Showing posts with label ಅಮಮ ಎನಿತಾದ್ಭುತಮಹಿಮೆ ಪೊಗಳನು uragadrivasa vittala. Show all posts
Showing posts with label ಅಮಮ ಎನಿತಾದ್ಭುತಮಹಿಮೆ ಪೊಗಳನು uragadrivasa vittala. Show all posts

Friday, 6 August 2021

ಅಮಮ ಎನಿತಾದ್ಭುತಮಹಿಮೆ ಪೊಗಳನು ankita uragadrivasa vittala

 ಹನುಮ - ಭೀಮ - ಮಧ್ವರು

ಅಮಮ ಎನಿತಾದ್ಭುತಮಹಿಮೆ ಪೊಗಳನು

ಪಮ ದೇವ ಜೀವೋತ್ತಮ ಸುರಸಾರ್ವಭೌಮ ಹನುಮ ಪ


ಭೀಮ ರಿಪುಕುಲಧೂಮ ಯತಿಕುಲಸೋಮ

ಶ್ರೀಮದಾನಂದ ಮುನಿಮಹಿಮಾಅ.ಪ


ಜೀಯ ಈ ಪಯೋಜಾಂಡದೊಳಿನ್ನೆಣೆಯಿಲ್ಲ ಬಲದೊಳು

ಶೌರ್ಯ ಕಾಯನೋಡಲು ಆಖಣಾಶ್ಮಸಮನು

ನಿನ್ನೊಳು ಹರಿಯರೂಪಗಳೆನಿತು ಇಹುದಯ್ಯ

ಶ್ರೀಯರಸನ ಪೂರ್ಣಕರುಣಾಕಟಾಕ್ಷ

ನಿನ್ನಲ್ಲಿಹುದು ಇನ್ನೆಷ್ಟಯ್ಯ

ಶ್ರೀಯರಸ ಶ್ರೀ ಶಿಂಶುಮಾರನು ನಿನ್ನ ಮುಖಕಮಲದಲ್ಲಿಹನೂ

ವಾಯುಮೂರುತಿ ನಿನ್ನ ನಾಸಾಗ್ರದೊಳು ಶೋಭಿಪ

ಮತ್ಸ್ಯಮೂರುತಿಯು ಜೀಯ ನಿನ್ನಯ ನಾಸಪೃಷ್ಠದಿ

ಕೂರ್ಮ ಮೂರುತಿಯು ಅಲ್ಲಿ ನೆಲೆಸಿಹನು ನಯನದ್ವಯದಿ

ಕಪಿಲವಿಷ್ಣು ಶ್ರವಣದ್ವಯಗಳೊಳು ಕೃಷ್ಣರಾಮರು

ಆರ್ಯ ಧನ್ವಂತ್ರಿಯು ಗ್ರೀವಲಲಾಟದೊಳು

ನಾರಾಯಣ ಇಹನು 1

ಅಹಹ ಬಾಹ ದುರಿತದ ರಾಶಿಗಳ ಕಾನನಕೆ ನೀನೆ ದಾವ

ಬಾಹುದ್ವಯಗಳೋಳ್ಕಲ್ಕಿ ಬುದ್ಧರೂಪಿರೆ

ಬಾಹುಬಲವಿನ್ನೆಷ್ಟಯ್ಯ ಅಹುದು ಪವನಹಸ್ತದೊಳ್

ಪಾವನ್ನ ಶ್ರೀ ಬಾದಾರಾಯಣ ಕಂಗೊಳಿಪನಯ್ಯ

ಪಾಹಿ ಪವನನೆ ಪಾದದ್ವಯದೊಳು ಹಂಸನಾಮಕ

ಶ್ರೀ ಹರಿಯು ನೆಲೆಸಿಹನು

ಅಹುದಹುದು ಕೇಶವ ನಿನ್ನ ಪಾದ

ಮಧ್ಯಸ್ಥಾನದಲಿ ಸಲೆ ಬೆಳಗುತಿಹನು

ಮಹಮಹಿಮ ನಿನ್ನಯ ಪಾದಪೃಷ್ಠದಿ

ಹೃಷೀಕೇಶ ಹರಿಯು ನಿಂತಿಹನು

ಇಹರಯ್ಯ ದಕ್ಷಿಣ ವಾಮಜಾನುಗಳಲಿ ಯಜ್ಞ ಶ್ರೀಧರರಿಹರು

ಮಹಿದಾಸವಾಮನ ಕಟಿ ಪ್ರದೇಶದಿ ದಿಟ್ಟರಾಗಿಹರು 2

