Showing posts with label ವೈವಾಹ ಮಾಡಿದೆ ವಿಭವ guruvijaya vittala suladi ವಿವಾಹ ಸುಳಾದಿ VAIVAAHA MAADIDE VIBHAVA VIVAAHA SULADI. Show all posts
Showing posts with label ವೈವಾಹ ಮಾಡಿದೆ ವಿಭವ guruvijaya vittala suladi ವಿವಾಹ ಸುಳಾದಿ VAIVAAHA MAADIDE VIBHAVA VIVAAHA SULADI. Show all posts

Sunday, 8 December 2019

ವೈವಾಹ ಮಾಡಿದೆ ವಿಭವ guruvijaya vittala suladi ವಿವಾಹ ಸುಳಾದಿ VAIVAAHA MAADIDE VIBHAVA VIVAAHA SULADI


1st Audio by Mrs. Nandini Sripad



ಶ್ರೀ ಮೊದಲಕಲ್ಲು ಶೇಷದಾಸಾರ್ಯ ವಿರಚಿತ 
(ಗುರುವಿಜಯವಿಠ್ಠಲ ಅಂಕಿತ)

 ವಿವಾಹ ಸುಳಾದಿ 

 ರಾಗ ಕಾಪಿ 

 ಧ್ರುವತಾಳ 

ವೈವಾಹ ಮಾಡಿದೆ ವಿಭವ ಪೂರ್ವಕದಿಂದ 
ಆವದು ಇದಕೆ ಸಮವೆಂದು ತಿಳಿದು 
ಭಾವದಲ್ಲಿ ಹಿಗ್ಗಿ ಬಳಲಿದರೆ ಇದಕೆ
ಭಾವಜ್ಞರಾದವರು ಮೆಚ್ಚುವರೇ
"ಯದ್ವೇವ ವಿದ್ಯಯಾ ಕುರುತೆ ಶ್ರದ್ಧಯಾ
ತದೇವ ವೀರ್ಯವತ್ತರಂ ಭವತಿ ಇತ್ಯುಪನಿಷದ್"
ಯದೇವ ವಿದ್ಯಯಾ ಕರೋತಿ ಶ್ರದ್ಧಾಯೋಪನಿಷದಾ
ತದೈವ ವೀರ್ಯವತ್ತರಂ ಭವತಿ
ಏವಮಾದಿಗಳು ಈಪರಿ ವರಲುತಿರೆ ಅ - 
ಭಾವ ಜ್ಞಾನದಿಂದ ಅಹಂಕಾರದಿ 
ಸಾವಿರ ಸಂಖ್ಯವಾದ ಕೃತುಗಳು ಮಾಡಲೇಕೆ 
ದೇವ ದೇವನು ದೃಷ್ಟಿಯಿಂದ ನೋಡಾ 
ಅವನಿಯೊಳಗೆ ಅಲ್ಪರಮಧ್ಯ ಕೀರ್ತಿ 
ಬಾಹೋವದಲ್ಲದೆ ಅದರಿಂದೇನಾಹದೊ 
ಕೇವಲ ಶ್ರಮದಿಂದ ಅರ್ಥ ಸಂಪಾದಿಸಿ 
ಆವದು ಸಾಲದದಕೆ ಋಣವ ಮಾಡಿ 
ಧಾವಂತ ಈ ಪರಿ ಘಟನವಾದ ಕರ್ಮ 
ಪಾವನ್ನವಾದ ಪುಣ್ಯವಾಗದಿರೆ 
ಭುವನದಲ್ಲಿ ಬರಿದೆ ಆಯಾಸ ಬಡಲೇಕೆ 
ವೈವಾಹ ಮಾಡುವ ವಿಧಿ ಬ್ಯಾರುಂಟು 
ಆವಾವ ಕರ್ಮದಿಂದ ಮೂರೇಳು ಗೋತ್ರದವರು 
ಪವಿತ್ರರಾಗುವರು ಪಾಪದಿಂದ 
ಸಾವಧಾನದಿ ಕೇಳು ಭಕುತಿಯಿಂದಲಿ ಮನವೆ 
ನೋವು ನಿನಗಾಗದು ಭವದಲಿಂದ 
ಕಾವ ಕರುಣನಿಧಿ ಗುರುವಿಜಯವಿಠ್ಠಲರೇಯಾ 
ಸೇವಕನೆಂದವಗೆ ಸುಖವೀವನೋ ॥ 1 ॥

