" ಶ್ರೀ ಆಂಜನೇಯ ಸ್ತುತಿ "
ರಚನೆ : ಆಚಾರ್ಯ ನಾಗರಾಜು ಹಾವೇರಿ
ಮುದ್ರಿಕೆ : ವೆಂಕಟನಾಥ
ಹನುಮನ ಮನೆಯವರು ನಾವೆಲ್ಲರೂ ।
ಮನಸಿಜನಯ್ಯಗೆ ಸಮ್ಮತವಾದಂಥ ।। ಪಲ್ಲವಿ ।।
ಹನುಮನ ನೆನೆದರೆ ಪಾಪ ಪರಿಹರವು ।
ಹನುಮನು ಒಲಿದರೆ ಶ್ರೀ ರಾಮ ಒಲಿವಾ ।। ಚರಣ ।।
ಭೀಮನ ನೆನೆದರೆ ಭಯವಿಲ್ಲವಯ್ಯಾ ।
ಕಾಮನ ಪಿತ ಕೃಷ್ಣನು ಕಾಮಿತಗಾಳೀವಾ ।। ಚರಣ ।।
ಮಧ್ವರಾಯರ ಪಾದವ ಭಜಿಸಲು ।
ಬಾದರಾಯಣ ವೆಂಕಟನಾಥ ಪೊರೆವಾ ।।
****