ಅಳುವದ್ಯಾತಕೊ ರಂಗಾ |
ಅತ್ತರಂಜಿಸುವ ಗುಮ್ಮಾ |ಪ|
ಪುಟ್ಟಿದೇಳು ದಿವಸದಲ್ಲಿ |
ದುಷ್ಟ ಪೂತನಿಯ ಕೊಂದಿ |
ಮುಟ್ಟಿ ಮೊಲೆಯ ಹಾಲುಂಡ ಕಾರಣ |
ದೃಷ್ಟಿ ತಾಕಿತೆ ನಿನಗೆ ಕಂದಯ್ಯ
ಬಾಲಕತನದಲ್ಲಿ ಗೋ |
ಪಾಲರೊಡಗೂಡಿ
ಕಾಳಿಂಗ ಮಡುವನು ಕಲಕಿದ ಕಾರಣ |
ಕಾಲು ಉಳುಕಿತೇ ನಿನಗೆ ರಂಗಯ್ಯ
ತುರುವ ಕಾಯಲು ಪೋಗಿ |
ಭರದಿಂದ ಮಳೆಗೆರೆಯೆ
ಬೆರಳಲ್ಲಿ ಬೆಟ್ಟವನೆತ್ತಿದ ಕಾರಣ |
ಬೆರಳು ಉಳುಕಿತೇ ನಿನಗೆ ಕಂದಯ್ಯ
ವಸುದೇವ ಸುತನಾಗಿ |
ಅಸುರರ ಮರ್ದಿಸಿದೆ
ಬಸುರಲಿ ಬೊಮ್ಮನ ಪಡೆದ ಕಾರಣ |
ಕಿಸರು ತಾಕಿತೆ ನಿನಗೆ ರಂಗಯ್ಯ
ಶರಣು ವೇಲಾಪುರದ |
ಚೆಲುವ ಚೆನ್ನಿಗರಾಯ |
ಶರಣರ ಸಲಹುವ ದೊರೆ ನೀನಲ್ಲವೆ |
ವರದ ಪುರಂದರ ವಿಠಲ ಗೋವಿಂದ
***
Aluvadyatako ranga attaranjipa gumma||pa||
Puttidelu divasadali dushta putaniya konde
Mutti vishada moleyunda karana
Drushti takite ninage rangayya||1||
Balakatanadi gopalakarodagudi
Kalindi maduvanu kalakida karana
Kalu ulukite ninage rangayya||2||
Turuva kayalu poge Baradi indra malegareye
Beralali bettavanettida karana
Beralu ulukite ninage rangayya||3||
Vasudeva sutanagi asurarellara maduhi
Hesarina mallara maduhida karana
Kisiru takite ninage rangayya||4||
Saranu velapurada celuva cennigaraya
Paripari vidhadinda saranara poreyuva
Varada purandaravithalaraya ||5||
***
pallavi
aLuvudyAtako ranga attaranjipa gumma
caraNam 1
huTTidELu divasadali duSTa pUtaniya konde muSTi
viSada moleyuNDa kAraNa drSTi tAgite ninage rangayya
caraNam 2
turuva kAyalu pOgi paradIndra maLe kareya beraLali
peTTava negahida kAraNa beraLu uLugide ninage rangayya
caraNam 3
