Showing posts with label ಹರಿಯೇ ಕುಣಿಯೆನುತ ಕುಣಿಯೆಂದು ಕುಣಿಸಿದರಯ್ಯ purandara vittala. Show all posts
Showing posts with label ಹರಿಯೇ ಕುಣಿಯೆನುತ ಕುಣಿಯೆಂದು ಕುಣಿಸಿದರಯ್ಯ purandara vittala. Show all posts

Saturday, 7 December 2019

ಹರಿಯೇ ಕುಣಿಯೆನುತ ಕುಣಿಯೆಂದು ಕುಣಿಸಿದರಯ್ಯ purandara vittala

ಪುರಂದರದಾಸರು
ರಾಗ ಮೋಹನ ಅಟತಾಳ)

ಹರಿಯೇ ಕುಣಿಯೆಂದು ಕುಣಿಸಿದರಯ್ಯ
ಹರಿಯೇ ಕುಣಿಯೆನುತ ||ಪ||

ನಡೆಯಡಿಯಿಲ್ಲದೆ ನಡೆವನ ಕುಡಿವನ
ಪಡತಿಂಬನ ಒಡಹುಟ್ಟಿದನ
ಒಡೆಯನ ಕಂದನ ವೈರಿಯ ಭಂಡಿಯ
ಹೊಡೆದ ಮಹಾತ್ಮನ ಕುಣಿಸಿದರಯ್ಯ ||

ಒಣಗಿದ ಮರದಲಿ ಇಲ್ಲದ ಬಳ್ಳಿ
ಬಣತಿಗೆ ಹುಟ್ಟಿದವನ ತಳ್ಳಿ
ಕ್ಷಣವೊಂದರಿಯದೆ ಬಿಡದೆ ಆಹಾರಕೆ
ಫಣಿ ಮೆಟ್ಟಿದವನ ಕುಣಿಸಿದರಯ್ಯ ||

ಮಾವನೊಡನೆ ಮನೆ ಮಾಡಿ ಗೋಕರ್ಣದಿ
ತಾ ಉರಗನ ಮೇಲೊರಗಿದನ
ಮೂವರ ಮೊಲೆ ಉಂಡು ಮೂರ್ಜಗವರಿಯದೆ
ಮೂವರಣ್ಣನೆಂದು ಕುಣಿಸಿದರಯ್ಯ ||

ಲೋಕವ ತಾಳ್ದನ ಮನೆಯಲಿ ಪುಟ್ಟಿ
ಶೋಕದ ನುಡಿಗಳ ಕದ್ದವನ
ನಾಕರಿಸಲು ನಮಗೆ ಗೋಪರೂಪದಿಂದ
ಆಕರಿಸಿದನ ಕುಣಿಸಿದರಯ್ಯ ||

ಗೋಕುಲದೊಳಗಿನ ಗೋಪಿಯರೆಲ್ಲರು
ಏಕಾಂತದಿ ತಮ್ಮೊಳು ತಾವೆ
ಶ್ರೀಕಾಂತ ನಮ್ಮ ಪುರಂದರವಿಠಲನ
ಏಕಮೂರುತಿಯೆಂದು ಕುಣಿಸಿದರಯ್ಯ ||
***

pallavi

hariyE kuNiyendu kuNisidharayya hariyE kuNiyenuta

caraNam 1

naDeyaDiyillade naDevana kuDivana paDadimbana oDa huTTidana
jaDeyana kandana vairiya bhaNDiya hoDeda mahAtmana kuNisidharayya

caraNam 2

oNagida maradali illada baLLi baNadige huTTidavana taLLi
kSaNavondariyade biDade AhArake phaNi meTTidavana kuNisidharayya

caraNam 3

mAvanoDane mane mADi gOkarNadi tA uragana mEloragidana
mUvara mole uNDu mUrjagavariyade mUvaraNNanendu kuNisidharayya

caraNam 4

lOkava tALdana maneyali puTTi shOkada nuDigaLa kaddavana
nAgarisalu namage gOpa rUpadinda Akarisidana kuNisidharayya

caraNam 5

gOkuladoLagina gOpiyarellaru EkAntadi tammoLu tAve
shrIkAnta namma purandara viTTalana Eka mUrutiyendu kuNisidharayya
***

ಹರಿಯೇ ಕುಣಿಯೆನುತ ನರಹರಿಯೆ, ಕುಣಿಯೆಂದು ಕುಣಿಸಿದರಯ್ಯ ಪ

ಲೋಕವ ತಾಳ್ದನ ಮನೆಯಲಿ ಪುಟ್ಟಿ |ತೂಕದ ನುಡಿಗಳ ಕದ್ದವನ ||ನಾಕರಿಸಲು ನಿಜ ಗೋಪರೂಪದಿಂದ |ಆಕರಿಸಿದನಾ ಕುಣಿಸಿದರಯ್ಯ 1

ಎಡೆಯಿಲ್ಲದೆ ನಡೆವನ ಕೂಡಿರುವವನ |ಹಿಡಿಲೆಂಬನ ಒಡಹುಟ್ಟಿದನ ||ಒಡೆಯನ ಕಂದನ ವೈರಿಯ ಬಂಡಿಯ |ಹೊಡೆದ ಮಹಾತ್ಮನ ಕುಣಿಸಿದರಯ್ಯ 2

ಒಣಗಿದ ಮರ ಎಲೆಯಿಲ್ಲದ ಬಳ್ಳಿ |ಬಣತಿಗೆ ಪುಟ್ಟಿದ ವನದಲ್ಲಿ ||ಕ್ಷಣ ಮುನ್ನರಿಯದೆ ಅದರ ಆಹಾರಕೆ |ಫಣಿಯ ಮೆಟ್ಟಿದನ ಕುಣಿಸಿದರಯ್ಯ 3

ಮಾವನೊಡನೆ ಮನೆಮಾಡಿ ಗೋಕರ್ಣದಿ |ಆ ವುರಗನ ಮೇಲ್ಮಲಗಿದನ ||ಮೂವರ ಮೊಲೆಯುಂಡ ಮೂಲೋಕವರಿಯದ |ಮೂವರಣ್ಣನೆಂದು ಕುಣಿಸಿದರಯ್ಯ 4

ಗೋಕುಲದೊಳಗಿನ ಗೋಪಿಯರೆಲ್ಲ |ಏಕಾಂತದಿ ತಮ್ಮೊಳು ತಾವು ||ಶ್ರೀಕಾಂತನ ನಮ್ಮ ಪುರಂದರವಿಠಲನ |ಏಕ ಮೂರುತಿಯೆಂದು ಕುಣಿಸಿದರಯ್ಯ 5
*********