Showing posts with label ಅಚ್ಯುತಾನಂತ ಗೋವಿಂದ ಹರಿ ಸಚ್ಚಿದಾನಂದ ಸ್ವರೂಪ keshava nama purandara vittala ACHYUTANANTA GOVINDA HARI KESHAVA NAMA. Show all posts
Showing posts with label ಅಚ್ಯುತಾನಂತ ಗೋವಿಂದ ಹರಿ ಸಚ್ಚಿದಾನಂದ ಸ್ವರೂಪ keshava nama purandara vittala ACHYUTANANTA GOVINDA HARI KESHAVA NAMA. Show all posts

Wednesday 4 December 2019

ಅಚ್ಯುತಾನಂತ ಗೋವಿಂದ ಹರಿ ಸಚ್ಚಿದಾನಂದ ಸ್ವರೂಪ keshava nama purandara vittala ACHYUTANANTA GOVINDA HARI KESHAVA NAMA

 ರಾಗ ಆನಂದಭೈರವಿ   ರೂಪಕತಾಳ 
Audio by Mrs. Nandini Sripad

ಶ್ರೀಪುರಂದರದಾಸಕೃತ ಕೇಶವನಾಮ 


ಅಚ್ಯುತಾನಂತ ಗೋವಿಂದ ಹರಿ
ಸಚ್ಚಿದಾನಂದ ಸ್ವರೂಪ ಮುಕುಂದ ॥ ಪ ॥

 ಕೇಶವ ಕೃಷ್ಣ ಮುಕುಂದ ಹರಿ
ವಾಸುದೇವ ಗುರು ಜಗದಾದಿವಂದ್ಯ
ಯಶೋದೆಯ ಸುಕೃತದ ಕಂದ ಸ್ವಾಮಿ
ಶೇಷಶಯನ ಭಕ್ತ ಹೃದಯಾನಂದ ॥ 1 ॥

 ನಾರಾಯಣ ನಿಮ್ಮ ನಾಮ ಎನ್ನ
ನಾಲಿಗೆ ಮೇಲಿರಬೇಕೆಂಬ ನೇಮ
ನಾನು ಬೇಡುವೆ ನಿಮ್ಮ ನಾಮ ಪ್ರಾಣಪ -
ಯಣದ ಸಮಯಕೊದಗಲಿ ಗುಣಧಾಮ ॥ 2 ॥

 ಮಾಧವ ಮಂಗಳಗಾತ್ರ ಸ್ವಾಮಿ
ಯಾದವ ಕೈಲಾಸವಾಸನ ಮಿತ್ರ
ಮಹಿಮೆ ಕೇಳಿದರೆ ವಿಚಿತ್ರ ನಿನ್ನ
ಮನಮೆಚ್ಚಲಿ ಸತ್ಯಭಾಮಾಕಳತ್ರ ॥ 3 ॥

 ಗೋವಿಂದ ಗೋಪಾಲ ಬಾಲ ಸೋಳ -
ಸಾಸಿರ ಗೋಪೇರ ಆನಂದಲೀಲ
ನೀಲಮಣಿ ಮುಕ್ತಮಾಲಾ ನಿಮ್ಮ
ನೇನೆಂದು ಕರೆಯಲಿ ಸುಗ್ರೀವಪಾಲ ॥ 4 ॥

 ವಿಷ್ಣು ಚಕ್ರವು ಬಂದು ಸುತ್ತಿ ಮೂರು
ಸೃಷ್ಟಿಯನೆಲ್ಲ ತಿರುಗಿ ಬೆನ್ನಟ್ಟಿ
ಕೃಷ್ಣ ಸಲಹೆಂದು ಮೊರೆಯಿಟ್ಟ ಮುನಿ
ಶ್ರೇಷ್ಠಗಿಷ್ಟರ ಮೇಲೆ ಅಭಯವ ಕೊಟ್ಟೆ ॥ 5 ॥

 ಮಧುಸೂದನ ಮಾರಜನಕ ಮದ -
ಗಜ ಸೀಳಿ ಮಲ್ಲರ ಗೆಲಿದೆ ತವಕ
ಒದಗಿ ಕಂಸನ ಕೊಂದ ಬಳಿಕ ನೀ
ಮುದಕಗೆ ಪಟ್ಟವ ಕಟ್ಟಿದ್ಯೋ ಧನಿಕ ॥ 6 ॥

 ತ್ರಿವಿಕ್ರಮ ತ್ರೈಲೋಕ್ಯನಾಥ ದೇವ
ತ್ರಿಪುರದ ಸತಿಯರ ವ್ರತಕೆ ವಿಘಾತ
ಯದುವಂಶ ಪಾಂಡವ ಪ್ರೀತ ಎನ್ನ
ಹೃದಯದೊಳಡಗಿರೋ ಶ್ರೀಜಗನ್ನಾಥ ॥ 7 ॥

 ವಾಮನ ರೂಪಿಲಿ ಬಂದು ಬಲಿಯ
ದಾನವ ಬೇಡಲು ಉಚಿತವು ಎಂದು
ಧಾರೆಯನೆರೆಯಲು ಅಂದು ಬೆಳೆದು
ಧಾರಿಣಿಯೆಲ್ಲವನಳಿದ್ಯೋ ನೀನಂದು ॥ 8 ॥

