Showing posts with label ತಲ್ಲಣಗೊಳ್ಳಬೇಡಾ ಶ್ರೀಹರಿ ಎಲ್ಲಿಹನೆನಬೇಡಾ govinda. Show all posts
Showing posts with label ತಲ್ಲಣಗೊಳ್ಳಬೇಡಾ ಶ್ರೀಹರಿ ಎಲ್ಲಿಹನೆನಬೇಡಾ govinda. Show all posts

Monday, 11 November 2019

ತಲ್ಲಣಗೊಳ್ಳಬೇಡಾ ಶ್ರೀಹರಿ ಎಲ್ಲಿಹನೆನಬೇಡಾ ankita govinda

by ಗೋವಿಂದದಾಸ
ತಲ್ಲಣಗೊಳ್ಳಬೇಡಾ ಶ್ರೀಹರಿ ಎಲ್ಲಿಹನೆನಬೇಡಾ ಪ

ಕಲ್ಲ ಕಂಬದಿ ಮೈದೋರಲು ನರಹರಿಪ್ರಹ್ಲಾದನು ತಾಪತ್ರಯ ಬರೆದನೇ ಅ.ಪ

ತರಳಧ್ರುವನು ವನದೀ ಸ್ವಾಮಿಗೆಚರರನು ಕಳುಹಿದನೇಕರಿರಾಜನು ತಾನ್ ಕರೆಯಲು ಪೋದನೆಹರಿಗೆ ರುಕ್ಮಾಂಗದ ವೀಳ್ಯವಿತ್ತಿಹನೇ 1

ಅಂಬರೀಷನು ಹರಿಗೆ ದ್ರವ್ಯವತುಂಬಿಕಳುಹಿಸಿದನೇಅಂಬುಜನಾಭನು ಅಹಲ್ಯೆಗೆ ತಾತನೆಅಂಬರದಿಂ ಶೀರೆ ಇಳಿವುದೇ ದ್ರುಪದೆಗೆ 2

ಅಣು ಮಹತ್ತೆನಿಸಿರುವಾ ಶ್ರೀಹರಿಬಣಗುಜನರ ಮುರಿವಾಗಣನೆಯಿಲ್ಲದೆ ಪ್ರಾಣಿಗಳನು ಸಲಹುವತ್ರಿನಯನ ಸಖನುತಾ ಮಣಿವರ ಮರೆವನೆ 3

ಅನ್ಯ ಚಿಂತೆಗಳನ್ನು ಬಿಟ್ಟುಪನ್ನಗಶಯನನೂಘನ್ನ ಭಕ್ತಿಯೊಳುರೆ ಇನ್ನಾದರೂ ನೆನೆಮನ್ನಿಸದಿರೆ ಗೋವಿಂದನು ದಾಸರ 4
*******