Showing posts with label ಜಯ ಮಂಗಳಂ ನಿತ್ಯ ಶುಭಮಂಗಳಂ ದುರುಳತಮವನು purandara vittala JAYA MANGALAM NITYA SHUBHA MANGALAM DURULATAMAVANU. Show all posts
Showing posts with label ಜಯ ಮಂಗಳಂ ನಿತ್ಯ ಶುಭಮಂಗಳಂ ದುರುಳತಮವನು purandara vittala JAYA MANGALAM NITYA SHUBHA MANGALAM DURULATAMAVANU. Show all posts

Thursday, 5 December 2019

ಜಯ ಮಂಗಳಂ ನಿತ್ಯ ಶುಭಮಂಗಳಂ ದುರುಳತಮವನು purandara vittala JAYA MANGALAM NITYA SHUBHA MANGALAM DURULATAMAVANU

Nrusimha Jayanti, Toravi 25 May 2021

ಪುರಂದರದಾಸರು
ರಾಗ ಭೈರವಿ ಅಟತಾಳ

ಜಯ ಮಂಗಳಂ ನಿತ್ಯ ಶುಭ ಮಂಗಳಂ ||ಪ||

ದುರುಳ ತಮವನು ಕದ್ದು ಪಾತಾಳದಲಿ
ಇರಲವನ ಕೊಂದು ವೇದಾವಳಿಗಳ
ಸರಸಿಜೋದ್ಭವಗಿತ್ತು ಸುರಮುನಿಗಳನೆಲ್ಲ
ಪೊರೆವ ಶ್ರೀ ಮಚ್ಛಾವತಾರ ಹರಿಗೆ ||

ಸುರರು ದೈತ್ಯರು ಕೂಡಿ ಸಿಂಧುವನು ಮಥಿಸುತಿರೆ
ಗಿರಿ ಮುಣುಗಿ ಪಾತಾಳಕೆ ಪೋಗೆ
ಭರದಿಂದಲಿ ಬಂದು ಗಿರಿಯ ಬೆನ್ನಿಲ್ಹೊತ್ತು
ಸುರರ ರಕ್ಷಿಸಿದ ಶ್ರೀ ಕೂರ್ಮ ಹರಿಗೆ ||

ಭೂಮಿಯನು ಹಿರಣ್ಯಾಕ್ಷನೆಂಬೊ ದೈತ್ಯನು ಸುತ್ತಿ
ಭೀಮವಿಕ್ರಮನು ಪಾತಾಳಕೊಯ್ಯೆ
ತಾಮರಸಸಂಭವನು ಬಿನ್ನವಿಸಲವನ ಕೊಂದು
ಭೂಮಿಯನು ತಂದ ಶ್ರೀವರಹ ಹರಿಗೆ ||

ಪರಮಭಾಗವತ ಪ್ರಹ್ಲಾದನ ಹಿರಣ್ಯಕನು
ಪರಿಪರಿಯ ಬಾಧೆಯಿಂದಲಿ ಪೀಡಿಸೆ
ಕರುಣಾಳು ಕೋಪದಲಿ ದೈತ್ಯನುದರವ ಬಗಿದ
ಶರಣರಕ್ಷಕನಾದ ನರಸಿಂಹಗೆ ||

ಬಲಿಚಕ್ರವರ್ತಿ ಭೂಮಿಯ ಧಾರೆಯೆರೆಯಲು
ಇಳೆಯನಳೆದವನ ಸುತಳಕಿಳುಹಿದೆ
ಸಿಲುಕಿ ಭಕುತಿಗೆ ಮೆಚ್ಚಿ ಬಾಗಿಲ ಕಾಯಿದೆ
ಬಲವಂತ ವಾಮನಾವತಾರಹರಿಗೆ ||

ಕಾರ್ತವೀರ್ಯಾರ್ಜುನನ ಸಂಹರಿಸಿ ಮುದದಿಂದ
ಕೀರ್ತಿಯನು ಲೋಕದೊಳು ವಿಸ್ತರಿಸಿದೆ
ಪಾರ್ಥಿವಾಂತಕ ಬಾಹುಬಲ ಪರಿಪೂರ್ಣನೆ
ಆರ್ತಬಾಂಧವ ಭಾರ್ಗವರಾಮಗೆ ||

ದಶರಥನ ಮನೆಯಲುದ್ಭವಿಸಿ ರಾವಣಾಸುರನ
ದಶಶಿರವನೀಡಾಡಿ ಅವನನುಜಗೆ
ವಸುಧಾಧಿಪತ್ಯವನು ಲಂಕೆಯೊಳಗಿತ್ತ
ಅಸಮವಿಕ್ರಮ ರಾಮಚಂದ್ರಹರಿಗೆ ||