 ಶ್ರೀಧರ ಶೃಂಗಾರ ಹಾರ ದಿವ್ಯ
ಶ್ರೀವತ್ಸಲಾಂಛನ ಶ್ರೀರಘುವೀರ
ವಾರಿಧಿಸಮಗಂಭೀರ ಧೀರ
ಕ್ರೂರ ರಕ್ಕಸರನೆಲ್ಲರ ಸಂಹಾರಾ ॥ 9 ॥

 ಹೃಷಿಕೇಶ ವೃಂದಾವನದಲಿ ನೀ
ಹರುಷದಿ ಕೊಳಲನೂದುತ ಯಮುನೆಯಲಿ
ಸತಿಯರ ಸಮ್ಮೇಳದಲಿ ನೀ
ಧರಿಸಿದ್ಯೊ ಮಂದಾರಮಾಲೆ ಕೊರಳಲ್ಲಿ ॥ 10 ॥

 ಪದ್ಮನಾಭ ಕೇಳೊ ಘನ್ನ ಪಾದ -
ಪದ್ಮವ ತೋರಿಸೋ ಬೇಗನೆ ನಿನ್ನ
ಮುದ್ದುಮುಖವ ತೋರಿ ಎನ್ನ ಬೇಗ
ಉದ್ಧಾರ ಮಾಡೆಂದು ಬೇಡುವೆ ನಿನ್ನ ॥ 11 ॥

 ದಾಮೋದರ ಗುಣಧಾಮ ಸ್ವಾಮಿ
ದಾನವಾಂತಕ ಯದುಕುಲಸಾರ್ವಭೌಮ
ನೀಲಮೇಘನಿಭಶ್ಯಾಮ ಕೃಷ್ಣ
ನೀಲಾಪತಿಯೆಂಬ ಬಹುಪುಣ್ಯನಾಮ ॥ 12 ॥

 ಸಂಕರ್ಷಣ ದನುಜಹರಣ ದೇವ
ಪಂಕಜಮುಖಿ ದ್ರೌಪದಿ ಮೇಲೆ ಕರುಣ
ಕುಂಕುಮಾಂಕಿತರೇಖಾಚರಣ ನಿಜ
ಕಂಕಣ ಕೇಯೂರ ಕೌಸ್ತುಭಾಭರಣ ॥ 13 ॥

 ವಾಸುದೇವ ಕೇಳೋ ನಿನ್ನ ದಿವ್ಯ
ಸಾಸಿರನಾಮವ ನೆನೆವನೆ ಧನ್ಯ
ಬೇಸರದೆ ಸಲಹಬೇಕೆನ್ನ ತುಸು
ಘಾಸಿಯ ಮಾಡದೆ ಕರುಣಾಸಂಪನ್ನ ॥ 14 ॥

 ಪ್ರದ್ಯುಮ್ನ ನೆಂದು ನಾ ಕರೆದೆ ಎನ್ನ
ಬದ್ಧವಾದ ದುಷ್ಕರ್ಮವ ಕಳೆದೆ
ದುರ್ಬುದ್ಧಿ ದುರ್ವಾಕ್ಯ ಮೆರೆದೆ
ಸಾಧು ಸಜ್ಜನರ ಸಂಗ ನಿನ್ನಿಂದ ಬೆರೆದೆ ॥ 15 ॥

 ಅನಿರುದ್ಧ ಅನುದಿನದಲ್ಲಿ ನೀ
ವಿನಯದಿಂದಿದ್ದು ಗೋಪಿಯರ ಮನೆಯಲ್ಲಿ
ಸನಕಾದಿವಂದ್ಯ ನಿನ್ನಗಲಿ ಒಂದು
ಕ್ಷಣ ಬಿಟ್ಟಿರಲಾರೆ ನಿಲ್ಲೋ ಮನದಲ್ಲಿ ॥ 16 ॥

 ಪುರುಷೋತ್ತಮ ಗಾರು ಸಾಟಿ ಪರಬ್ರಹ್ಮ 
ಸ್ವರೂಪಿಯೆ ನಿನಗಾರೊ ಪೋಟಿ
ಮಹಿಮೆ ಕೇಳಿದರೊಂದು ಕೋಟಿ ನಿನ್ನ
ಹೃದಯದಿ ಬ್ರಹ್ಮಾಂಡ ಕಂಡ ಕಿರೀಟಿ ॥ 17 ॥

 ಅಧೋಕ್ಷಜ ಅಸುರ ಸಂಹಾರಿ ಕೃಷ್ಣ
ಅದ್ಭುತರೂಪ ಶಿಶುಪಾಲನ ವೈರಿ
ಭಕ್ತರ ಪಾಲಿಪ ಶೌರಿ ಅಜಾ -
ಮಿಳ ನಾರಗನೆನ್ನೆ ಕಾಯ್ದೆ ಮುರಾರಿ ॥ 18 ॥

 ನರಸಿಂಹ ರೂಪವ ತಾಳ್ದೆ ಕಂದ
ಕರೆಯೆ ಕಂಭದಿ ಬಂದು ಕರುಣದಿ ಕಾಯ್ದೆ
ದುರುಳ ಹಿರಣ್ಯಕನ ಸೀಳ್ದೆ ಅವನ
ಕರುಳ ಬಗೆದು ವನಮಾಲೆ ಹಾಕಿದೆ ॥ 19 ॥

