ಶ್ರೀ ಗುರುರಾಮವಿಠಲ ದಾಸರ ರಚನೆ
ಹಸೆಗೆ ಬಾರೆ ಬಿಸಜ ಮಂದಿರೆ
ಕುಸುಮಾಸ್ತ್ರನÀ ಜನನಿ ಬೇಗ ನೀ
ಪ
ಎಸೆವ ಪೀಠಕೆ ನಸುನಗುತಲಿ
ದಶರಥ ನೃಪನ ಸೊಸೆಯೆ ಕರುಣದಿ
ಅ.ಪ
ಮಾನಸಾಷ್ಟದಳ ಕಮಲ ಪೀಠಕೆ
ಸಾಸುರಾಗದಿ ಪತಿ ಸಹಿತವಾಗಿ
ಆನಳಿನಜಾದಿ ಪರಿವಾರದೊಡನೆ
ಆನಂದಾಮೃತ ವೃಷ್ಟಿಯ ಕರೆಸುತೆ
1
ಕಾಲಲಂದಿಗೆ ಗೆಜ್ಜೆಗಳ್ ಮೆರೆಯೆ
ಮೇಲೆ ಸುರರು ತಾ ಹೊಮಳೆಯ ಸುರಿಯೆ
ಕಾಲ ಕಾಲದಿ ನಿನ್ನೋಲಗವಿತ್ತು
ಪಾಲಿಸಲ್ಕೆ ಭಕ್ತ ಜನರನು
2
ಮಾಯೆ ಜಾಯೆ ಕೃತಿ ಶಾಂತಿ ರಮೆ ನಿರ |
ಪಾಯ ಸೌಖ್ಯವನು ಪುತ್ರರಿಗೀವುತ
ಕಾಯುವಳು ನೀನೆಂದು ಶೃತಿ ನಿ |
ಕಾಯ ಮುತ್ತೈದೆಯರ್ ಕರೆವರು
3
ತಟ್ಟೆಯೊಳಗರಿಸಿನ ಕುಂಕುಮಾಕ್ಷತೆಗ
ಳಿಟ್ಟು ಗಂಧ ಪುಷ್ಪಗಳ ಸಹಿತ
ದಿಟ್ಟ ಮುತ್ತೈದೆಯರೆಲ್ಲ ಕರೆವರು
ಕೃಷ್ಣರಾಯನ ಪಟ್ಟದ ರಾಣಿಯೆ
4
ಹತ್ತುವಿಧದ ವಾದ್ಯಗಳು ಮೊರೆಯೆ
ಚಿತ್ಪ್ರಕಾಶ ಜ್ಯೋತಿಗಳು ಹೊಳೆಯೆ
ಮತ್ತೆ ಗುರುರಾಮ ವಿಠಲನ ಸಹಿತ
ಚಿತ್ತೈಸಮ್ಮ ಚಿತ್ರಮಂಟಪದಲಿ
5
***
No comments:
Post a Comment