 ಮಟ್ಟತಾಳ 

ಮಕ್ಕಳು ಎನಗಾರು ಅವರಿಗೆ ನಾನಾರು 
ರಕ್ಕಸಾಂತಕ ತಾನೆ ಕರ್ಮಾನುಬಂಧದಲಿ 
ಮುಖ್ಯವಾಗಿ ತನ್ನ ಕ್ಲಿಪ್ತಾನುಸಾರದಲಿ 
ಅಕ್ಕರದಿಂದಲಿ ಆತ್ಮಜಗೆ ಪಿತನು 
ಸೌಖ್ಯದ ನಿಮಿತ್ತ ಸತಿ ಮನೆ ಧನ ಪಶು 
ಮಿಕ್ಕಾದವೆಲ್ಲ ಇತ್ತಿಹ್ಯ ತೆರದಂತೆ 
ಮಕ್ಕಳು ಮೊದಲಾದ ಸಂಪದವಿಯ ತಾನೆ ಆ - 
ಸಕ್ಕುತಿ ಯಿಂದಲಿ ಎನಗೆ ಇತ್ತಿಹನೆಂತೆಂದು 
ಮುಕ್ಕುಂದನಾರಾಧನಿಗೆ ಉಪಕರಣಗಳೆನ್ನು 
ಕಕ್ಕುಲಾತಿಯಲಿಂದ ನನ್ನದೆಂಬೊ ಭ್ರಾಂತಿ 
ಸಿಕ್ಕದಲೆ ಗುಣಿಸು ಕಲಿಕೃತ ಮೋಹವನು 
ಧಿಕ್ಕರಿಸು ಜ್ಞಾನ ಬಾಹುಳ್ಯದಿ ಸತತ 
ವಿಕ್ರಮದಿಂದಲ್ಲಿ ಇಂದ್ರಿಯಗ್ರಾಮಗಳು 
ಆಕ್ರಮಿಸಿ ಬರಲು ಪ್ರಾಪ್ತವಾದ ಮೋಹ 
ಪ್ರಖ್ಯಾತಗರ್ಪಿಸುವುದು ಸಂಶಯ ಮಾಡದಲೆ 
ಭಕ್ತಿಪೂರ್ವಕದಿಂದ ಅರ್ಚಿಸು ಜ್ಞಾನದಲಿ 
ಭೋಕ್ತಸಾರ ಗುರುವಿಜಯವಿಠ್ಠಲರೇಯ 
ದಕ್ಕುವನು ಇದನು ಗ್ರಹಿಸಿದ ನರನಿಗೆ ॥ 2 ॥

 ತ್ರಿವಿಡಿತಾಳ 

ಹೃದಯದೊಳಗೆ ಹರಿ ಪ್ರೇರಿಸಿದದರೊಳು 
ಮುದದಿ ನುಡಿವೆ ಗುರು ಕೃಪಾಬಲದಿ
ಒದಗಿ ಕೇಳುವದು ವರನ ಲಕ್ಷಣವನ್ನು , ಈ 
ವಿಧದಿ ಚಿಂತಿಸುವದು ಗುಪ್ತದಿಂದ 
ಅಧಮ ಜನರುಗಳಿಗೆ ಅಂತು ತಿಳಿಯಗೊಡದೆ 
ಪದೋಪದಿಗೆ ನಿನ್ನ ಹೃದಯದಲ್ಲಿ 
ಪದುಮನಾಭನು ಅವರವರ ನಾಮರೂಪ ಬಿ - 
ಡದೆ ಧರಿಸಿಹನೆಂಬೊ ಕೃತ್ಯದಿಂದ
ವಧುವರ ಶಬ್ದವಾಚ್ಯ ವಾಸುದೇವನೆ ಸರಿ 
ಇದರೊಳು ಸೂಕ್ಷ್ಮ ಉಂಟು ಗ್ರಹಿಸುವದು 
ಪದುಮಸಂಭವ ವಾಯು ಖಗ ಅಹಿಪೇಶ ಸುರಪ 
ಮದನ ಪ್ರಾಣನಿರುದ್ಧ ಮನು ಗುರು 
ಸಾದಕ್ಷ ಪ್ರಜೇಶ್ವರ ಪ್ರವಹ ಯಮ ಶಶಿ 
ಆದಿತ್ಯ ವರುಣಾದಿ ಸುರರೆಲ್ಲರು 
ಕಾದುಕೊಂಡಿಪ್ಪರು ದೇವನ ಅನುಜ್ಞದಿ 
ಸಾದರದಲಿ ತಿಳಿ ಇವರ ವಿಚಾರ 
ಬದರಸಂಕಾಶ ಗುರುವಿಜಯವಿಠ್ಠಲರೇಯನ 
ಪದಗಳರ್ಚಿಪದಕ್ಕೆ ಇದೇ ದ್ವಾರವು ॥ 3 ॥

