Showing posts with label ನಿನ್ನ ದಾಸನು ನಾನು ಎಂತಾಹೆನಯ್ಯಅನ್ನಂತ hayavadana NINNA DAASANU NAANU ENTAAHENAYYA ANNANTA. Show all posts
Showing posts with label ನಿನ್ನ ದಾಸನು ನಾನು ಎಂತಾಹೆನಯ್ಯಅನ್ನಂತ hayavadana NINNA DAASANU NAANU ENTAAHENAYYA ANNANTA. Show all posts

Saturday 11 December 2021

ನಿನ್ನ ದಾಸನು ನಾನು ಎಂತಾಹೆನಯ್ಯಅನ್ನಂತ ankita hayavadana NINNA DAASANU NAANU ENTAAHENAYYA ANNANTA


ನಿನ್ನ ದಾಸನು ನಾನು ಎಂತಾಹೆನಯ್ಯಅನ್ನಂತ ಅಪರಾಧಕಾಕರಾದವನು ಪ.


ಅರುಣೋದಯವ ಜರಿದು ಆಹ್ನಿಕ ಕರ್ಮವ ತೊರೆದುಪೊರೆವ ನಿನ್ನಡಿಯ ಮರೆದುದುರುಳರಿಗೆ ಬಾಯ್ದೆರೆದು ದೈನ್ಯದಲಿ ಪಲ್ಗಿರಿದುಮರಿಯಾದೆಗೆಟ್ಟು ತಿರಿದುಇರುಳು ಹಗಲೆನ್ನದೆ ಈ ವಿಧದಿ ಹೊಟ್ಟೆಯಹೊರೆದು ಇದು ಪುಣ್ಯ ಇದು ಪಾಪವೆಂದರಿಯದವ 1


ಜಟ್ಟಿಗಳ ಮನೆಯ ನಾಯಂತೆ ಒಳ್ಳೆಬಟ್ಟೆಗಳತೊಟ್ಟವರ ಹಿಂದೆ ತಿರುಗಿಅಟ್ಟುಂಡು ಬಾಳಿಬದುಕಿದ ತಮ್ಮ ಹಿರಿಯರುಕೆಟ್ಟು ಮುರಿದುದನು ಪೇಳಿಉಟ್ಟ ಅರಿವೆಯ[ಕೋರಿ] ಹೊಟ್ಟೆ ಬಾಯನೆ ತೋರಿಕೊಟ್ಟುದಕೆÉ ತೃಪ್ತನಾಗದೆ ಅವರ ಬಯ್ವವನು 2


ವೃತ್ತಿ ಅಲ್ಲದ ಶೂದ್ರ ವೃತ್ತಿಗಳನನುಸರಿಸಿ ಅ-ಕೃತ್ಯ ಶತಗಳನು ಮಾಡಿಸತ್ಯ ಶೌಚಂಗಳ ಬಿಟ್ಟು ಶ್ರವಣ ಮನನಾದಿ ಪ್ರ-ಸಕ್ತಿಗಳ ಹೋಗಲಾಡಿಉತ್ತಮರು ತಾಯಿತಂದೆ ಗುರುಹಿರಿಯರುಗಳಅರ್ಥಗಳನಪಹರಿಸಿ ಅವರ ನಿಂದಿಸುವನು 3


ಪರ್ವ ಉಪರಾಗ ದ್ವಾದಶಿ ಅಯನಗಳಲ್ಲಿಸರ್ವವಿಹಿತಗಳ ಮೀರಿಉರ್ವಿಯೊಳು ಉಳ್ಳ ಯೋಗ್ಯರನೆಲ್ಲ ಹಳಿದೆನ್ನನಿರ್ವಾಹಗಳನೆ ತೋರಿದುರ್ವಿಚಾರದಿ ಸ್ವಲ್ಪಧನಕಾಗಿ ಎನ್ನೊಳಿಹಪೂರ್ವಸಂಚಿತಮಂತ್ರ ತುಚ್ಛರಿಗೆ ಮಾರಿದವ 4


ಛಲ ಚಾಡಿ ಡಂಭ ಮಿಥ್ಯಾಜ್ಞಾನ ದುರ್ವಿಷಯಕುಲಸತಿಯ ಕೂಡೆ ಕಲಹಕಳವು ಕಠಿಣೋಕ್ತಿ ದುಷ್ಟಾನ್ನಭೋಜನ ಮದುವೆ-ಗಳ ಮುರಿವ ಪಾಪಚಿಂತೆಹಳಿವ ಹರಿವಾಸರ ವ್ರತಭಂಗದಿಂದ ನಾನಾಗಿಸುಲಭ ಹಯವದನನ್ನ ಮರೆತ್ಹಾಳುಹರಟೆಯವ 5

***