 ಅಚ್ಯುತ ನೀನತಿ ಮುದ್ದು ಗೋಪಿ
ಬಚ್ಚಿಟ್ಟ ಹಾಲು ಮೊಸರು ಬೆಣ್ಣೆ ಮೆದ್ದು
ತುಚ್ಚಶಕಟನ ಕಾಲಿಲೊದ್ದು ಕಾಡು
ಕಿಚ್ಚು ನುಂಗಿ ಪಾಲಿಸಿದೆಯೊ ಗೆದ್ದು ॥ 20 ॥

 ಜನಾರ್ದನ ರೂಪ ನೀನಾಗಿ ಎನ್ನ
ಮನದ ಕರ್ಮವ ತೊಲಗಿಸೊ ಮುಂದಾಗಿ
ಮುನಿಗಳೆಲ್ಲರು ಒಂದಾಗಿ ಈ
ತನು ನಿನ್ನದೆಂಬರೋ ಕೇಳೋ ನಿಜವಾಗಿ ॥ 21 ॥

 ಉಪೇಂದ್ರ ರೂಪದಿ ಬಂದಿ ಅಪ್ರ -
ಮೇಯ ಕಾಳಿಂಗನ ಮಡುವ ಧುಮುಕಿದಿ
ನಾಗನ ಹೆಡೆಗಳ ತುಳಿದಿ ನಾಗ -
ಪತ್ನಿಯರು ಬೇಡೆ ಪತಿಯ ಪಾಲಿಸಿದಿ ॥ 22 ॥

 ಹರಿ ಹರಿಯೆಂದರೆ ಪಾಪರಾಶಿ
ಹರಿದು ಹೋಯಿತು ಎನ್ನ ಮನದ ಸಂತಾಪ
ಸರ್ವರೊಳಗೆ ವಿಶ್ವರೂಪ ನಿನ್ನ
ನೆರೆ ನಂಬಿದವರನ್ನು ಸಲಹುವ ಭೂಪ ॥ 23 ॥

 ಕೃಷ್ಣ ಕೃಷ್ಣನೆಂಬ ಸೊಲ್ಲ ಕೇಳಿ
ನಷ್ಟವಾಯಿತು ಎನ್ನ ಪಾಪಗಳೆಲ್ಲ
ಮುಟ್ಟಿ ಭಜಿಸಿರೊ ನೀವೆಲ್ಲ ಪುರಂದರ - 
 ವಿಠ್ಠಲ ನಲ್ಲದೆ ಮತ್ತೆ ಬೇರಿಲ್ಲ ॥ 24 ॥
***


pallavi

acyutAnanta gOvinda hari saccidAnanda svarUpa mukunda

caraNam 1

kEshava krSNa mukunda hari vAsudEva guru jagadAdivandya
yashOdeya sukrtada kanda svAmi shESa shayana bhakta hrdayAnanda

caraNam 2

nArAyaNa ninna nAmavenna nAlige mElira bEkemba nEma
nAnu bEDuve ninna nAma prANa payaNa samayakodagali guNadhAma

caraNam 3

mAdhava mangaLagAtra svAmi yAdava kailAsa vAsana mitra
mahime kELidare vicitra ninna mana meccali satyabhAmA kaLatra

caraNam 4

gOvinda gOpAla bAla sOLa sAsira gOpira Ananda lIlA
nIla maNi muktAmAla nimmanEnendu kareyali sugrIva pAla

caraNam 5

viSNu cakravu bandu sutti mUru shrSTiyanella tirugi bennaTTi
krSNa salahendu moreyiTTa muni shrESTagiSTara mEle abhayava koTTe

caraNam 6

madhusUdana mArajanaka madagaja sILi mallara gelida tanaka
odagi kamsana konda bhaLiga nI mudukage paTTava kaTTIdyO dhanika

caraNam 7

trivikrama trailOkyanAtha dEva tripurara satiyara vratake vikhAta
yaduvamsha pANDava prIta enna hrdayadoLaDagiro shrI jagannAtha

caraNam 8

vAmana rUpili bandu baliya dAnava bEDalu ucitavu endu
dhAreyaneyalu andu beLedu dhAriNiyellavanaLedyo nInandu

caraNam 9

shrIdhara shrngAra hAra divya shrIvatsalAnjana shrI raghuvIra
vAridhi sama gambhIra dhIra krUra rakkasaranellara samhAra

caraNam 10

hrSikEsha vrndAvanadali nI haruSadi koLalnUduta yamuneyali
stiyara sammELadali nI dharisidyo mandAra mAle koraLali

caraNam 11

padmanAbha kELo ghanna pAda padmava tOriso bEgane ninna
muddu mukhava tOriyenna bEga uddhAra mADendu bEDuve ninna
1
caraNam 2

dAmOdara guNadhAma svAmi dAnavAntaka yadukula sArva bhauma
nIla mEgha nibha shyAma krSNa nIlApatiyemba bahu puNya nAma
1
caraNam 3