 ರೂಪಕತಾಳ 

ಸುರಮುನಿ ಮೊದಲಾದ ಋಷಿಯ ಜನರೆಲ್ಲ 
ಸರಿಯದೆ ನಿಂದಿಹರೂ ಸೂಕ್ಷ್ಮದಿಂದ 
ಸುರಗಾಯಕ ವಿಡಿದು ನರ ನದಿ ಪರ್ವತ 
ಪರಮ ಪವಿತ್ರ ಸಪ್ತ ವನಧಿಗಳು 
ಅರಸು ತನ್ನಯ ನಿಜ ಭೃತ್ಯರಿಂದಲಿ ಕೂಡಿ 
ಇರುವೊ ಸೊಬಗಿನಂತೆ ಹರಿಯು ತನ್ನ 
ಪರಿವಾರ ಸಹ ವ್ಯಾಪ್ತಿ ವಿಭೂತಿ ಎನಿಸುವ 
ವರನಲ್ಲಿ ಇಪ್ಪನು ತತ್ ಶಬ್ದ ವಾಚ್ಯದಿ 
ನರನೆ ಈ ಪರಿ ತಿಳಿದು ಪೂಜಿಸವನ 
ಇರಲಿ ಇದನು ಇತ್ತ ಮುಂದಣದಲಿ ಕೇಳೊ 
ಪರಮ ಮಂಗಳವಾದ ವಧುಗಳಲ್ಲಿ 
ಶಿರಿದೇವಿ ಭಾರತಿ ಸರಸ್ವತಿ ಷಣ್ಮಹಿಷಿ 
ಗಿರಿಜೆ ವಾರುಣಿ ಸೌಪರಣಿ ಶಚಿ 
ಸ್ಮರನಾರ್ಧಾಂಗಿನಿ ಪ್ರಾಣಿ ತಾರಾ ಮಾನವಿ ಉಷಾ 
ವರ ದಾಕ್ಷಾಯಣಿ ಪ್ರಾವಹಿ ಶ್ಯಾಮಲಾರು 
ತಾರಾ ಸಂಜ್ಞಾ ಹರಿಪಾದದಿಂದ ಉದುಭವಿಸಿದ
ಪರಮಪಾವನ್ನೆ ಸ್ತ್ರೀಯರುಂಟು 
ಸಿರಿಪತಿ ಅದರಂತೆ ಸ್ತ್ರೀರೂಪವನು ಧರಿಸಿ 
ಪರಿವ್ಯಾಪ್ತನಾಗಿಪ್ಪ ಸ್ತ್ರೀಯರಲ್ಲಿ 
ತರುವಾಯದಲಿ ಸ್ಥೂಲ ಬೊಮ್ಮಾಂಡದೊಳಿದ್ದ 
ಹರಿ ಸಿರಿ ಮೊದಲಾದ ದಿವಿಜರನ್ನು 
ಶರೀರದಲಿ ತಂದು ಐಕ್ಯ ಚಿಂತಿಸಿ ಈ 
ತೆರದಿ ತಿಳಿದು ಪರಮ ಭಕುತಿಯಿಂದ 
ವರ ವಧುಗಳಿಗಾಗಿ ಪರಿಪರಿ ವಸ್ತುಗಳ 
ಪರಿಯು ಚಿಂತಿಸಿ ಹರಿಸಿರಿಗರ್ಪಿಸು 
ಸಿರಿದೇವಿ ಮೊದಲಾದ ಸ್ತ್ರೀಯರಲಂಕರಿಸಿ 
ಪರಮ ಭಕುತಿಯಿಂದ ನಾರಾಯಣಗೆ 
ಸಿರಿದೇವಿಗರ್ಪಿಸು ವಿಧಿ ವಾಯು 
ಸುರರಿಗರ್ಪಿಸು ಅವರವರ ಸ್ತ್ರೀಯರ 
ವರವರಲ್ಲಿ ಕೂಡಿಸು ವಿಧಿ ಪೂರ್ವಕ 
ಪರಮಪುರುಷ ಹರಿ ತುಷ್ಟನಾಹ 
ದುರುಳಮರ್ದನ ಗುರುವಿಜಯವಿಠ್ಠಲರೇಯ 
ಪರಮ ಯಶಸ್ಸು ನೀವ ಇಹಪರದಿ ॥ 4 ॥

