ರಚನೆ : ಆಚಾರ್ಯ ನಾಗರಾಜು ಹಾವೇರಿ
ಮುದ್ರಿಕೆ : ವೆಂಕಟನಾಥ
ಬ್ರಹ್ಮಣ್ಯ ಗುರುರಾಜಾ
ಕಾಪಾಡೋ । ಪರ ।
ಬ್ರಹ್ಮನ ಸನ್ನಿಧಾನ ಪಾತ್ರಾ ।।
ಅಬ್ಬೂರು ಪುರ ವಾಸಾ ।
ಅಂಬುಜಾಕ್ಷಿ ಪ್ರಿಯನೇ ।।
ರಾಮಾರ್ಯ ಪುತ್ರರಾಗಿ
ಜನಿಸಿ । ಮೂಲ ಪಟ್ಟಾಭಿ ।
ರಾಮನ ಅತಿ
ಮೋದದಿಂದ ಅರ್ಚಿಸಿದ ।।
ಸೂರ್ಯಾಂಶ ಬ್ರಹ್ಮಣ್ಯತೀರ್ಥಾ । ಗುರು ।
ವರ್ಯ ಆರೋಗ್ಯಭಾಗ್ಯ ನೀಡೋ ।।
ನರಸಿಂಹ ನಾಮದಿ
ಧರೆಯೊಳು ಅವತರಿಸಿ ।
ನರಹರಿ ವೆಂಕಟನಾಥನ
ಪೂಜಿಪ ಯತಿಯೇ ।।
****