Showing posts with label ನೀರಾಜನವನೆತ್ತಿರೊ ತಿಮ್ಮಯ್ಯಗೆ prasannavenkata. Show all posts
Showing posts with label ನೀರಾಜನವನೆತ್ತಿರೊ ತಿಮ್ಮಯ್ಯಗೆ prasannavenkata. Show all posts

Friday, 1 November 2019

ನೀರಾಜನವನೆತ್ತಿರೊ ತಿಮ್ಮಯ್ಯಗೆ ankita prasannavenkata

by ಪ್ರಸನ್ನವೆಂಕಟದಾಸರು
ನೀರಾಜನವನೆತ್ತಿರೊ ತಿಮ್ಮಯ್ಯಗೆವಾರಿಜೋದ್ಭವಕಾಮರಯ್ಯಗೆ ಪ.

ಆನಕದುಂದುಭಿಕೂಡೆ ಬಂದಧೇನುಕಾವರ ಪಳ್ಳಿಲಿ ನಿಂದನಾನಾ ಕೃತ್ರಿಮಗೈದಾಳರಿಗೆಪಾನಕೆ ಗೋರಸ ಅಪಹಾರಿಗೆ 1

ಆವುಕಾವದಾವಾಗ್ನಿಯ ನುಂಗಿಗೋವಕ್ಕಳ ಸಖರ ಸುಸಂಗಿಪಾವನು ಕಾಲಿನಿಂದ ತುಳಿದಗೆಭಾವಕಿಯರ ಭಾವಕೊಲಿದಗೆ 2

ಕೋಪವಿಲ್ಲದನ ಕೂಡಿ ಹೋಗಿಪಾಪವೆಲ್ಲಳಿದು ಮಾವನನೀಗಿತಾಪವಾರಿಸಿದ ತಂದೆ ತಾಯಿಗೆಭೂಪ ಉಗ್ರಸೇನಾಶ್ರಯಗೆ 3

ಶ್ರೀರುಕ್ಮಿಣಿ ಸತ್ಯೆಯರಾಳಿನರಕಾಸುರನ ತಲೆಹೋಳಿಭೂರಿಕನ್ನೇರ ಕೈವಿಡಿದಗೆದ್ವಾರಕ ನಗರದರಸಗೆ 4

ಕುಂತಿ ಪುತ್ರರ ಸುಖ ಬೆಳೆಸಿಕಾಂತೆ ಪಾಂಚಾಲಿ ಲಜ್ಜಾ ಉಳಿಸಿಭ್ರಾಂತ ಪಾಪಿ ಕೌರವನಾಶಗೆಕಾಂತ ಪ್ರಸನ್ವೆಂಕಟಾದ್ರೀಶಗೆ 5
********