bAlakadanadalli gOpAlakarOdanADi kALiya maDuva
kalagida kAraNa kAlu nondite ninage rangayya
caraNam 4
vasudEva sutanAgi asura mallara kondu kasuvina
kamsana konda kAraNa kisaru tAgite ninage rangayya
caraNam 5
sharaNu vElApurada doreya cennigarAya sharaNara
salahuva karuNAnidhiyE varada purandara viTTalarAya
***
just scroll down for other devaranama
ಪುಟ್ಟಿದೇಳು ದಿವಸದಲಿ ದುಷ್ಟ ಪೂತನಿಯ ಕೊಂದೆ
ಮುಟ್ಟಿ ವಿಷದ ಮೊಲೆಯುಂಡ ಕಾರಣ
ದೃಷ್ಟಿ ತಾಕಿತೆ ನಿನಗೆ ರಂಗಯ್ಯನೆ||1||
ಬಾಲಕತನದಲ್ಲಿ ಗೋಪಾಲರೊಡಗೂಡಿ
ಕಾಳಿಂದಿ ಮಾಡುವನು ಕಲಕಿದ ಕಾರಣ
ಕಾಲು ಉಳುಕಿತೆ ನಿನಗೆ ರಂಗಯ್ಯನೆ||2||
ತುರುವ ಕಾಯಲು ಪೋಗೆ ಭರದಿ ಇಂದ್ರ ಮಳೆಗರೆಯೆ
ಬೆರಳಲಿ ಬೆಟ್ಟವನೆತ್ತಿದ ಕಾರಣ
ಬೆರಳು ಉಳುಕಿತೆ ನಿನಗೆ ರಂಗಯ್ಯ||3||
ವಾಸುದೇವ ಸುತನಾಗಿ ಅಸುರರೆಲ್ಲರ ಮಡುಹಿ
ಹೆಸರಿನ ಮಲ್ಲರ ಮಡುಹಿದ ಕಾರಣ
ಕಿಸಿರು ತಾಕಿತೆ ನಿನಗೆ ರಂಗಯ್ಯನೆ||4||
ಶರಣು ವೇಲಾಪುರದ ಚೆಲುವ ಚೆನ್ನಿಗರಾಯ
ಪರಿಪರಿ ವಿಧದಿಂದ ಶರಣರ ಪೊರೆಯುವ
ವರದ ಪುರಂದರವಿಠಲರಾಯನೆ ||5|
***********
ಅಳುವದ್ಯಾತಕೊ ರಂಗ ಅತ್ತರಂಜಿಪ ಗುಮ್ಮ||pa||
ಪುಟ್ಟಿದೇಳು ದಿವಸದಲಿ ದುಷ್ಟ ಪೂತನಿಯ ಕೊಂದೆ
ಮುಟ್ಟಿ ವಿಷದ ಮೊಲೆಯುಂಡ ಕಾರಣ
ದೃಷ್ಟಿ ತಾಕಿತೆ ನಿನಗೆ ರಂಗಯ್ಯ||1||
ಬಾಲಕತನದಿ ಗೋಪಾಲಕರೊಡಗೂಡಿ
ಕಾಳಿಂದಿ ಮಾಡುವನು ಕಲಕಿದ ಕಾರಣ
ಕಾಲು ಉಳುಕಿತೆ ನಿನಗೆ ರಂಗಯ್ಯ||2||
ತುರುವ ಕಾಯಲು ಪೋಗೆ ಭರದಿ ಇಂದ್ರ ಮಳೆಗರೆಯೆ
ಬೆರಳಲಿ ಬೆಟ್ಟವನೆತ್ತಿದ ಕಾರಣ
ಬೆರಳು ಉಳುಕಿತೆ ನಿನಗೆ ರಂಗಯ್ಯ||3||
ವಾಸುದೇವ ಸುತನಾಗಿ ಅಸುರರೆಲ್ಲರ ಮಡುಹಿ
ಹೆಸರಿನ ಮಲ್ಲರ ಮಡುಹಿದ ಕಾರಣ
ಕಿಸಿರು ತಾಕಿತೆ ನಿನಗೆ ರಂಗಯ್ಯ||4||
ಶರಣು ವೇಲಾಪುರದ ಚೆಲುವ ಚೆನ್ನಿಗರಾಯ
ಪರಿಪರಿ ವಿಧದಿಂದ ಶರಣರ ಪೊರೆಯುವ
ವರದ ಪುರಂದರವಿಠಲರಾಯ ||5||
***
just scroll down for other devaranama