Showing posts with label ಹಸೆಗೆ ಬಾರೆ ಬಿಸಜ ಮಂದಿರೆ ಕುಸುಮಾಸ್ತ್ರನ ಜನನಿ ಬೇಗ gururama vittala. Show all posts
Showing posts with label ಹಸೆಗೆ ಬಾರೆ ಬಿಸಜ ಮಂದಿರೆ ಕುಸುಮಾಸ್ತ್ರನ ಜನನಿ ಬೇಗ gururama vittala. Show all posts

Thursday, 10 June 2021

ಹಸೆಗೆ ಬಾರೆ ಬಿಸಜ ಮಂದಿರೆ ಕುಸುಮಾಸ್ತ್ರನ ಜನನಿ ಬೇಗ ankita gururama vittala

 ಶ್ರೀ ಗುರುರಾಮವಿಠಲ ದಾಸರ ರಚನೆ 


ಹಸೆಗೆ ಬಾರೆ ಬಿಸಜ ಮಂದಿರೆ

ಕುಸುಮಾಸ್ತ್ರನÀ ಜನನಿ ಬೇಗ ನೀ 

ಎಸೆವ ಪೀಠಕೆ ನಸುನಗುತಲಿ

ದಶರಥ ನೃಪನ ಸೊಸೆಯೆ ಕರುಣದಿ 

ಅ.ಪ

ಮಾನಸಾಷ್ಟದಳ ಕಮಲ ಪೀಠಕೆ

ಸಾಸುರಾಗದಿ ಪತಿ ಸಹಿತವಾಗಿ

ಆನಳಿನಜಾದಿ ಪರಿವಾರದೊಡನೆ

ಆನಂದಾಮೃತ ವೃಷ್ಟಿಯ ಕರೆಸುತೆ 

1

ಕಾಲಲಂದಿಗೆ ಗೆಜ್ಜೆಗಳ್ ಮೆರೆಯೆ

ಮೇಲೆ ಸುರರು ತಾ ಹೊಮಳೆಯ ಸುರಿಯೆ

ಕಾಲ ಕಾಲದಿ ನಿನ್ನೋಲಗವಿತ್ತು

ಪಾಲಿಸಲ್ಕೆ ಭಕ್ತ ಜನರನು 

2

ಮಾಯೆ ಜಾಯೆ ಕೃತಿ ಶಾಂತಿ ರಮೆ ನಿರ |

ಪಾಯ ಸೌಖ್ಯವನು ಪುತ್ರರಿಗೀವುತ

ಕಾಯುವಳು ನೀನೆಂದು ಶೃತಿ ನಿ |

ಕಾಯ ಮುತ್ತೈದೆಯರ್ ಕರೆವರು 

3

ತಟ್ಟೆಯೊಳಗರಿಸಿನ ಕುಂಕುಮಾಕ್ಷತೆಗ

ಳಿಟ್ಟು ಗಂಧ ಪುಷ್ಪಗಳ ಸಹಿತ

ದಿಟ್ಟ ಮುತ್ತೈದೆಯರೆಲ್ಲ ಕರೆವರು

ಕೃಷ್ಣರಾಯನ ಪಟ್ಟದ ರಾಣಿಯೆ 

4

ಹತ್ತುವಿಧದ ವಾದ್ಯಗಳು ಮೊರೆಯೆ

ಚಿತ್ಪ್ರಕಾಶ ಜ್ಯೋತಿಗಳು ಹೊಳೆಯೆ

ಮತ್ತೆ ಗುರುರಾಮ ವಿಠಲನ ಸಹಿತ

ಚಿತ್ತೈಸಮ್ಮ ಚಿತ್ರಮಂಟಪದಲಿ 

5

***