Showing posts with label ಶರಣು ವೆಂಕಟನಾಥ ಪೊರೆನಿಜ ಕರುಣಿ ಖಗವರೂಥ gurujagannatha vittala. Show all posts
Showing posts with label ಶರಣು ವೆಂಕಟನಾಥ ಪೊರೆನಿಜ ಕರುಣಿ ಖಗವರೂಥ gurujagannatha vittala. Show all posts

Wednesday, 1 September 2021

ಶರಣು ವೆಂಕಟನಾಥ ಪೊರೆನಿಜ ಕರುಣಿ ಖಗವರೂಥ ankita gurujagannatha vittala

 ..

ಶರಣು ವೆಂಕಟನಾಥ ಪೊರೆನಿಜ

ಕರುಣಿ ಖಗವರೂಥ ಪ

ನತಜನಕೃತಸರಣಾ ದಿತಿಸುತ

ಮಥನನೆ ತವಚರಣಾ

ಸತತ ಎನಗಾಭರಣಾ ಎಂದೆಂಬೆನೊ

ಗತರೋಗಜರಾಮರಣಾ 1

ಸನಕಾದಿಮುನಿಮಾನ್ಯ ನಿನ್ನವ

ರಣುಗನೆನಿಸೋ ಎನ್ನಾ

ಅನುಪಮಗುಣರನ್ನಾ ಒಲಿದು ಕಾಂ

ಚನಗಿರಿವಾಸ ಎನ್ನಾ 2

ಎನ್ನ ದೋಷಗಳೆಲ್ಲ ನೋಡzಲೆ ಪ್ರ

ಪನ್ನಜನರವತ್ಸಲಾ

ಅನ್ನಿಗ ನಾನಲ್ಲ ಶ್ರೀಗುರು ಜ -

ಗನ್ನಾಥ ವಿಠಲಾ 3

***