 ಝಂಪೆತಾಳ 

ದೇಹವೆಂಬೊ ಕ್ಷೇತ್ರ ಸನ್ನಿಧಾನದಲ್ಲಿ 
ಲೋಹಿತಾಕ್ಷನೆಂಬೊ ಪಾತ್ರಗಳು ಅ - 
ವ್ಯಾಹತಸ್ಥಾನ ವೈದಿಸು ನಿನ್ನ 
ಸಹವಾಗಿ ಮೂರೇಳು ಗೋತ್ರದವರ 
ಸಹಸ್ರರೂಪ ಗುರುವಿಜಯವಿಠ್ಠಲರೇಯನ 
ಮೋಹ ನಿನಗಾಗುವದು ಆವಕಾಲ ॥ 5 ॥

 ಅಟ್ಟತಾಳ 

ಇನಿತು ಲಕ್ಷಣದಿಂದಲಿ ಚತುರ್ಥ ದಿನದಲ್ಲಿ 
ಏನೇನು ಮಾಡ ತಕ್ಕದ್ದೆಲ್ಲ 
ದನುಜಾರಿಗೆ ಇದು ಉಪಚಾರವೆಂದೆನ್ನು 
ನೀನು ಕೊಡುವದೆಲ್ಲ ನೀನು ಕೊಂಬುವದೆಲ್ಲ 
ಅನ್ವಯಿಸು ಬಿಂಬನಪಾದ ಸನ್ನಿಧಿಯಲ್ಲಿ 
ಇನಿತು ಮಾಡುವ ಮನೆಯಲ್ಲಿ ಸುರರೆಲ್ಲ 
ವನಜಾಕ್ಷನಾಜ್ಞದಿ ಶುಭವೆ ಕೊಡುತಿಪ್ಪರು 
ಇನ ಶಶಿಮಂಡಲ ಪರಿಯಂತ ತಿಳಿಯವ 
ಘನರಾಶಿ ಗಣಿತಾದಿನಿತು ಸತ್ಪುಣ್ಯವ 
ಜನಿಸುವದದರಿಂದ ಬರಿದೆ ಮಾತುಗಳಲ್ಲಿ 
ಅನುಮಾನ ಇದಕ್ಕಿಲ್ಲ ಶ್ರುತಿ ಸ್ಮೃತಿ ವಾಕ್ಯವು 
ವನಜಾಧಿಪತಿ ಗುರುವಿಜಯವಿಠ್ಠಲಂಗೆ 
ಮನೆಯವನೆನಿಸುವಿ ಇದರಿಂದ ಆವಾಗ ॥ 6 ॥

 ಆದಿತಾಳ 

ಈ ಪರಿ ಮಾಡುವದೆ ಶುಭಲಗ್ನವೆನಿಪದು 
ಈ ಪರಿ ಮಾಡಿದವನ ವಂಶವೆ ಸದ್ವಂಶ 
ಈ ಪರಿ ತಿಳಿದವನ ಗೋತ್ರವೆ ಅಭಿವೃದ್ಧಿ 
ಈ ಪರಿ ತಿಳಿದವನ ಮನೆಯಲ್ಲಿ ಸರ್ವಕಾಲ 
ಲೋಪವಾಗದಂತೆ ಶುಭಜಾಲವಾಗುವದು 
ಈ ಪರಿ ತಿಳಿಯದಲೆ ಶತಸಂಖ್ಯ ಕನ್ಯಾದಾನ 
ಅಪಾರ ಮಾಡಲ್ಯಾಕೆ ಅವಗಿಲ್ಲ ಪುಣ್ಯವನ್ನು 
ಶ್ರೀಪತಿ ಮೆಚ್ಚದಿಹ ನಾನಾವಿಧ ಕರ್ಮ ಜಾಲ 
ಪಾಪ ನಿವರ್ತಿಗೆ ಕಾರಣವಲ್ಲ ಕೇಳೊ 
ಸುಪ್ರಕಾಶವಾದ ಮಾಣಿಕ್ಯ ಮಾರಿಕೊಂಡು 
ಅಲ್ಪವಾದ ಅಜಿವಾನ ಪ್ರಾಪ್ತಿ ಮಾಡಿಕೊಂಡಂತೆ 
ಅಪಾರ ಮಹಿಮನ ಅನುಸಂಧಾನವಿಲ್ಲದೆ 
ವ್ಯಾಪಾರದಿಂದ ಬಂದ ಕ್ಷುದ್ರವಾದ ಪುಣ್ಯವನ್ನು 
ಕೋಪಾದಿ ದ್ವಾರದಿಂದ ದೈತ್ಯರು ಕೊಂಬುವರು 
ಈ ಪರಿ ತಿಳಿದವನ ಜನುಮವೆ ಸಫಲವೆನ್ನು 
ಅಪವರ್ಗದಾತ ಗುರುವಿಜಯವಿಠ್ಠಲರೇಯಾ 
ಕಾಪಾಡುವನು ಸತತ ಈಪರಿ ಗ್ರಹಿಸಿದವರ ॥ 7 ॥