sankarSaNa danujaharaNa dEva pankajamukhi draupadi mEle karuNa
kumkumAnkata rEkhA caraNa nija kankaNa kEyura kaustubha bharaNa
1
caraNam 4

vAsudEva kELo ninna divya sAsira nAmava nenevane dhanya
bEsarade salaha bEkenna tusa gAsiya mADade karuNA sampanna
1
caraNam 5

pradyumnanendu nA karade enna baddhavAda duSkarmava kaLede
durbuddhi dur vAkya marede sAdhu sajjanara sanga ninninda berede
1
caraNam 6

aniruddha anudinadalli nI vinayadindidde gOpiyara maneyalli
sanakAdi vandya ninnagali ondu kSaNa biTTiralAre nillo manadali
1
caraNam 7

puruSOttamagAru sATi para brahma svarUpiye ninagArO pOTi
mahime kElidarondu kOTi ninna hrdayadi kaNDa brahmANDa kirITi
1
caraNam 8

adhOkSaja asura samhAri krSNa adbhUta rUpa shishupAlana vairi
bhaktara pAliya shauri ajAmiLa nAraganenne kAide murAri
1
caraNam 9

narasimha rUpava tALde kanda kareya kambhadi bandu karuNadi kAide
duruLa hiraNyakana sILde avana karuLu bagidu vanamAleya hAkde
20: acyuta nInati muddu gOpi bacciTTa hAlu mosaru beNNe meddu
tucca shakaTana kAliloddu kADu giccanu nungi pAlisideyo geddu
21: janArdana rUpa nInAgi enna manada karmava tolagiso mundAgi
munigaLellaru ondAgi I tanu ninnedembaro kELo nijavAgi
2
caraNam 2

upEndra rUpadi bande apramEya kALingana maDuva dhumukide
nAgana heDegaLa tuLide nAga patniyaru bEDe patiya pAliside
2
caraNam 3

hari hariyendare pApa rAshi haridu hOyitu enna manada santApa
sarvaroLage vishvarUpa ninna nere nambidavaranu salahuva bhUpa
2
caraNam 4

krSNa krSNanemba solla kELi nASTavAyitu enna pApagaLella
muTTi bhajisiro nIvella purandara viTTalannade matte bErilla
***


ಶ್ರೀಪುರಂದರದಾಸಕೃತ ಕೇಶವ ನಾಮ 

 ರಾಗ ಆನಂದಭೈರವಿ       ರೂಪಕತಾಳ 

ಅಚ್ಯುತಾನಂತ ಗೋವಿಂದ ಹರಿ
ಸಚ್ಚಿದಾನಂದ ಸ್ವರೂಪ ಮುಕುಂದ ॥ ಪ ॥

 ಕೇಶವ ಕೃಷ್ಣ ಮುಕುಂದ ಹರಿ
ವಾಸುದೇವ ಗುರು ಜಗದಾದಿವಂದ್ಯ
ಯಶೋದೆಯ ಸುಕೃತದ ಕಂದ ಸ್ವಾಮಿ
ಶೇಷಶಯನ ಭಕ್ತ ಹೃದಯಾನಂದ ॥ 1 ॥

 ನಾರಾಯಣ ನಿಮ್ಮ ನಾಮ ಎನ್ನ
ನಾಲಿಗೆ ಮೇಲಿರಬೇಕೆಂಬ ನೇಮ
ನಾನು ಬೇಡುವೆ ನಿಮ್ಮ ನಾಮ ಪ್ರಾಣಪ -
ಯಣದ ಸಮಯಕೊದಗಲಿ ಗುಣಧಾಮ ॥ 2 ॥

 ಮಾಧವ ಮಂಗಳಗಾತ್ರ ಸ್ವಾಮಿ
ಯಾದವ ಕೈಲಾಸವಾಸನ ಮಿತ್ರ
ಮಹಿಮೆ ಕೇಳಿದರೆ ವಿಚಿತ್ರ ನಿನ್ನ
ಮನಮೆಚ್ಚಲಿ ಸತ್ಯಭಾಮಾಕಳತ್ರ ॥ 3 ॥

 ಗೋವಿಂದ ಗೋಪಾಲ ಬಾಲ ಸೋಳ -
ಸಾಸಿರ ಗೋಪೇರ ಆನಂದಲೀಲ
ನೀಲಮಣಿ ಮುಕ್ತಮಾಲಾ ನಿಮ್ಮ
ನೇನೆಂದು ಕರೆಯಲಿ ಸುಗ್ರೀವಪಾಲ ॥ 4 ॥

 ವಿಷ್ಣು ಚಕ್ರವು ಬಂದು ಸುತ್ತಿ ಮೂರು
ಸೃಷ್ಟಿಯನೆಲ್ಲ ತಿರುಗಿ ಬೆನ್ನಟ್ಟಿ
ಕೃಷ್ಣ ಸಲಹೆಂದು ಮೊರೆಯಿಟ್ಟ ಮುನಿ
ಶ್ರೇಷ್ಠಗಿಷ್ಟರ ಮೇಲೆ ಅಭಯವ ಕೊಟ್ಟೆ ॥ 5 ॥

