..
kruti by pradyumna teertha ಪ್ರದ್ಯುಮ್ನತೀರ್ಥರು
ಬಾದರಾಯಣ ಮದದಿ ಮರೆತೆನೊ
ಸದಯದಿಂ ಮುದ ಪಾಲಿಸೊ ಪ
ಬೋಧ ಮೂರುತೆ ಭಕ್ತರಾ ನುಡಿ
ಸಾದರದಿ ನೀನಾಲಿಸೋ ಅ.ಪ
ವೇದಭಾಗವ ಮಾಡಿ ವೇದವ್ಯಾಸನೆಂದೆನಿಸಿದಿ
ಸದಮಲಾಭಾವದಲಿ ನಿನ್ನಯ ಪಾದಕಮಲವ ತೋರಿದಿ 1
ಮೋದ ಚಿನ್ಮಯ ಗಾತ್ರ ಎನ್ನಯ ಖೇದ ಭಾವವನೋಡಿಸೊ
ಮೋದತೀರ್ಥ ಹೃದಾಬ್ಜ ಮಂದಿರ ಸಾಧು ಸಂಗವ ಮಾಡಿಸೋ 2
ತರ್ಕಮುಧ್ರಾಧರನೆ ಎನ್ನ ಕುತರ್ಕ ಬುದ್ಧಿಯನೋಡಿಸೋ
ಅರ್ಕಸನ್ನಿಭ ಬ್ರಹ್ಮ ಸುತರ್ಕ ಮಾರ್ಗವ ಬೋಧಿಸೋ 3
ಅಭಯಪ್ರದಕರ ಎನ್ನಭವ ಭಯ ತ್ರಿಭುವನೇಶ್ವರ ಓಡಿಸೀ
ಇಭವರದ ಮಧ್ವೇಶ ಸಂತತ ಸಭೆಯ ಸಹನೀ ತೋರೆಲೊ4
ಯೋಗ ಪೀಠನೆ ನೀಗಿಸೆನ್ನಯ ಭೋಗಬುದ್ಧಿಯ ಸರ್ವದಾ
ಯೋಗಿಕುಲವರ ಬಾಗಿ ನಮಿಸುವೆ ಯೋಗಮಾರ್ಗವ ತೋರಿಸೊ5
ಮಾ ಕಮಲಜ ಭವೇಂದ್ರವಂದಿತ ಮಾಕಳತ್ರ ನಮೋಸ್ತುತೇ
ಯಾಕೆ ಎನ್ನಲಿ ನಿರ್ದಯವು ನೀ ಸಾಕಲಾರದ ಪಾಪಿಯೇ 6
ಸನ್ನುತಿಸಿ ನಾ ನಿನ್ನ ಬೇಡುವೆ ಸನ್ನುತಾಂಘ್ರಿಯ ಸೇವೆಯಾ
ಸನ್ಮುನೀವರ ಶ್ರೀ ನರಹರೆ ದಾಸದಾಸರ ದಾಸ್ಯವಾ 7
***