 ಜತೆ 

ಮದುವೆ ಎನಿಪದಿದು ಸಿರಿ ನಾರಾಯಣರಿಗೆ 
ಪದವಿಗೆ ಸೋಪಾನ ಗುರುವಿಜಯವಿಠ್ಠಲ ಒಲಿವಾ ॥
********

ಶ್ರೀ ಮೊದಲಕಲ್ಲು ಶೇಷದಾಸಾರ್ಯ ವಿರಚಿತ ವಿವಾಹ ಸುಳಾದಿ 
(ಗುರುವಿಜಯವಿಠ್ಠಲ ಅಂಕಿತ)

ರಾಗ ಕಾಪಿ   ಧ್ರುವತಾಳ 

ವೈವಾಹ ಮಾಡಿದೆ ವಿಭವ ಪೂರ್ವಕದಿಂದ 
ಆವದು ಇದಕೆ ಸಮವೆಂದು ತಿಳಿದು 
ಭಾವದಲ್ಲಿ ಹಿಗ್ಗಿ ಬಳಲಿದರೆ ಇದಕೆ
ಭಾವಜ್ಞರಾದವರು ಮೆಚ್ಚುವರೇ
"ಯದ್ವೇವ ವಿದ್ಯಯಾ ಕುರುತೆ ಶ್ರದ್ಧಯಾ
ತದೇವ ವೀರ್ಯವತ್ತರಂ ಭವತಿ ಇತ್ಯುಪನಿಷದ್"
ಯದೇವ ವಿದ್ಯಯಾ ಕರೋತಿ ಶ್ರದ್ಧಾಯೋಪನಿಷದಾ
ತದೈವ ವೀರ್ಯವತ್ತರಂ ಭವತಿ
ಏವಮಾದಿಗಳು ಈಪರಿ ವರಲುತಿರೆ ಅ - 
ಭಾವ ಜ್ಞಾನದಿಂದ ಅಹಂಕಾರದಿ 
ಸಾವಿರ ಸಂಖ್ಯವಾದ ಕೃತುಗಳು ಮಾಡಲೇಕೆ 
ದೇವ ದೇವನು ದೃಷ್ಟಿಯಿಂದ ನೋಡಾ 
ಅವನಿಯೊಳಗೆ ಅಲ್ಪರಮಧ್ಯ ಕೀರ್ತಿ 
ಬಾಹೋವದಲ್ಲದೆ ಅದರಿಂದೇನಾಹದೊ 
ಕೇವಲ ಶ್ರಮದಿಂದ ಅರ್ಥ ಸಂಪಾದಿಸಿ 
ಆವದು ಸಾಲದದಕೆ ಋಣವ ಮಾಡಿ 
ಧಾವಂತ ಈ ಪರಿ ಘಟನವಾದ ಕರ್ಮ 
ಪಾವನ್ನವಾದ ಪುಣ್ಯವಾಗದಿರೆ 
ಭುವನದಲ್ಲಿ ಬರಿದೆ ಆಯಾಸ ಬಡಲೇಕೆ 
ವೈವಾಹ ಮಾಡುವ ವಿಧಿ ಬ್ಯಾರುಂಟು 
ಆವಾವ ಕರ್ಮದಿಂದ ಮೂರೇಳು ಗೋತ್ರದವರು 
ಪವಿತ್ರರಾಗುವರು ಪಾಪದಿಂದ 
ಸಾವಧಾನದಿ ಕೇಳು ಭಕುತಿಯಿಂದಲಿ ಮನವೆ 
ನೋವು ನಿನಗಾಗದು ಭವದಲಿಂದ 
ಕಾವ ಕರುಣನಿಧಿ ಗುರುವಿಜಯವಿಠ್ಠಲರೇಯಾ 
ಸೇವಕನೆಂದವಗೆ ಸುಖವೀವನೋ ॥ 1 ॥