 ಮಧುಸೂದನ ಮಾರಜನಕ ಮದ -
ಗಜ ಸೀಳಿ ಮಲ್ಲರ ಗೆಲಿದೆ ತವಕ
ಒದಗಿ ಕಂಸನ ಕೊಂದ ಬಳಿಕ ನೀ
ಮುದಕಗೆ ಪಟ್ಟವ ಕಟ್ಟಿದ್ಯೋ ಧನಿಕ ॥ 6 ॥

 ತ್ರಿವಿಕ್ರಮ ತ್ರೈಲೋಕ್ಯನಾಥ ದೇವ
ತ್ರಿಪುರದ ಸತಿಯರ ವ್ರತಕೆ ವಿಘಾತ
ಯದುವಂಶ ಪಾಂಡವ ಪ್ರೀತ ಎನ್ನ
ಹೃದಯದೊಳಡಗಿರೋ ಶ್ರೀಜಗನ್ನಾಥ ॥ 7 ॥

 ವಾಮನ ರೂಪಿಲಿ ಬಂದು ಬಲಿಯ
ದಾನವ ಬೇಡಲು ಉಚಿತವು ಎಂದು
ಧಾರೆಯನೆರೆಯಲು ಅಂದು ಬೆಳೆದು
ಧಾರಿಣಿಯೆಲ್ಲವನಳಿದ್ಯೋ ನೀನಂದು ॥ 8 ॥

 ಶ್ರೀಧರ ಶೃಂಗಾರ ಹಾರ ದಿವ್ಯ
ಶ್ರೀವತ್ಸಲಾಂಛನ ಶ್ರೀರಘುವೀರ
ವಾರಿಧಿಸಮಗಂಭೀರ ಧೀರ
ಕ್ರೂರ ರಕ್ಕಸರನೆಲ್ಲರ ಸಂಹಾರಾ ॥ 9 ॥

 ಹೃಷಿಕೇಶ ವೃಂದಾವನದಲಿ ನೀ
ಹರುಷದಿ ಕೊಳಲನೂದುತ ಯಮುನೆಯಲಿ
ಸತಿಯರ ಸಮ್ಮೇಳದಲಿ ನೀ
ಧರಿಸಿದ್ಯೊ ಮಂದಾರಮಾಲೆ ಕೊರಳಲ್ಲಿ ॥ 10 ॥

 ಪದ್ಮನಾಭ ಕೇಳೊ ಘನ್ನ ಪಾದ -
ಪದ್ಮವ ತೋರಿಸೋ ಬೇಗನೆ ನಿನ್ನ
ಮುದ್ದುಮುಖವ ತೋರಿ ಎನ್ನ ಬೇಗ
ಉದ್ಧಾರ ಮಾಡೆಂದು ಬೇಡುವೆ ನಿನ್ನ ॥ 11 ॥

 ದಾಮೋದರ ಗುಣಧಾಮ ಸ್ವಾಮಿ
ದಾನವಾಂತಕ ಯದುಕುಲಸಾರ್ವಭೌಮ
ನೀಲಮೇಘನಿಭಶ್ಯಾಮ ಕೃಷ್ಣ
ನೀಲಾಪತಿಯೆಂಬ ಬಹುಪುಣ್ಯನಾಮ ॥ 12 ॥

 ಸಂಕರ್ಷಣ ದನುಜಹರಣ ದೇವ
ಪಂಕಜಮುಖಿ ದ್ರೌಪದಿ ಮೇಲೆ ಕರುಣ
ಕುಂಕುಮಾಂಕಿತರೇಖಾಚರಣ ನಿಜ
ಕಂಕಣ ಕೇಯೂರ ಕೌಸ್ತುಭಾಭರಣ ॥ 13 ॥

 ವಾಸುದೇವ ಕೇಳೋ ನಿನ್ನ ದಿವ್ಯ
ಸಾಸಿರನಾಮವ ನೆನೆವನೆ ಧನ್ಯ
ಬೇಸರದೆ ಸಲಹಬೇಕೆನ್ನ ತುಸು
ಘಾಸಿಯ ಮಾಡದೆ ಕರುಣಾಸಂಪನ್ನ ॥ 14 ॥

 ಪ್ರದ್ಯುಮ್ನ ನೆಂದು ನಾ ಕರೆದೆ ಎನ್ನ
ಬದ್ಧವಾದ ದುಷ್ಕರ್ಮವ ಕಳೆದೆ
ದುರ್ಬುದ್ಧಿ ದುರ್ವಾಕ್ಯ ಮೆರೆದೆ
ಸಾಧು ಸಜ್ಜನರ ಸಂಗ ನಿನ್ನಿಂದ ಬೆರೆದೆ ॥ 15 ॥

 ಅನಿರುದ್ಧ ಅನುದಿನದಲ್ಲಿ ನೀ
ವಿನಯದಿಂದಿದ್ದು ಗೋಪಿಯರ ಮನೆಯಲ್ಲಿ
ಸನಕಾದಿವಂದ್ಯ ನಿನ್ನಗಲಿ ಒಂದು
ಕ್ಷಣ ಬಿಟ್ಟಿರಲಾರೆ ನಿಲ್ಲೋ ಮನದಲ್ಲಿ ॥ 16 ॥

