Showing posts with label ಸೃಷ್ಟಿ ಕಾರಣ ದಯಾ ದೃಷ್ಟಿಯಲಿ ನೋಡೆನ್ನ ಘಟ್ಟಿಗನೆನಬೇಕೊ ಇಷ್ಟಿಲ್ಲ ಅಪರಾಧ vasudeva vittala. Show all posts
Showing posts with label ಸೃಷ್ಟಿ ಕಾರಣ ದಯಾ ದೃಷ್ಟಿಯಲಿ ನೋಡೆನ್ನ ಘಟ್ಟಿಗನೆನಬೇಕೊ ಇಷ್ಟಿಲ್ಲ ಅಪರಾಧ vasudeva vittala. Show all posts

Wednesday, 1 September 2021

ಸೃಷ್ಟಿ ಕಾರಣ ದಯಾ ದೃಷ್ಟಿಯಲಿ ನೋಡೆನ್ನ ಘಟ್ಟಿಗನೆನಬೇಕೊ ಇಷ್ಟಿಲ್ಲ ಅಪರಾಧ ankita vasudeva vittala

 ..


kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu 


ಸೃಷ್ಟಿ ಕಾರಣ ದಯಾ ದೃಷ್ಟಿಯಲಿ ನೋಡೆನ್ನ

ಘಟ್ಟಿಗನೆನಬೇಕೊ ಇಷ್ಟಿಲ್ಲ ಅಪರಾಧ ಪ


ಇಷ್ಟವರನ ಬಂಧದೋಳೆನ್ನ ಸಿಲುಕಿಸಿ

ದುಷ್ಟರೂ ಒಂದಾಗಿ ತಾವೆಲ್ಲ ಎನ್ನನೂ

ಕಷ್ಟಬಡಿಸೇವಂತ ದ್ವೇಷದಿ ಹವಣಿಸ

ಲಿಷ್ಟರೊಳು ನೀ ಕೇಳುವಂತೆ ಕೂಗಿದೆನಲ್ಲ 1


ನಿನ್ನ ಮಾತುಗಳಾಡಧ್ಹಾಂಗೆನ್ನ ಮಾಡಿಸಿ

ಅನ್ಯವಾರುತಿಗಳು ಚನ್ನಾಗಿ ನುಡಿಸಲು

ಅನ್ಯಾಯ ಬಂತೆಂದು ಅವರಂತೆ ನುಡಿದು ನಾ

ಮನ್ನದೊಳಗೆ ಮೊರೆ ಇಟ್ಟದನರಿಯಾ 2


ಒಳಗೆ ಹೊರಗೆ ತುಂಬಿಕೊಂಡಿಹರು ಬಹಳ

ಖಳರು ಅವರು ದೇಶ ಕಾಲವಯ್ಯ

ಬಳಿಯಲಿ ನಿನ್ನವರು ಗೂಢ ವೇಷದಿ ತಾವು

ಸುಳಿಯಲು ಅವರನ್ನು ಗುರುತು ಮಾಡಿದೆನಯ್ಯ 3


ಈಗಲೂ ನಿನ್ನ ಬಲಪವನನಾಗಮದಿಂದ

ಬ್ಯಾಗನೆ ಖಳರನ್ನ ವರದು ಸವರಿಸೊ

ಜಾಗರೂಕನಾಗಿ ಅದೇ ಪದ್ಧತಿ ಪಿಡಿದು

ಸಾಗಿ ಬಂದೆನು ಕೇಳು ಎನ್ನಿಂದೇನಪರಾಧ4


ಲೇಸಾಗಿ ಬಲವಿತ್ತು ಎನ್ನನು ಕಳಿಸಲು

ಆಸು ಅಸುರರನ್ನು ತರದೊಟ್ಟುವೆಯಾ

ವಾಸುದೇವವಿಠಲ ನೀ ಕೈಯ್ಯ ಪಿಡಿದರೆ

ಆ ಸುಕಾರ್ಯಕೆ ಬಾಹೆ ನೋಡೆನ್ನ ಶಕುತಿ5

***