ರಾಗ ನಾದನಾಮಕ್ರಿಯ ಅಟತಾಳ
ಲಂಗೋಟಿ ಬಲುವೊಳ್ಳೆದಣ್ಣ, ಒಬ್ಬರ್-
ಹಂಗಿಲ್ಲದೆ ಮಡಿಗೆ ಒದಗುವುದಣ್ಣ ||ಪ||
ಬಡವರಿಗಾಧಾರವಣ್ಣ, ಈ ಲಂಗೋಟಿ
ಬೈರಾಗಿಗಳ ಭಾಗ್ಯವಣ್ಣ
ಕಡುಕಳ್ಳರಿಗೆ ಗಂಡ, ಮಡಿಧೋತ್ರಗಳ ಮಿಂಡ
ನಡುಗುವ ಸಮಯಕ್ಕೆ ಮಡಿಗೆ ಒದಗುವಂಥ ||
ಜಿತಮನ ಸನ್ಯಾಸಿಗಳಿಗಿದೆ ಕೌಪೀನ
ವ್ರತವುಳ್ಳ ಬ್ರಹ್ಮಚಾರಿಗೆ ಮುಖ್ಯವು
ಅತಿಶಯವಿದೆ ಆಂಜನೇಯ ನಾರದರಿಗೆ
ಗತಿಯಿಲ್ಲದವರಿಗೆ ಮಿತವಾಗಿ ಇರುವಂಥ ||
ದುಡ್ಡು ಮುಟ್ಟದಂತೆ ದೊರಕುವ ವಸ್ತುವು
ದೊಡ್ಡ ಅರಣ್ಯದಿ ಭಯವಿಲ್ಲವು
ಹೆಡ್ಡರೆಂಬುವರೇನೊ ಲಂಗೋಟಿ ಜನರನ್ನು
ದೊಡ್ಡವರೆಂದು ವಂದಿಸುವರು ಯತಿಗಳ ||
ಮೋಕ್ಷ ಮಾರ್ಗಕೆ ಕಲ್ಪವೃಕ್ಷವೀ ಲಂಗೋಟಿ
ಭಿಕ್ಷಗಾರರಿಗೆಲ್ಲ ಅನುಕೂಲವು
ತತ್‍ಕ್ಷಣದೊಳಗೆ ಕಾರ್ಯಗಳ ತೂಗಿಸಿ ಮಾನ-
ರಕ್ಷಣೆಗೆ ಬಹು ರಮ್ಯವಾಗಿರುವಂಥ ||
ಮಡಿವಾಳರಿಗೆ ಶತ್ರು, ಮಠದಯ್ಯಗಳ ಮಿತ್ರ
ಪೊಡವಿಯೊಳ್ ಯಾಚಕರಿಗೆ ನೆರವು
ದೃಢಭಕ್ತ ಬಲಿಚಕ್ರವರ್ತಿಗೋಸ್ಕರ ನಮ್ಮ
ಒಡೆಯ ಶ್ರೀ ಪುರಂದರವಿಠಲ ದರಿಸಿದಂಥ ||
***
ಲಂಗೋಟಿ ಬಲುವೊಳ್ಳೆದಣ್ಣ, ಒಬ್ಬರ್-
ಹಂಗಿಲ್ಲದೆ ಮಡಿಗೆ ಒದಗುವುದಣ್ಣ ||ಪ||
ಬಡವರಿಗಾಧಾರವಣ್ಣ, ಈ ಲಂಗೋಟಿ
ಬೈರಾಗಿಗಳ ಭಾಗ್ಯವಣ್ಣ
ಕಡುಕಳ್ಳರಿಗೆ ಗಂಡ, ಮಡಿಧೋತ್ರಗಳ ಮಿಂಡ
ನಡುಗುವ ಸಮಯಕ್ಕೆ ಮಡಿಗೆ ಒದಗುವಂಥ ||
ಜಿತಮನ ಸನ್ಯಾಸಿಗಳಿಗಿದೆ ಕೌಪೀನ
ವ್ರತವುಳ್ಳ ಬ್ರಹ್ಮಚಾರಿಗೆ ಮುಖ್ಯವು
ಅತಿಶಯವಿದೆ ಆಂಜನೇಯ ನಾರದರಿಗೆ
ಗತಿಯಿಲ್ಲದವರಿಗೆ ಮಿತವಾಗಿ ಇರುವಂಥ ||
ದುಡ್ಡು ಮುಟ್ಟದಂತೆ ದೊರಕುವ ವಸ್ತುವು
ದೊಡ್ಡ ಅರಣ್ಯದಿ ಭಯವಿಲ್ಲವು
ಹೆಡ್ಡರೆಂಬುವರೇನೊ ಲಂಗೋಟಿ ಜನರನ್ನು
ದೊಡ್ಡವರೆಂದು ವಂದಿಸುವರು ಯತಿಗಳ ||
ಮೋಕ್ಷ ಮಾರ್ಗಕೆ ಕಲ್ಪವೃಕ್ಷವೀ ಲಂಗೋಟಿ
ಭಿಕ್ಷಗಾರರಿಗೆಲ್ಲ ಅನುಕೂಲವು
ತತ್‍ಕ್ಷಣದೊಳಗೆ ಕಾರ್ಯಗಳ ತೂಗಿಸಿ ಮಾನ-
ರಕ್ಷಣೆಗೆ ಬಹು ರಮ್ಯವಾಗಿರುವಂಥ ||
ಮಡಿವಾಳರಿಗೆ ಶತ್ರು, ಮಠದಯ್ಯಗಳ ಮಿತ್ರ
ಪೊಡವಿಯೊಳ್ ಯಾಚಕರಿಗೆ ನೆರವು
ದೃಢಭಕ್ತ ಬಲಿಚಕ್ರವರ್ತಿಗೋಸ್ಕರ ನಮ್ಮ
ಒಡೆಯ ಶ್ರೀ ಪುರಂದರವಿಠಲ ದರಿಸಿದಂಥ ||
***
pallavi
langOTi baluvoLLedaNNa obbarhangillade maDige odaguvudaNNa
caraNam 1
baDavarigAdhAravaNNa I langOTi bairAgigaLa bhAgyavaNNa kaDu
kaLLarige gaNDa maDidhotragaLa miNDa naDuguva samayakke maDige odaguvantha
caraNam 2
jitamana sanyAsigaLinde kaupIna vratavuLLa brahmacArige mukhyavu
atishayavide AnjanEya nAradarige gatiyilladavarige mitavAgi iruvantha
caraNam 3
duDDu muTTadante dorakuva vastuvu doDDa arNyadi bhayavillavu
heDDarembuvarEno langOTi janarannu doDDavarendu vandisuvaru yatigaLa
caraNam 4
mOkSa mArgake kalpavrSavI langOTi bhikSakArarigella anukUlavu
tatkSaNadoLage kAryagaLa tUgisi mana rakSaNege bahu ramyavAgiruvantha
caraNam 5
maDivALarige shatru maDadayyagaLa mitra poDaviyoL yAcakarige neravu
drDha bhakta bali cakravarti gOskara namma oDeya shrI purandara viTTala darisidantha
***