..
ಹರಿಯೇ ಬಾರೋ ತ್ವರಾ
ಘೋರಾರಣ್ಯದಿ ಸೇರಿ ದಾರಿ ತೋರದೀಗ ಸಾರಿಕರೆವೆ ಅ.ಪ
ಮಂದರಾರು ಮಂದಿ ಎನ್ನ ಬಂಧಿಸುತಲಿ
ಪಾಶದಿಂದ ಮುಂದಕ್ಕೆ
ಬಿಡದಲಿಹರು ನೊಂದು ಬೆಂದು ಬಾಯಿ ಬಿಡುವೆ 1
ಹಿಂದೆ ವ್ಯಾಘ್ರ ಮುಂದೆ ಪಾವು ನಿಂದು ಕಾದು ನೋಡುತಿಹವು
ಬಂದು ನೀನು ಕಾಯದಿರಲು ತಂದೆ ಇನ್ನಾರುಗತಿಯೋ 2
ನಂದಸುತ ಗೋವಿಂದ ಶಾಮಸುಂದರನೆ ನಿನ್ನ ನಾಮ
ವಂದು ನಿಮಿಷ ಧ್ಯಾನಿಸದೆ ನಾ ಮಂದ ಭಾಗ್ಯನಾದೆನಯ್ಯೋ 3
***