 ಪುರುಷೋತ್ತಮ ಗಾರು ಸಾಟಿ ಪರಬ್ರಹ್ಮ 
ಸ್ವರೂಪಿಯೆ ನಿನಗಾರೊ ಪೋಟಿ
ಮಹಿಮೆ ಕೇಳಿದರೊಂದು ಕೋಟಿ ನಿನ್ನ
ಹೃದಯದಿ ಬ್ರಹ್ಮಾಂಡ ಕಂಡ ಕಿರೀಟಿ ॥ 17 ॥

 ಅಧೋಕ್ಷಜ ಅಸುರ ಸಂಹಾರಿ ಕೃಷ್ಣ
ಅದ್ಭುತರೂಪ ಶಿಶುಪಾಲನ ವೈರಿ
ಭಕ್ತರ ಪಾಲಿಪ ಶೌರಿ ಅಜಾ -
ಮಿಳ ನಾರಗನೆನ್ನೆ ಕಾಯ್ದೆ ಮುರಾರಿ ॥ 18 ॥

 ನರಸಿಂಹ ರೂಪವ ತಾಳ್ದೆ ಕಂದ
ಕರೆಯೆ ಕಂಭದಿ ಬಂದು ಕರುಣದಿ ಕಾಯ್ದೆ
ದುರುಳ ಹಿರಣ್ಯಕನ ಸೀಳ್ದೆ ಅವನ
ಕರುಳ ಬಗೆದು ವನಮಾಲೆ ಹಾಕಿದೆ ॥ 19 ॥

 ಅಚ್ಯುತ ನೀನತಿ ಮುದ್ದು ಗೋಪಿ
ಬಚ್ಚಿಟ್ಟ ಹಾಲು ಮೊಸರು ಬೆಣ್ಣೆ ಮೆದ್ದು
ತುಚ್ಚಶಕಟನ ಕಾಲಿಲೊದ್ದು ಕಾಡು
ಕಿಚ್ಚು ನುಂಗಿ ಪಾಲಿಸಿದೆಯೊ ಗೆದ್ದು ॥ 20 ॥

 ಜನಾರ್ದನ ರೂಪ ನೀನಾಗಿ ಎನ್ನ
ಮನದ ಕರ್ಮವ ತೊಲಗಿಸೊ ಮುಂದಾಗಿ
ಮುನಿಗಳೆಲ್ಲರು ಒಂದಾಗಿ ಈ
ತನು ನಿನ್ನದೆಂಬರೋ ಕೇಳೋ ನಿಜವಾಗಿ ॥ 21 ॥

 ಉಪೇಂದ್ರ ರೂಪದಿ ಬಂದಿ ಅಪ್ರ -
ಮೇಯ ಕಾಳಿಂಗನ ಮಡುವ ಧುಮುಕಿದಿ
ನಾಗನ ಹೆಡೆಗಳ ತುಳಿದಿ ನಾಗ -
ಪತ್ನಿಯರು ಬೇಡೆ ಪತಿಯ ಪಾಲಿಸಿದಿ ॥ 22 ॥

 ಹರಿ ಹರಿಯೆಂದರೆ ಪಾಪರಾಶಿ
ಹರಿದು ಹೋಯಿತು ಎನ್ನ ಮನದ ಸಂತಾಪ
ಸರ್ವರೊಳಗೆ ವಿಶ್ವರೂಪ ನಿನ್ನ
ನೆರೆ ನಂಬಿದವರನ್ನು ಸಲಹುವ ಭೂಪ ॥ 23 ॥

 ಕೃಷ್ಣ ಕೃಷ್ಣನೆಂಬ ಸೊಲ್ಲ ಕೇಳಿ
ನಷ್ಟವಾಯಿತು ಎನ್ನ ಪಾಪಗಳೆಲ್ಲ
ಮುಟ್ಟಿ ಭಜಿಸಿರೊ ನೀವೆಲ್ಲ ಪುರಂದರ - 
 ವಿಠ್ಠಲ ನಲ್ಲದೆ ಮತ್ತೆ ಬೇರಿಲ್ಲ ॥ 24 ॥
************