ಯದುಕುಲದಲಿ ಬಂದು, ಕೊಂದು ಕಂಸನನಂದು
ಮುದದಿ ಪಾಂಡವರನು ಉದ್ಧರಿಸಿದೆ
ಒದಗಿ ಕೌರವಬಲವ ಸಂಹರಿಸಿ ಪದವಿತ್ತು
ಮುದದಿ ಮನ್ನಿಸಿದ ಶ್ರೀಕೃಷ್ಣ ಹರಿಗೆ ||

ತ್ರಿಪುರದಮರಾರಿಯರ ಸತಿಯರ ಪತಿವ್ರತವ-
ನಪಹರಿಸಿ ದಿವ್ಯ ಮೋಹರೂಪದಿ
ತ್ರಿಪುರಹರಗಂಬಾಗಿ ಶಿವಗೆ ಕೀರ್ತಿಯನಿತ್ತ
ಅಪರಿಮಿತ ಬುದ್ಧಾವತಾರ ಹರಿಗೆ ||

ಕಲಿಯುಗದ ಕಡೆಯಲ್ಲಿ ಖಳನೃಪರನೆಲ್ಲವನು
ತುಳಿಸಿ ಕುದುರೆಯ ಖುರದಪುಟಗಳಿಂದ
ಸುಲಭದಿಂ ನಡೆಸುತ ಕೃತಯುಗದ ಧರ್ಮವನು
ಬಲ್ಲಂಥ ಕಲ್ಕ್ಯಾವತಾರ ಹರಿಗೆ ||

ಮಂಗಳ ಪದಂಗಳನು ಭಕುತಿಯಿಂದಲಿ ಮೋಹನತ-
ರಂಗನೇರೆಲ್ಲ ರಾಗದಿ ಪಾಡಲು
ಮಂಗಳಾತ್ಮಕ ಸಿರಿಪುರಂದರವಿಠಲಗೆ
ಅಂಗನೇರೆಲ್ಲ ಆರತಿಯೆತ್ತಿರೇ ||
***

