Showing posts with label ಯಾತರ ಬಲ್ಲತನವೊ ಕೃಷ್ಣಯ್ಯ prasannavenkata. Show all posts
Showing posts with label ಯಾತರ ಬಲ್ಲತನವೊ ಕೃಷ್ಣಯ್ಯ prasannavenkata. Show all posts

Saturday, 16 November 2019

ಯಾತರ ಬಲ್ಲತನವೊ ಕೃಷ್ಣಯ್ಯ ankita prasannavenkata

by ಪ್ರಸನ್ನವೆಂಕಟದಾಸರು
ಯಾತರ ಬಲ್ಲತನವೊ ಕೃಷ್ಣಯ್ಯ ನಿನಗ್ಯಾತರ ಬಲ್ಲತನವೊ ಪ.

ಯಾತರ ಬಲ್ಲತನನಾಥರ ನಮ್ಮ ಸನಾಥರ ಮಾಡಿ ಸಂಪ್ರೀತಿಯ ಬಡಿಸದಿನ್ಯಾತರ 1

ಬಿರುದಂತೆ ಭಕುತರ ಪೊರೆವುದು ಗಡ ನಿನ್ನಸ್ಮರಣೆಗೆ ಮರೆವಿತ್ತು ದುರಿತಕೊಪ್ಪಿಸುವುದಿನ್ಯಾತರ 2

ಬಲ್ಲತನದ ಗುರುತೆಲ್ಲ ದೇಶದೊಳು ನನ್ನಲ್ಲಿ ಅಜ್ಞಾನದ ಬಳ್ಳಿಯ ತೊಡಕಿಸೂದ್ಯಾತರ 3

ನಿಜರವಮಾನದ ಕುಜಕೆ ಪರಶುರಾಮತ್ರಿಜಗವಂದಿತ ನಿನ್ನ ಭಜಕರೊಳಿಡಲೊಲ್ಲದ್ಯಾತರ 4

ದುರಿತಗಿರಿತ ಅರಿಗಿರಿಗಂಜೆ ನಾಮವಜ್ಜರವಿರೆ ಪ್ರಸನ್ವೆಂಕಟರಸ ಮನ್ನಿಸಲೊಲ್ಲದ್ಯಾತರ 5
*******