Showing posts with label ದಾತ ಅಂಬುಜಾಸನ ತಾತ ಕುಂಭಿಣಿಯೊಳು ಪುಟ್ಟಿ vijaya vittala. Show all posts
Showing posts with label ದಾತ ಅಂಬುಜಾಸನ ತಾತ ಕುಂಭಿಣಿಯೊಳು ಪುಟ್ಟಿ vijaya vittala. Show all posts

Thursday, 17 October 2019

ದಾತ ಅಂಬುಜಾಸನ ತಾತ ಕುಂಭಿಣಿಯೊಳು ಪುಟ್ಟಿ ankita vijaya vittala

ದಾತ ಅಂಬುಜಾಸನ ತಾತ
ಕುಂಭಿಣಿಯೊಳು ಪುಟ್ಟಿ ಜನನಿಯ ಮೊಲೆ ಪಾಲು
ಉಂಬೋದು ಬಿಡಿಸೊ ಜನನವ ಕೆಡಿಸೊ ಪ

ರಸಿಕೆ ಮುಹಕದಲಿ ನಿಶಿದಿನದಲಿ ಹೊರಳಿ
ಅಸುರುಸುರೆನುತಲಿ ಹಸಗೇಡಿಯಾದೆನೊ
ಪರಿ ನೊಂದು 1

ಹಲವು ಲಂಪಟದೊಳು ಹಲುಬಿ ಹಕ್ಕಲನಾದೆ
ಬಲೆಯೊಳಗಿದ್ದ ಎರಳೆಯಂತೆ ಮಿಡುಕುತ
ಮಲಮೂತ್ರದೊಳು ಬಳಲಿದೆ ಕೇಳೊ 2

ಎಳ್ಳನಿತು ಸತ್ಕರ್ಮವುಳ್ಳದ್ದು ಚರಿಸಿದೆ
ಬಲಿಷ್ಠ ನಾನೆಂದು ಬಲು ದುರ್ಮತಿಯಿಂದ
ಎಲ್ಲರ ಜರಿದೆ ಧರ್ಮವ ಮರೆದೆ 3

ಚಾರುವಾಕರಗೂಡಿ ಮೂರೆ ವಿಕಾರದಲ್ಲಿ
ನೀರೇರ ಒಡಗೂಡಿ ನೀತಿ ನಿರ್ಣಯ ತೊರೆದು
ಬಟ್ಟೆ 4

ಎಲ್ಲಿರಲು ನಿನ್ನವನೋ
ಅಲ್ಲವೆಂದೆನಿಸದೆ ಬಲ್ಲಿದರೊಡಿಯ ವಿಜಯವಿಠ್ಠಲ ನಿ
ನ್ನಲ್ಲಿ ಸೇರಿಸಿ ಎನ್ನ ಪೊರೆಯೋ ಪ್ರಸನ್ನಾ 5
**********