ಪ್ರಾಣ ನೀ ಜಗತ್ರಾಣ ವನಮಾಲಸ್ಕಂದನೊಳಿಂದ್ರ ಶೇಷರುಗಳ್

ಪ್ರಾಣವಾಯು ದಿಗ್ದೇವನೆ ನಿನ್ನ

ದಕ್ಷಿಣದಲ್ಲಿಹ ವನಮಾಲೆಯಲ್ಲಿಹರು

ಗುಣನಿಧಿಯೆ ತದುಪರಿ ಸೂರ್ಯವರುಣಅಶ್ವಿನಿಗಳೆಲ್ಲ

ನಿನ್ನಯ ವನಮಾಲೆಯಲಿಹರು

ಎಣಿಸೆ ದಕ್ಷಪ್ರಜಾಪತಿಯು ನಿನ್ನ

ವಾಮ ವನಮಾಲದೊಳಲ್ಲಿ ಇರುತಿಹನು

ಮಣಿದು ಸೇವಿಪ ಜಯಂತ ಮನುಯಮ

ತದನಂತರ ವನಮಾಲೆಯಲ್ಲಿಹರು

ಜಾಣ ಬೃಹಸ್ಪತಿ ದಕ್ಷಿಣ ವನಮಾಲದೊಳು

ಆಶ್ರಯಿಸಿ ತಾವಿಹರು

ಪ್ರಾಣ ಅಪಾನ ವ್ಯಾನೋದಾನ ಸಮಾನ

ವನಮಾಲದಲ್ಲಿಹರು 3

ಬೋಧ ನಿನ್ನನಾಭೀಕಮಲದಿ

ಪದುಮನಾಭನು ಸಲೆ ಬೆಳಗುತಿಹನು

ಮಾಧವ ಮಧುಸೂದನರು ನಿನ್ನೊಳು

ವಾಮದಕ್ಷಿಣ ಕುಕ್ಷಿಯೊಳಿಹರು

ಹೃದಯಮಧ್ಯದಿ ಪ್ರಾಜ್ಞನಾಮಕ

ಹರಿಮೂರುತಿ ನಿನ್ನಾಂತರದಿಂದ ನಿಂತಿಹನು

ಪಾದಪಾಶ್ರ್ವಗಳಲ್ಲಿ ಋಷಭ ಗೋವಿಂದ ಮೂರುತಿ

ಅಲ್ಲೆ ಇರುತಿಹರು

ಮುದದಿ ನಿನ್ನಯ ವಕ್ಷದೊಳು ಶ್ರೀ ವರಹಮೂರುತಿ

ಅಲ್ಲೆ ನೆಲೆಸಿಹನು

ಎದುರಿಲ್ಲ ನಿನಗೆ ಕಪೋಲದೊಳು ಶ್ರೀ ವಾಸುದೇವನು ಇಹನು

ವಿಧಿವಾಯುಗಳು ನಿನ್ನಯ ವಾಮಭುಜದೊಳು

ಮುದದಿ ನಲಿಯುತಿಹರು

ವಿಧಿ ವಾಯುಸತಿಯರು ದಕ್ಷಿಣಭುಜದೊಳು ನುತಿಸುತಿಹರು 4

ಪವನಶಕ್ತಿ ಹನ್ನೆರಡೆಲ್ಲ-ನಿನ್ನಯ ಹೃದಯದಾಭರಣ

ಪವನಿಸಿರ್ಪುದು ಕ್ರಮದಿ-ಶಕ್ತಿ ಪ್ರತಿಷ್ಠೆ ಸಂವಿತ್ ಸ್ಪೂರ್ತಿ

ಪ್ರವೃತ್ತಿ ಭವಹಾರಿ ನಿನಗೆ ಕಲಾವಿದ್ಯಾಮತಿ ನಿಯತಿ

ಮಾಯಾ ಕಾಲಪುರುಷ ಈ ಪರಿಯು

ಜೀವೇಶ ನಿನ್ನಯ ಮಹಿಮ ಗುಣಗಳ ಪೊಗಳಲಳವೇ

ಹರಮುಖಾದ್ಯರಿಗೆ ಜೀವರೆಸಗುವ ಕಾರ್ಯಗಳು

ಲವಲೇಶ ನಿನ್ನ ಬಿಟ್ಟು ನಡೆಯದೊ

ಪವಮಾನಮೂರುತಿ ಹರಿಯ ಕರುಣಾಕಟಾಕ್ಷ ನಿನ್ನೊಳು

ಇಟ್ಟುಇರುವುದು ಇನ್ನೆಷ್ಟೊ

ದೇವ ನಿನ್ನಯ ಖ್ಯಾತಿ ಎಷ್ಟೋ ಬಲದಿ ಶೇಷಶೈಲವ ತಂದೆ

ಕಾವುದಯ್ಯ ಶ್ರೀ ವೇಂಕಟೇಶನ ಪ್ರೇಮದ ದೂತ 5

****