ರಾಗ ಮಧ್ಯಮಾವತಿ ಅಟ ತಾಳ

ಅಚ್ಯುತಾನಂತ ಗೋವಿಂದ, ಹರಿ, ಸಚ್ಚಿದಾನಂದ ಸ್ವರೂಪ ಮುಕುಂದ ||ಪ||


ಕೇಶವ ಕೃಷ್ಣ ಮುಕುಂದ, ಹರಿ, ವಾಸುದೇವ ಗುರು ಜಗದಾದಿವಂದ್ಯ

ಯಶೋದೆಯ ಸುಕೃತದ ಕಂದ, ಸ್ವಾಮಿ, ಶೇಷ ಶಯನ ಭಕ್ತ ಹೃದಯಾನಂದ

ನಾರಾಯಣ ನಿನ್ನ ನಾಮವೆನ್ನ, ನಾಲಿಗೆ ಮೇಲಿರಬೇಕೆಂಬ ನೇಮ

ನಾನು ಬೇಡುವೆ ನಿನ್ನ ನಾಮ, ಪ್ರಾಣ, ಪಯಣ ಸಮಯಕೊದಗಲಿ ಗುಣಧಾಮ

ಮಾಧವ ಮಂಗಳಗಾತ್ರ, ಸ್ವಾಮಿ, ಯಾದವ ಕೈಲಾಸ ವಾಸನ ಮಿತ್ರ

ಮಹಿಮೆ ಕೇಳಿದರೆ ವಿಚಿತ್ರ, ನಿನ್ನ, ಮನ ಮೆಚ್ಚಲಿ ಸತ್ಯಭಾಮಾಕಳತ್ರ

ಗೋವಿಂದ ಗೋಪಾಲ ಬಾಲ, ಸೋಳ ಸಾಸಿರ ಗೋಪೇರ ಆನಂದ ಲೀಲಾ

ನೀಲ ಮಣಿ ಮುಕ್ತಾಮಾಲ, ನಿಮ್ಮನೇನೆಂದು ಕರೆಯಲಿ ಸುಗ್ರೀವ ಪಾಲ

ವಿಷ್ಣು ಚಕ್ರವು ಬಂದು ಸುತ್ತಿ, ಮೂರು ಸೃಷ್ಟಿಯನೆಲ್ಲ ತಿರುಗಿ ಬೆನ್ನಟ್ಟಿ

ಕೃಷ್ಣ ಸಲಹೆಂದು ಮೊರೆಯಿಟ್ಟ, ಮುನಿ ಶ್ರೇಷ್ಟಗಿಷ್ಟರ ಮೇಲೆ ಅಭಯವ ಕೊಟ್ಟೆ

ಮಧುಸೂದನ ಮಾರಜನಕ, ಮದಗಜ ಸೀಳಿ ಮಲ್ಲರ ಗೆಲಿದೆ ತವಕ

ಒದಗಿ ಕಂಸನ ಕೊಂದ ಬಳಿಕ, ನೀ, ಮುದುಕಗೆ ಪಟ್ಟವ ಕಟ್ಟಿದ್ಯೋ ಧನಿಕ

ತ್ರಿವಿಕ್ರಮ ತ್ರೈಲೋಕ್ಯನಾಥ, ದೇವ, ತ್ರಿಪುರದ ಸತಿಯರ ವ್ರತಕೆ ವಿಘಾತ

ಯದುವಂಶ ಪಾಂಡವ ಪ್ರೀತ, ಎನ್ನ, ಹೃದಯದೊಳಡಗಿರೊ ಶ್ರೀ ಜಗನ್ನಾಥ

ವಾಮನ ರೂಪಿಲಿ ಬಂದು, ಬಲಿಯ ದಾನವ ಬೇಡಲು ಉಚಿತವು ಎಂದು

ಧಾರೆಯನೆರೆಯಲು ಅಂದು, ಬೆಳೆದು ಧಾರಿಣಿಯೆಲ್ಲವನಳೆದ್ಯೊ ನೀನಂದು

ಶ್ರೀಧರ ಶೃಂಗಾರ ಹಾರ, ದಿವ್ಯ, ಶ್ರೀವತ್ಸಲಾಂಛನ ಶ್ರೀ ರಘುವೀರ

ವಾರಿಧಿ ಸಮ ಗಂಭೀರ, ಧೀರ, ಕ್ರೂರ ರಕ್ಕಸರನೆಲ್ಲರ ಸಂಹಾರ

ಹೃಷಿಕೇಶ ವೃಂದಾವನದಲಿ, ನೀ, ಹರುಷದಿ ಕೊಳಲನೂದುತ ಯಮುನೆಯಲಿ

ಸತಿಯರ ಸಮ್ಮೇಳದಲಿ, ನೀ, ಧರಿಸಿದ್ಯೊ ಮಂದಾರ ಮಾಲೆ ಕೊರಳಲ್ಲಿ

ಪದ್ಮನಾಭ ಕೇಳೊ ಘನ್ನ, ಪಾದ, ಪದ್ಮವ ತೋರಿಸೊ ಬೇಗನೆ ನಿನ್ನ

ಮುದ್ದು ಮುಖವ ತೋರಿಯೆನ್ನ, ಬೇಗ, ಉದ್ಧಾರ ಮಾಡೆಂದು ಬೇಡುವೆ ನಿನ್ನ

ದಾಮೋದರ ಗುಣಧಾಮ, ಸ್ವಾಮಿ, ದಾನವಾಂತಕ ಯದುಕುಲ ಸಾರ್ವಭೌಮ

ನೀಲಮೇಘನಿಭಶ್ಯಾಮ, ಕೃಷ್ಣ, ನೀಳಾಪತಿಯೆಂಬ ಬಹು ಪುಣ್ಯನಾಮ