 ಮಟ್ಟತಾಳ 

ಮಕ್ಕಳು ಎನಗಾರು ಅವರಿಗೆ ನಾನಾರು 
ರಕ್ಕಸಾಂತಕ ತಾನೆ ಕರ್ಮಾನುಬಂಧದಲಿ 
ಮುಖ್ಯವಾಗಿ ತನ್ನ ಕ್ಲಿಪ್ತಾನುಸಾರದಲಿ 
ಅಕ್ಕರದಿಂದಲಿ ಆತ್ಮಜಗೆ ಪಿತನು 
ಸೌಖ್ಯದ ನಿಮಿತ್ತ ಸತಿ ಮನೆ ಧನ ಪಶು 
ಮಿಕ್ಕಾದವೆಲ್ಲ ಇತ್ತಿಹ್ಯ ತೆರದಂತೆ 
ಮಕ್ಕಳು ಮೊದಲಾದ ಸಂಪದವಿಯ ತಾನೆ ಆ - 
ಸಕ್ಕುತಿ ಯಿಂದಲಿ ಎನಗೆ ಇತ್ತಿಹನೆಂತೆಂದು 
ಮುಕ್ಕುಂದನಾರಾಧನಿಗೆ ಉಪಕರಣಗಳೆನ್ನು 
ಕಕ್ಕುಲಾತಿಯಲಿಂದ ನನ್ನದೆಂಬೊ ಭ್ರಾಂತಿ 
ಸಿಕ್ಕದಲೆ ಗುಣಿಸು ಕಲಿಕೃತ ಮೋಹವನು 
ಧಿಕ್ಕರಿಸು ಜ್ಞಾನ ಬಾಹುಳ್ಯದಿ ಸತತ 
ವಿಕ್ರಮದಿಂದಲ್ಲಿ ಇಂದ್ರಿಯಗ್ರಾಮಗಳು 
ಆಕ್ರಮಿಸಿ ಬರಲು ಪ್ರಾಪ್ತವಾದ ಮೋಹ 
ಪ್ರಖ್ಯಾತಗರ್ಪಿಸುವುದು ಸಂಶಯ ಮಾಡದಲೆ 
ಭಕ್ತಿಪೂರ್ವಕದಿಂದ ಅರ್ಚಿಸು ಜ್ಞಾನದಲಿ 
ಭೋಕ್ತಸಾರ ಗುರುವಿಜಯವಿಠ್ಠಲರೇಯ 
ದಕ್ಕುವನು ಇದನು ಗ್ರಹಿಸಿದ ನರನಿಗೆ ॥ 2 ॥

 ತ್ರಿವಿಡಿತಾಳ 

ಹೃದಯದೊಳಗೆ ಹರಿ ಪ್ರೇರಿಸಿದದರೊಳು 
ಮುದದಿ ನುಡಿವೆ ಗುರು ಕೃಪಾಬಲದಿ
ಒದಗಿ ಕೇಳುವದು ವರನ ಲಕ್ಷಣವನ್ನು , ಈ 
ವಿಧದಿ ಚಿಂತಿಸುವದು ಗುಪ್ತದಿಂದ 
ಅಧಮ ಜನರುಗಳಿಗೆ ಅಂತು ತಿಳಿಯಗೊಡದೆ 
ಪದೋಪದಿಗೆ ನಿನ್ನ ಹೃದಯದಲ್ಲಿ 
ಪದುಮನಾಭನು ಅವರವರ ನಾಮರೂಪ ಬಿ - 
ಡದೆ ಧರಿಸಿಹನೆಂಬೊ ಕೃತ್ಯದಿಂದ
ವಧುವರ ಶಬ್ದವಾಚ್ಯ ವಾಸುದೇವನೆ ಸರಿ 
ಇದರೊಳು ಸೂಕ್ಷ್ಮ ಉಂಟು ಗ್ರಹಿಸುವದು 
ಪದುಮಸಂಭವ ವಾಯು ಖಗ ಅಹಿಪೇಶ ಸುರಪ 
ಮದನ ಪ್ರಾಣನಿರುದ್ಧ ಮನು ಗುರು 
ಸಾದಕ್ಷ ಪ್ರಜೇಶ್ವರ ಪ್ರವಹ ಯಮ ಶಶಿ 
ಆದಿತ್ಯ ವರುಣಾದಿ ಸುರರೆಲ್ಲರು 
ಕಾದುಕೊಂಡಿಪ್ಪರು ದೇವನ ಅನುಜ್ಞದಿ 
ಸಾದರದಲಿ ತಿಳಿ ಇವರ ವಿಚಾರ 
ಬದರಸಂಕಾಶ ಗುರುವಿಜಯವಿಠ್ಠಲರೇಯನ 
ಪದಗಳರ್ಚಿಪದಕ್ಕೆ ಇದೇ ದ್ವಾರವು ॥ 3 ॥

