Showing posts with label ಪೊಂಗೊಳಲೂದುತಿಹ ಯದುಕುಲೋತ್ತುಂಗ purandara vittala. Show all posts
Showing posts with label ಪೊಂಗೊಳಲೂದುತಿಹ ಯದುಕುಲೋತ್ತುಂಗ purandara vittala. Show all posts

Friday, 6 December 2019

ಪೊಂಗೊಳಲೂದುತಿಹ ಯದುಕುಲೋತ್ತುಂಗ purandara vittala

ರಾಗ ಆನಂದಭೈರವಿ ಅಟತಾಳ

ಪೊಂಗೊಳಲನೂದುತಿಹ ಯದುಕುಲೋತ್ತುಂಗ ||ಪ||
ತಿಂಗಳಪಾಂಗನೆ ರಜತಶುಭಾಂಗ || ಅ||

ಸಲಿಲಚರ ಧರಾಧರನು ಇಳೆಧರೋಜ್ವಲನೇತ್ರ
ಬಲಿಯ ಬೇಡಿದನು ಭೃಗುಕುಲದಿ ಜನಿಸಿ
ಬಲಿದ ಬಿಲ್ಲನೆ ಮುರಿದು ಲಲನೆಯರ ಒಳನಾಗಿ
ಹೂಳರ ಸಂಬೋಧಿಸಿದ ಚೆಲುವ ಹಯವವೇರ್ದ ||

ಬಿಡದೆ ನೋಡಿದ ಬೆಟ್ಟದಡಿಗೆ ಬೆನ್ನನು ಕೊಟ್ಟ
ಅಡವಿಕಿಟಿ ಕಡು ಕೋಪಿ ಕೊಡೆಯಪಿಡಿದನೆ
ಕೊಡಲಿ ಕರ ಜಡೆ ಧರಿಸಿ ಗಿಡ ಕಿತ್ತು ತಾ ಕೆಡಹಿ
ಹುಡುಗಿಯರ ಜಾರ ಸಡಗರದಿ ತೇಜಿಯನೇರ್ದ ||

ವಾರಿಚರ ಕೂರ್ಮಾವತಾರ ಸುಕರ ಕ್ರೂರ
ಧರಣಿಯನಳೆದು ಶೂರರನು ಗೆಲಿದು
ನೀರಜಾಕ್ಷಿಯ ತಂದು ನಾರಿಪ್ರಿಯ ವ್ರತವಳಿದು
ಏರಿದನು ಹಯವ ಪುರಂದರವಿಠಲ ಜಗದೊಡೆಯ ||
***

pallavi

pongoLalUdutiha yadukulOttunga

anupallavi

tingaLapAngane rajata shubhAnga

caraNam 1

salilacara dasharathanu iLedharOjjvala nEtra baliya bEDidanu bhrgu kuladi janisi
balida billane muridu lalaneyara oLanAgi huLara sambOdhisida celuva hayavavErda

caraNam 2

biDade nODida beTTadaDige bennanu koTTa aDavikiTe kaDu gOpi koDeya piDida
koDalikara jaDe dharisi giDa kittu tA keDahi huDugiyara jAra saDagaradi tEjiyanErda

caraNam 3

vAricara kUrmAvatAra sukara krUra dharaNiyanaLedu suraranu gelidu
nIrajAkSiya tandu nArIpriya vratavaLidu Eridanu hayava purandara viTTala jagadoDeya
***

ಪಲ್ಲವಿ:

ಪೊಂಗೊಳಲೂದುತಿಹ ಯದುಕುಲೋತ್ತುಂಗ

ಅನುಪಲ್ಲವಿ:

ತಿಂಗಳಪಾಂಗನೆ ರಜತ ಶುಭಾಂಗ

ಚರಣ:

1:

ಸಲಿಲಚರ ಧರಾಧರನು ಇಳೆಧರೋಜ್ವಲ ನೇತ್ರ

ಬಲಿಯ ಬೇಡಿದನು ಭೃಗು ಕುಲದಿ ಜನಿಸಿ

ಬಲಿದ ಬಿಲ್ಲನೆ ಮುರಿದು ಲಲನೆಯರ ಒಳನಾಗಿ

ಹೂಳರ ಸಂಬೋಧಿಸಿದ ಚೆಲುವ ಹಯವನೇರ್ದ 

2:

ಬಿಡದೆ ನೋಡಿದ ಬೆಟ್ಟದಡಿಗೆ ಬೆನ್ನನು ಕೊಟ್ಟ

ಅಡವಿಕಿಕಟ ಕಡು ಕೋಪಿ ಕೊಡೆಯ ಪಿಡಿದ

ಕೊಡಲಿಕರ ಜಡೆ ಧರಿಸಿ ಗಿಡ ಕಿತ್ತು ತಾ ಕೆಡಹಿ

 ಹುಡುಗಿಯರ ಜಾರ ಸಡಗರದಿ ತೇಜಿಯನೇರ್ದ 

3:

ವಾರಿಚರ ಕೂರ್ಮಾವತಾರ ಸೂಕರ ಕ್ರೂರ

ಧರಣಿಯನೆಳೆದು ಶೂರರನು ಗೆಲಿದು

ನೀರಜಾಕ್ಷಿಯ ತಂದು ನಾರೀಪ್ರಿಯ ವ್ರತವಳಿದು

ಏರಿದನು ಹಯವ ಪುರಂದರ ವಿಠಲ ಜಗದೊಡೆಯ
********