..
kruti by ವೀರನಾರಾಯಣ Veeranarayana
ಕಾಯೋ ತೋಯಜ ನೇತ್ರ ಪ
ಸುಮಿತ್ರ ಪವಿತ್ರ ಚರಿತ್ರ ಅ.ಪ.
ಮಾನವ ಜನುಮದಿ ನೀ ತಂದೆಯೊಎನ್ನ ಗ್ಲಾನಿಯ ಕಳೆದು ಸುಜ್ಞಾನವನಿತ್ತು 1
ಕಠಿಣ ಸಂಸಾರದ ಕಟು ಅನುಭವವ ಸೈಸೆಸಟಿಯಲ್ಲೋ ಇದ ಸಂಕಟವ ಪರಿಹರಿಸಿ 2
ಹೃದಯದಿ ನೆಲಿಸಿ ನೀ ಸದಾವಕಾಲದೊಳುಗದುಗಿನೊಳ್ಮೆರೆಯುವ ವೀರನಾರಾಯಣ 3
***