Showing posts with label ಬ್ಯಾಗ ಬಾರೋ ಗುರುರಾಘವೇಂದ್ರರಾಯಾ ಬಾಗಿ ನಮಿಪೆ ಮಹರಾಯಾ gurujagannatha vittala. Show all posts
Showing posts with label ಬ್ಯಾಗ ಬಾರೋ ಗುರುರಾಘವೇಂದ್ರರಾಯಾ ಬಾಗಿ ನಮಿಪೆ ಮಹರಾಯಾ gurujagannatha vittala. Show all posts

Wednesday, 1 September 2021

ಬ್ಯಾಗ ಬಾರೋ ಗುರುರಾಘವೇಂದ್ರರಾಯಾ ಬಾಗಿ ನಮಿಪೆ ಮಹರಾಯಾ ankita gurujagannatha vittala

 ..

ಬ್ಯಾಗ ಬಾರೋ ಗುರುರಾಘವೇಂದ್ರರಾಯಾ

ಬಾಗಿ ನಮಿಪೆ ಮಹರಾಯಾ ಪ


ಯೋಗಿ ಮಧ್ವಮತದಾಗಮದಿಂದಲಿ

ಭಾಗವತರು ಶಿರಬಾಗಿ ಪಾಡುವರೋ ಅ.ಪ

ಕುಂದಣಮಣಿಮಯ ಸ್ಯಂದನದೊಳತಿ

ಸುಂದರ ಶುಭತರ ರೂಪ -

ದಿಂದಲಿ ರಾಜಿಪಾಮಂದಭೋಧ ನಿಜ

ನಂದದಾಯಕ ಯತಿಕುಲ ದೀಪ

ಛಂದದಿ ಭಕುತ(ರ) ಕುಂದನಿಚಯಕೆ ನಿಜ

ಚಂದಿರ ಸಮ ಭೂಪಾ -

ವೃಂದವಂದಿತ ಪಾದ ದ್ವಂದ್ವವು ನಿಜರಿಗೆ

ನಂದ ನೀಡುವ ಪ್ರತಾಪಾ

ವಂದಿಸಿ ಗುಣಗಳ ವೃಂದ ಪೊಗಳುವ

ಮಂದ - ಜನರು ಬಲು - ಸುಂದರ ಶುಭಗುಣ

ದಿಂದ ಶೋಭಿಪÀ ಜನ - ಸಂದಣಿಯೊಳು ನಿನ್ನ

ಸುಂದರ ಮೂರುತಿ - ಛಂದದಿ ನೋಳ್ಪರೊ 1


ಕನಕ ಮಣಿಮಯ ಘನಸುಕೊಡೆಗಳು

ಮಿನುಗುವ ಚಾಮರ ಚೋದ್ಯವೋ

ಅನುಗ - ಕರಗತ ಮಣಿಮಯ ಛಡಿಗಳ

ಅನುಪಮ ಭಾರವೋ

ಮುನಿಜನ ಶಿರಮಣಿಸಿ ಗುಣ ಗಣ

ಎಣಿಸುವ ಗಂಭೀರವೋ

ತನು - ಮನ - ಮನಿ - ಧನ ವನುತೆರ ನಿನಗನು -

ಮಾನಮಾಡದೆ ನೀಡುವಗಾಧವೋ

ಘನ ಸಂತೋಷದಿ - ಮನದೊಳು ನಲಿಯುತ

ಕುಣಿದಾಡುತ - ದಣಿಯದೆ ಕರಚಪ್ಪಳಿ |

ಕ್ಷಣ ಕ್ಷಣದಲಿ ತ್ಮಮ - ತನು ಮರೆದೀಪರಿ

ಜನರೊಳು ನಮ್ಮ ಜನುಮ ಸಫಲವೆಂಬುವರೋ 2


ಪಟುತರ ಭಟರಾರ್ಭಟಿಸುವ ಮಹ

ಚಟ - ಚಟ - ಚಾಟ ಶಬ್ಧವೋ

ಕುಟಿಲ ವಿಮತ ಘನ ಪಟಲ ವಿದಾರಣ

ಚಟುಲ ಸ್ವಮತ ಸಿದ್ಧಾಂತವೋ

ಕುಟಿಲಾಳಕಿಯರ ಕುಣಿಯುವ ಪದದಿ ಸಂ -

ಘಟಿತ ಗೆಜ್ಜೆಗಳ ಶಬ್ಧವೋ

ಪಟು ಗುರುಜಗನ್ನಾಥವಿಠಲರ ದಾಸರ

ಧಿಟ ಪದ ಸಂಗೀತವೋ

ಧಿಟಗುರುರಾಯನೆ - ಭಟರುಗಳ ಮಹÀಸು -

ಕಟಕದಿ ಮೋದೋ - ತ್ಕಟದಲಿ ಇಷ್ಟವ

ಥಟನೆ ಬೀರುತ ಬಲು ಪುಟಿದಾಡುತ ಹರಿ

ಭಟ ಜಲಜೋತ್ಕಟ ದಿವಾಕರ 3

***