Showing posts with label ಹರಿಹರೀ ಎನ್ನ ದೋಷವಳಿಯೊ jayesha vittala. Show all posts
Showing posts with label ಹರಿಹರೀ ಎನ್ನ ದೋಷವಳಿಯೊ jayesha vittala. Show all posts

Wednesday, 4 August 2021

ಹರಿಹರೀ ಎನ್ನ ದೋಷವಳಿಯೊ ankita jayesha vittala

 ..

ಹರಿಹರೀ ಎನ್ನ ದೋಷವಳಿಯೊ ಪ


ಕರಿವರದ ಕೃಪೆಮಾಡು ನಿತ್ಯಮಿತ್ರನೆ ಕೃಷ್ಣ ಅ.ಪ.


ಬೇಲಿ ಎದ್ದು ಹೊಲವ ಮೆದ್ದರೆ ಬ್ಯಾರಿನ್ನು

ಪಾಲಿಪರು ಯಾರೆಯ್ಯ ಶೀಲರೊಡೆಯ

ಫಾಲಾಕ್ಷಸಖ ನಿನ್ನ ಅಚುಂಬಿತ ಕಾರುಣ್ಯ

ಶ್ರೀಲಕ್ಷ್ಮೀ ಶ್ರುತಿ ರಾಸಿ ವರ್ಣಿಪರೊ ಗುಣನಿಧಿಯೆ 1


ಯಾತನೆಲ್ಹಣ್ಣಾದೆ ಪೂತನಿಯ ಅಸುಹರನೆ

ಪಾತಕಕೆ ಕೊನೆಗಾಣೆ ಪಾರ್ಥಸೂತ

ಆತ್ಮಬಂಧುವೆ ಇನ್ನು ತಡಮಾಡೆ ತಡಿಲಾರೆ

ಪೂತನ ಮಾಡೆನ್ನ ಪ್ರಾಣೇಶ ಪ್ರಿಯಬಂಧು 2


ದೋಷಪುಂಜನು ನಾನು ಶೇಷಶಯನನೆ ಬಲ್ಲ

ಪೋಷಕನು ನೀನೆಂದು ವೇದರಾಸಿ

ಘೋಷಿಪವು ಅನವರತ ಕಾಪಾಡು ಶ್ರುತಿವಾಕು

ದೋಷಕರ ಜಯೇಶವಿಠಲನೆ ಮೈದೋರು 3

***