ನಿಲುಕದೆ ನೆನೆದವಗೆಸುಲಭದಿ ಪೊರೆವ ಉದಾರಿಬಲದ ಮ್ಯಾಲೊಲಿಯುವ ದೊರೆಯಲ್ಲ ಭಕ್ತರಛಲರಕ್ಷ ಪ್ರಸನ್ನವೆಂಕಟ ಜಗದಧ್ಯಕ್ಷ ಸ್ವಾಮಿ 5
*********