ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡಮ್ಮಾ ಶ್ರೀ ವಾಸುದೇವನಾ ನಮ್ಮ ಬೇಡಿದಿಷ್ಟಾರ್ಧವ ನೀವನಾ ಪ
ಪರ ಬ್ರಹ್ಮ ರೂಢಿಗೆ ನರಲೀಲೆಯಾಡುವ ಬಗೆಯಾಅ.ಪ ದೇವರ ಅನುಮತ ನೋಡಿದಾ ಅಂವ ದೇವಕಿ ಉದರದಿ ಮೂಡಿದಾ ಪಾವನ ಗೋಕುಲ ಮಾಡಿದಾ ಸುಖ ದೇವಿ ಯಶೋದೆಗೆ ನೀಡಿದಾ ಆವಾವ ಪರಿಯಲಿ ನೋವ ಬಗೆಯ ಬಂದು ಗಾಲಿಲ ಅಸುರರ ಜೀವನ ವಳಿದಾ 1
ಗೊಲ್ಲತೆಯರ ಮನಮೋಹಿಸಿ ಕದ್ದು ಅಲ್ಲಿಹ ಪಾಲ್ಬಣ್ಣೆ ಸೇವಿಸಿ ಬಿಲ್ಲ ಹಬ್ಬದ ನೆವತೋರಿಸಿ ಪೋಗಿ ಮಲ್ಲಚಾಣರರಾ ಭಂಗಿಸೀ ಬಲ್ಲಿದ ಕಂಸನ ಮಲ್ಲಯದ್ಧಗಳಿಂದ ಘಲ್ಲಿಸಿದನು ಜನಚಲ್ಲಿ ಬಡಿದನಾ 2
ನೀರೊಳು ಕಟ್ಟಿಸಿ ಮನೆಯನು ಬಂಗಾರದ ದ್ವಾರಕಾ ಪುರವನು ಸೇರಿಸಿ ಯದುಕುಲದವರನು ರುಕ್ಮಿ ಣೀ ರಮಣಲ್ಲಿಗೆ ಮರೆದನು ಸಾರಿದ ಶರಣರಾ ತಾರಿಸಿ ಹೋದನು ಮಹಿಪತಿ ನಂದನ ಪ್ರೀಯನಾ 3
****