ರಾಗ : ಸುರುಟಿ       ತಿಶ್ರನಡೆ

ಜಯ ಮಂಗಳಂ  ನಿತ್ಯ ಶುಭ ಮಂಗಳಂ ॥ಪ॥


ದುರುಳ ತಮ ವೇದವನು ಕದ್ದು ಪಾತಾಳದಲ್ಲಿ

ಇರಲವನ ಕೊಂದು ವೇದಾವಳಿಗಳ

ಸರಿಸೋಜೋದ್ಭವಗಿತ್ತು ಸುರಮುನಿಗಳನೆಲ್ಲ

ಹೊರೆವ ಶ್ರೀಮತ್ಸ್ಯಾವತಾರ ಹರಿಗೆ ॥೧॥


ಸುರರು ದೈತ್ಯರು ಕೂಡಿ ಸಿಂಧುವನು ಮಥಿಸುತಿರೆ

ಗಿರಿ ಮುಣುಗಿ ಪಾತಾಳಕಿಳಿದುಪೋಗೆ

ಭರದಿಂದಲಿ ಬಂದು ಗಿರಿಯ ಬೆನ್ನಲಿ ಹೊತ್ತು

ಸುರರ ರಕ್ಷಿಸಿದ ಶ್ರೀಕೂರ್ಮ ಹರಿಗೆ ॥೨॥


ಭೂಮಿಯನು ಹಿರಣ್ಯಾಕ್ಷನೆಂಬೊ ದೈತ್ಯನು ಸುತ್ತಿ

ಭೀಮವಿಕ್ರಮನು ಪಾತಾಳಕೊಯ್ಯೆ

ತಾಮರಸಸಂಭವನು ಬಿನ್ನೈಸಲವನ ಕೊಂದು

ಭೂಮಿಯನು ತಂದ ಶ್ರೀವರಾಹ ಹರಿಗೆ ॥೩॥


ಪರಮ ಭಾಗವತ ಪ್ರಹ್ಲಾದನ ಹಿರಣ್ಯಕನು

ಪರಿಪರಿಯ ಬಾಧೆಯಿಂದಲಿ ಪೀಡಿಸೆ

ಕರುಣಾಳು ಕೋಪದಲಿ ದೈತ್ಯನುದರವ ಬಗೆದ

ಶರಣ ರಕ್ಷಕನಾದ ನರಸಿಂಹಗೆ ॥೪॥


ಬಲಿ ಚಕ್ರವರ್ತಿ ಭೂಮಿಯ ಧಾರೆಯೆರೆಯಲು

ಇಳೆಯನಳೆದವನ ಸುತಳಕ್ಕಿಳುಹಿದೆ

ಸಿಲುಕಿ ಭಕುತಿಗೆ ಮೆಚ್ಚಿ ಬಾಗಿಲ ಕಾಯಿದೆ

ಬಲವಂತ ವಾಮನಾವತಾರ ಹರಿಗೆ ॥೫॥


ಕಾರ್ತವೀರ್ಯಾರ್ಜುನನ ಸಂಹರಿಸಿ ಮುದದಿಂದ

ಕೀರ್ತಿಯನು ಲೋಕದೊಳು ವಿಸ್ತರಿದೆ

ಪಾರ್ಥಿವಾಂತಕ ಬಾಹುಬಲ ಪರಿಪೂರ್ಣನೆ

ಆರ್ತಬಾಂಧವ ಭಾರ್ಗವರಾಮಗೆ ॥೬॥


ದಶರಥನ ಮನೆಯಲುದ್ಭವಿಸಿ ರಾವಣಾಸುರನ

ದಶಶಿರವನೀಡ್ಯಾಡಿ ಅವನನುಜಗೆ

ವಸುಧಾಧಿಪತ್ಯವನು ಲಂಕೆಯೊಳಗವಗಿತ್ತೆ

ಅಸಮವಿಕ್ರಮ ರಾಮಚಂದ್ರ ಹರಿಗೆ ॥೭॥


ಯದುಕುಲದಲಿ ಬಂದು ಕೊಂದು ಕಂಸನನಂದು 

ಮುದದಿ ಪಾಂಡವರನು ಉದ್ಧರಿಸಿದೆ

ಒದಗಿ ಕೌರವಬಲವ ಸಂಹರಿಸಿ ಪದವಿತ್ತು

ಮುದದಿ ಮನ್ನಿಸಿದ ಶ್ರೀಕೃಷ್ಣ  ಹರಿಗೆ ॥೮॥


ತ್ರಿಪುರದಮರಾರಿಯರ ಸತಿಯರ ಪತಿವ್ರತವ

ಅಪಹರಿಸಿ ದಿವ್ಯ ಮೋಹನರೂಪದಿ

ತ್ರಿಪುರಹರಗಿಂಬಾಗಿ ಶಿವಗೆ ಕೀರ್ತಿಯನಿತ್ತ

ಅಪರಿಮಿತ ಬುದ್ಧಾವತಾರ ಹರಿಗೆ ॥೯॥


ಕಲಿಯುಗದ ಕಡೆಯಲ್ಲಿ ಖಳನೃಪರನೆಲ್ಲರನು

ತುಳಿಸಿ ಕುದುರೆಯ ಖುರದ ಪುಟಗಳಿಂದ

ಸುಲಭದಿಂ ನಡೆಸುತ ಕೃತಯುಗದ ಧರ್ಮವನು

ಬಲ್ಲಂಥ ಕಲ್ಕ್ಯವತಾರ ಹರಿಗೆ ॥೧೦॥


ಮಂಗಳ ಪದಂಗಳನು ಭಕುತಿಯಿಂದಲಿ ಮೋಹನತ

ರಂಗನೇರೆಲ್ಲ ರಾಗದಿ ಪಾಡಲು

ಮಂಗಳಾತ್ಮಕ ಸಿರಿ ಪುರಂದರವಿಠಲಗೆ 

ಅಂಗನೇರೆಲ್ಲ ಆರತ್ತಿ ಎತ್ತಿರೆ ॥೧೧॥


ಮಂಗಳಂ ಜಯ  ಮಂಗಳಂ॥

*****

ಜಯ ಮಂಗಳಂ ನಿತ್ಯ ಶುಭಮಂಗಳಂ ಪ. 

ದುರುಳತಮ ವೇದವನು ಕದ್ದು ವಾತಾಳದಲಿಇರಲವನ ಕೊಂದು ವೇದಾವಳಿಗಳಸರಸಿಜೋದ್ಭವಗಿತ್ತು ಸುರಮುನಿಗಳನ್ನೆಲ್ಲಪೊರೆದ ಶ್ರೀ ವತ್ಸಾವತಾರಿ ಹರಿಗೆ 1

ಸುರರು ದೈತ್ಯರಕೂಡಿ ಸಿಂಧುವನು ಮಧಿಸುತಿರೆಗಿರಿಮುಳಗಿ ಪಾತಳಕಿಳಿದು ಪೋಗೆಭರದಿಂದ ತಾ ಬಂದು ಗಿರಿಯ ಬೆನ್ನಳಗಾಂತುಸುರರ ಸಂರಕ್ಷಿಸಿದ ಶ್ರೀಕೂರ್ಮಹರಿಗೆ2