 ರೂಪಕತಾಳ 

ಸುರಮುನಿ ಮೊದಲಾದ ಋಷಿಯ ಜನರೆಲ್ಲ 
ಸರಿಯದೆ ನಿಂದಿಹರೂ ಸೂಕ್ಷ್ಮದಿಂದ 
ಸುರಗಾಯಕ ವಿಡಿದು ನರ ನದಿ ಪರ್ವತ 
ಪರಮ ಪವಿತ್ರ ಸಪ್ತ ವನಧಿಗಳು 
ಅರಸು ತನ್ನಯ ನಿಜ ಭೃತ್ಯರಿಂದಲಿ ಕೂಡಿ 
ಇರುವೊ ಸೊಬಗಿನಂತೆ ಹರಿಯು ತನ್ನ 
ಪರಿವಾರ ಸಹ ವ್ಯಾಪ್ತಿ ವಿಭೂತಿ ಎನಿಸುವ 
ವರನಲ್ಲಿ ಇಪ್ಪನು ತತ್ ಶಬ್ದ ವಾಚ್ಯದಿ 
ನರನೆ ಈ ಪರಿ ತಿಳಿದು ಪೂಜಿಸವನ 
ಇರಲಿ ಇದನು ಇತ್ತ ಮುಂದಣದಲಿ ಕೇಳೊ 
ಪರಮ ಮಂಗಳವಾದ ವಧುಗಳಲ್ಲಿ 
ಶಿರಿದೇವಿ ಭಾರತಿ ಸರಸ್ವತಿ ಷಣ್ಮಹಿಷಿ 
ಗಿರಿಜೆ ವಾರುಣಿ ಸೌಪರಣಿ ಶಚಿ 
ಸ್ಮರನಾರ್ಧಾಂಗಿನಿ ಪ್ರಾಣಿ ತಾರಾ ಮಾನವಿ ಉಷಾ 
ವರ ದಾಕ್ಷಾಯಣಿ ಪ್ರಾವಹಿ ಶ್ಯಾಮಲಾರು 
ತಾರಾ ಸಂಜ್ಞಾ ಹರಿಪಾದದಿಂದ ಉದುಭವಿಸಿದ
ಪರಮಪಾವನ್ನೆ ಸ್ತ್ರೀಯರುಂಟು 
ಸಿರಿಪತಿ ಅದರಂತೆ ಸ್ತ್ರೀರೂಪವನು ಧರಿಸಿ 
ಪರಿವ್ಯಾಪ್ತನಾಗಿಪ್ಪ ಸ್ತ್ರೀಯರಲ್ಲಿ 
ತರುವಾಯದಲಿ ಸ್ಥೂಲ ಬೊಮ್ಮಾಂಡದೊಳಿದ್ದ 
ಹರಿ ಸಿರಿ ಮೊದಲಾದ ದಿವಿಜರನ್ನು 
ಶರೀರದಲಿ ತಂದು ಐಕ್ಯ ಚಿಂತಿಸಿ ಈ 
ತೆರದಿ ತಿಳಿದು ಪರಮ ಭಕುತಿಯಿಂದ 
ವರ ವಧುಗಳಿಗಾಗಿ ಪರಿಪರಿ ವಸ್ತುಗಳ 
ಪರಿಯು ಚಿಂತಿಸಿ ಹರಿಸಿರಿಗರ್ಪಿಸು 
ಸಿರಿದೇವಿ ಮೊದಲಾದ ಸ್ತ್ರೀಯರಲಂಕರಿಸಿ 
ಪರಮ ಭಕುತಿಯಿಂದ ನಾರಾಯಣಗೆ 
ಸಿರಿದೇವಿಗರ್ಪಿಸು ವಿಧಿ ವಾಯು 
ಸುರರಿಗರ್ಪಿಸು ಅವರವರ ಸ್ತ್ರೀಯರ 
ವರವರಲ್ಲಿ ಕೂಡಿಸು ವಿಧಿ ಪೂರ್ವಕ 
ಪರಮಪುರುಷ ಹರಿ ತುಷ್ಟನಾಹ 
ದುರುಳಮರ್ದನ ಗುರುವಿಜಯವಿಠ್ಠಲರೇಯ 
ಪರಮ ಯಶಸ್ಸು ನೀವ ಇಹಪರದಿ ॥ 4 ॥

 ಝಂಪೆತಾಳ 

ದೇಹವೆಂಬೊ ಕ್ಷೇತ್ರ ಸನ್ನಿಧಾನದಲ್ಲಿ 
ಲೋಹಿತಾಕ್ಷನೆಂಬೊ ಪಾತ್ರಗಳು ಅ - 
ವ್ಯಾಹತಸ್ಥಾನ ವೈದಿಸು ನಿನ್ನ 
ಸಹವಾಗಿ ಮೂರೇಳು ಗೋತ್ರದವರ 
ಸಹಸ್ರರೂಪ ಗುರುವಿಜಯವಿಠ್ಠಲರೇಯನ 
ಮೋಹ ನಿನಗಾಗುವದು ಆವಕಾಲ ॥ 5 ॥