ಸಂಕರ್ಷಣ ದನುಜಹರಣ, ದೇವ, ಪಂಕಜಮುಖಿ ದ್ರೌಪದಿ ಮೇಲೆ ಕರುಣ

ಕುಂಕುಮಾಂಕಿತ ರೇಖಾ ಚರಣ, ನಿಜ, ಕಂಕಣ ಕೇಯೂರ ಕೌಸ್ತುಭಾಭರಣ

ವಾಸುದೇವ ಕೇಳೊ ನಿನ್ನ, ದಿವ್ಯ, ಸಾಸಿರ ನಾಮವ ನೆನೆವನೆ ಧನ್ಯ

ಬೇಸರದೆ ಸಲಹಬೇಕೆನ್ನ ತುಸ ಘಾಸಿಯ ಮಾಡದೆ ಕರುಣಾ ಸಂಪನ್ನ

ಪ್ರದ್ಯುಮ್ನನೆಂದು ನಾ ಕರೆದೆ, ಎನ್ನ, ಬದ್ಧವಾದ ದುಷ್ಕರ್ಮವ ಕಳೆದೆ

ದುರ್ಬುದ್ಧಿ ದುರ್ವಾಕ್ಯ ಮರೆದೆ, ಸಾಧು, ಸಜ್ಜನರ ಸಂಗ ನಿನ್ನಿಂದ ಬೆರೆದೆ

ಅನಿರುದ್ಧ ಅನುದಿನದಲ್ಲಿ, ನೀ, ವಿನಯದಿಂದಿದ್ದೆ ಗೋಪಿಯರ ಮನೆಯಲ್ಲಿ

ಸನಕಾದಿ ವಂದ್ಯ ನಿನ್ನಗಲಿ, ಒಂದು, ಕ್ಷಣ ಬಿಟ್ಟಿರಲಾರೆ ನಿಲ್ಲೊ ಮನದಲ್ಲಿ

ಪುರುಷೋತ್ತಮಗಾರು ಸಾಟಿ, ಪರ, ಬ್ರಹ್ಮ ಸ್ವರೂಪಿಯೆ ನಿನಗಾರೋ ಪೋಟಿ

ಮಹಿಮೆ ಕೇಳಿದರೊಂದು ಕೋಟಿ, ನಿನ್ನ, ಹೃದಯದಿ ಕಂಡ ಬ್ರಹ್ಮಾಂಡ ಕಿರೀಟಿ

ಅಧೋಕ್ಷಜ ಅಸುರ ಸಂಹಾರಿ, ಕೃಷ್ಣ, ಅದ್ಭುತರೂಪ ಶಿಶುಪಾಲನ ವೈರಿ

ಭಕ್ತರ ಪಾಲಿಪ ಶೌರಿ, ಅಜಾಮಿಳ ನಾರಗನೆನ್ನೆ ಕಾಯ್ದೆ ಮುರಾರಿ

ನರಸಿಂಹ ರೂಪವ ತಾಳ್ದೆ, ಕಂದ, ಕರೆಯೆ ಕಂಭದಿ ಬಂದು ಕರುಣದಿ ಕಾಯ್ದೆ

ದುರುಳ ಹಿರಣ್ಯಕನ ಸೀಳ್ದೆ, ಅವನ, ಕರುಳು ಬಗಿದು ವನಮಾಲೆಯ ಹಾಕಿದೆ

ಅಚ್ಯುತ ನೀನತಿ ಮುದ್ದು, ಗೋಪಿ, ಬಚ್ಚಿಟ್ಟ ಹಾಲು ಮೊಸರು ಬೆಣ್ಣೆ ಮೆದ್ದು

ತುಚ್ಛ ಶಕಟನ ಕಾಲಿಲೊದ್ದು, ಕಾಡು-ಕಿಚ್ಚನು ನುಂಗಿ ಪಾಲಿಸಿದೆಯೊ ಗೆದ್ದು

ಜನಾರ್ದನ ರೂಪ ನೀನಾಗಿ, ಎನ್ನ, ಮನದ ಕರ್ಮವ ತೊಲಗಿಸೊ ಮುಂದಾಗಿ

ಮುನಿಗಳೆಲ್ಲರು ಒಂದಾಗಿ, ಈ, ತನು ನಿನ್ನೆದೆಂಬರೊ ಕೇಳೊ ನಿಜವಾಗಿ

ಉಪೇಂದ್ರ ರೂಪದಿ ಬಂದೆ, ಅಪ್ರ-ಮೇಯ ಕಾಳಿಂಗನ ಮಡುವ ಧುಮುಕಿದೆ

ನಾಗನ ಹೆಡೆಗಳ ತುಳಿದೆ, ನಾಗ-ಪತ್ನಿಯರು ಬೇಡೆ ಪತಿಯ ಪಾಲಿಸಿದೆ

ಹರಿ ಹರಿಯೆಂದರೆ ಪಾಪ-ರಾಶಿ, ಹರಿದು ಹೋಯಿತು ಎನ್ನ ಮನದ ಸಂತಾಪ

ಸರ್ವರೊಳಗೆ ವಿಶ್ವರೂಪ, ನಿನ್ನ, ನೆರೆ ನಂಬಿದವರನು ಸಲಹುವ ಭೂಪ

ಕೃಷ್ಣ ಕೃಷ್ಣನೆಂಬ ಸೊಲ್ಲ, ಕೇಳಿ, ನಷ್ಟವಾಯಿತು ಎನ್ನ ಪಾಪಗಳೆಲ್ಲ

ಮುಟ್ಟಿ ಭಜಿಸಿರೊ ನೀವೆಲ್ಲ, ಪುರಂದರ ವಿಠಲನ್ನದೆ ಮತ್ತೆ ಬೇರಿಲ್ಲ
********