ಭೂಮಿಯನು ಹಿರಣ್ಯಕ್ಷನೆಂಬ ದೈತ್ಯನು ಸುತ್ತಿಭೀಮ ವಿಕ್ರಮನು ಪಾತಾಳಕೊಯ್ಯುತಾಮರಸ ಸಂಭವನು ಬಿನ್ನೈಸಲವನಳಿದುಭೂಮಿಯನು ತಂದು ಶ್ರೀ ಭೂ ವರಾಹನಿಗೆ 3

ಪರಮಭಾಗವತ ಪ್ರಲ್ಹಾದನ ಹಿರಣ್ಯಕನುಪರಿಪರಿಯ ಭಾದೆಯಿಂದಲಿ ಪೀಡಿಸಿಕರುಣಾಳು ಕೋಪದಲಿ ದೈತ್ಯನುದರವ ಬಗೆದಶರಣ ರಕ್ಷಕನಾದ ಶ್ರೀ ನರಸಿಂಹಗೆ 4

ಬಲಿಚಕ್ರವರ್ತಿ ಭೂಮಿಯ ಧಾರೆಯರೆಯಲುಇಳೆಯನಳೆದವನ ಸುತಳಕೆ ಕಳುಹಿಸಿದಸಿಲುಕಿಭಕುತಿಗೆ ಮೆಚ್ಚಿ ಬಾಗಿಲವಕಾಯ್ದ ಶ್ರೀಬಲವಂಥಹರಿವಾಮಾನಾವತಾರನಿಗೆ5

ಕಾರ್ತವೀರ್ಯಾರ್ಜುನನ ಸಂಹರಿಸಿ ಮುದದಿಂದಕೀರ್ತಿಯನು ಲೋಕದೊಳು ವಿಸ್ತರಿಸಿದಪ್ರಾರ್ಥಿವಾಂತಕ ಬಾಹುಬಲದಿ ಪರಿಪೂರ್ಣಗೆಆರ್ತಬಾಂಧವಗೆಭಾರ್ಗವರಾಮಗೆ6

ದಶರಥನ ಮನೆಯುದ್ಭವಿಸಿ ಆ ರಾವಣನದಶಶಿರವ ನೀಡಾಡಿ ಅವನನುಜಗೆವಸುಧಾಧಿಪತ್ಯವನು ಲಂಕೆಯೊಳಗವಗಿತ್ತಅಸಮವಿಕ್ರಮ ರಾಮಚಂದ್ರ ಹರಿಗೆ 7

ಯದುಕುಲದಿ ತಾ ಬಂದು ಕೊಂದು ಕಂಸನನಂದುಮುದದಿಂದ ಪಾಂಡವರನುದ್ಧರಿಸಿದಒದೆಗೆ ಕೌರವ ಬಲವ ಸಂಹರಿಸಿ ಪದವಿತ್ತುಮುದದಿ ಮನ್ನಿಸಿದ ಶ್ರೀ ಕೃಷ್ಣ ಹರಿಗೆ 8

ತ್ರಿಪುರದ ಮುರಾರಿಗಳ ಸತಿಯರ ಪತಿವ್ರತವಅಪಹರಿಸಿ ದಿವ್ಯ ಮೋಹಕರೂಪದಿತ್ರಿಪುರಹರಗಂಬಾಗಿ ಶಿವಗೆ ಕೀರ್ತಿಯನಿತ್ತಅಪರಮಿತ ಬುದ್ಧಾವತಾರ ಹರಿಗೆ 9

ಕರಿಯುಗದ ಕಡಯಲಿ ಖಲನೃಪರನೆಲ್ಲರನುತುಳಸಿ ಕುದುರೆಯ ಖುರದ ಪುಟಗಳಿಂದಸುಲಭದಿಂ ನಡೆಸುತೀ ಕೃತಯುಗದ ಧರ್ಮವನುಒಲಿದಂಥ ಕಲ್ಕಿಯವತಾರ ಹರಿಗೆ 10

ಮಂಗಳ ಪದಂಗಳನು ಭಕ್ತಿಯಲಿ ಮೋಹನತರಾಂಗನೆಯರೆಲ್ಲ ರಾಗದಿ ಪಾಡುತಮಂಗಳಾತ್ಮಕಗೆಸಿರಿ ಪುರಂದರವಿಠಲಗೆಅಂಗನೆಯರೆಲ್ಲ ಆರತಿಯೆತ್ತಿರೆ 11
**********