 ಅಟ್ಟತಾಳ 

ಇನಿತು ಲಕ್ಷಣದಿಂದಲಿ ಚತುರ್ಥ ದಿನದಲ್ಲಿ 
ಏನೇನು ಮಾಡ ತಕ್ಕದ್ದೆಲ್ಲ 
ದನುಜಾರಿಗೆ ಇದು ಉಪಚಾರವೆಂದೆನ್ನು 
ನೀನು ಕೊಡುವದೆಲ್ಲ ನೀನು ಕೊಂಬುವದೆಲ್ಲ 
ಅನ್ವಯಿಸು ಬಿಂಬನಪಾದ ಸನ್ನಿಧಿಯಲ್ಲಿ 
ಇನಿತು ಮಾಡುವ ಮನೆಯಲ್ಲಿ ಸುರರೆಲ್ಲ 
ವನಜಾಕ್ಷನಾಜ್ಞದಿ ಶುಭವೆ ಕೊಡುತಿಪ್ಪರು 
ಇನ ಶಶಿಮಂಡಲ ಪರಿಯಂತ ತಿಳಿಯವ 
ಘನರಾಶಿ ಗಣಿತಾದಿನಿತು ಸತ್ಪುಣ್ಯವ 
ಜನಿಸುವದದರಿಂದ ಬರಿದೆ ಮಾತುಗಳಲ್ಲಿ 
ಅನುಮಾನ ಇದಕ್ಕಿಲ್ಲ ಶ್ರುತಿ ಸ್ಮೃತಿ ವಾಕ್ಯವು 
ವನಜಾಧಿಪತಿ ಗುರುವಿಜಯವಿಠ್ಠಲಂಗೆ 
ಮನೆಯವನೆನಿಸುವಿ ಇದರಿಂದ ಆವಾಗ ॥ 6 ॥

 ಆದಿತಾಳ 

ಈ ಪರಿ ಮಾಡುವದೆ ಶುಭಲಗ್ನವೆನಿಪದು 
ಈ ಪರಿ ಮಾಡಿದವನ ವಂಶವೆ ಸದ್ವಂಶ 
ಈ ಪರಿ ತಿಳಿದವನ ಗೋತ್ರವೆ ಅಭಿವೃದ್ಧಿ 
ಈ ಪರಿ ತಿಳಿದವನ ಮನೆಯಲ್ಲಿ ಸರ್ವಕಾಲ 
ಲೋಪವಾಗದಂತೆ ಶುಭಜಾಲವಾಗುವದು 
ಈ ಪರಿ ತಿಳಿಯದಲೆ ಶತಸಂಖ್ಯ ಕನ್ಯಾದಾನ 
ಅಪಾರ ಮಾಡಲ್ಯಾಕೆ ಅವಗಿಲ್ಲ ಪುಣ್ಯವನ್ನು 
ಶ್ರೀಪತಿ ಮೆಚ್ಚದಿಹ ನಾನಾವಿಧ ಕರ್ಮ ಜಾಲ 
ಪಾಪ ನಿವರ್ತಿಗೆ ಕಾರಣವಲ್ಲ ಕೇಳೊ 
ಸುಪ್ರಕಾಶವಾದ ಮಾಣಿಕ್ಯ ಮಾರಿಕೊಂಡು 
ಅಲ್ಪವಾದ ಅಜಿವಾನ ಪ್ರಾಪ್ತಿ ಮಾಡಿಕೊಂಡಂತೆ 
ಅಪಾರ ಮಹಿಮನ ಅನುಸಂಧಾನವಿಲ್ಲದೆ 
ವ್ಯಾಪಾರದಿಂದ ಬಂದ ಕ್ಷುದ್ರವಾದ ಪುಣ್ಯವನ್ನು 
ಕೋಪಾದಿ ದ್ವಾರದಿಂದ ದೈತ್ಯರು ಕೊಂಬುವರು 
ಈ ಪರಿ ತಿಳಿದವನ ಜನುಮವೆ ಸಫಲವೆನ್ನು 
ಅಪವರ್ಗದಾತ ಗುರುವಿಜಯವಿಠ್ಠಲರೇಯಾ 
ಕಾಪಾಡುವನು ಸತತ ಈಪರಿ ಗ್ರಹಿಸಿದವರ ॥ 7 ॥

 ಜತೆ 

ಮದುವೆ ಎನಿಪದಿದು ಸಿರಿ ನಾರಾಯಣರಿಗೆ 
ಪದವಿಗೆ ಸೋಪಾನ ಗುರುವಿಜಯವಿಠ್ಠಲ ಒಲಿವಾ ॥
********************