Showing posts with label ಶ್ರೀನಿವಾಸನೆ ನೀನು ಬ್ಯಾಗನೆ ಬಂದು muddumohana vittala ankita suladi ಸುಳಾದಿ. Show all posts
Showing posts with label ಶ್ರೀನಿವಾಸನೆ ನೀನು ಬ್ಯಾಗನೆ ಬಂದು muddumohana vittala ankita suladi ಸುಳಾದಿ. Show all posts

Sunday, 1 August 2021

ಶ್ರೀನಿವಾಸನೆ ನೀನು ಬ್ಯಾಗನೆ ಬಂದು muddumohana vittala ankita suladi ಸುಳಾದಿ


kruti by muddumohana dasaru 

ಸುಳಾದಿ

ಧ್ರುವತಾಳ

ಶ್ರೀನಿವಾಸನೆ ನೀನು ಬ್ಯಾಗನೆ ಬಂದು

ಸಾನುರಾಗದಿ ಸಂಸಾರ ಬಿಡಿಸೋ

ಭಾನುಕೋಟಿ ಪ್ರಕಾಶಭಾಗ್ಯನಿಧಿಯೆನ್ನ

ಮಾನವ ಕಾಯ್ವುದು ಮಂಗಳಾಂಗನೆ

ಏನೇನು ಕಾರ್ಯಗಳು ನಿನ್ನಾಧೀನವಾಗಿರಲು

ನಾನುನನ್ನದು ಎಂದು ಮಮತೆಯನೆ ಕೊಟ್ಟು

ಅನ್ಯಾಯದಿಂದ ಎನ್ನzಣಿಸುವುದು

ದಾನವಾಂತಕರಂಗ ಮುದ್ದುಮೋಹನವಿಠಲ

ನೀನೆಗತಿಯೆಂದವಗೆ ನಿರ್ಭಯವೊ ಹರಿಯೆ 1


ಮಠ್ಯತಾಳ

ಎನ್ನಪರಾಧಗಳು ಅನಂತವಿರುವದನ್ನು

ನಿನ್ನಸ್ಮರಣೆ ಒಂದೆ ಸಾಕೊ ಹರಿಯೆ

ಬನ್ನ ಬಡಿಸುವದ್ಯಾಕೊ ಮನ್ಮನದಲಿಪೊಳೆದು

ಚೆನ್ನಾಗಿ ಸಲಹೋಘನ್ನಮಹಿಮಾ ಮುದ್ದುಮೋಹನವಿಠಲನೇ 2


ತ್ರಿವಿಡಿತಾಳ

ಬಿಂಬನೆನೆಸಿಕೊಂಡು ಪ್ರತಿಬಿಂಬಗಳೊಳಗೆಕಾರ್ಯ

ಅಂಭ್ರಣಿಸಹಿತವಾಗಿ ನೀಮಾಡಿ ಮಾಡಿ ಸೂವಿ

ಅಂಬುಜನಾಭಾನೆ ಎನ್ನಾಡಂಭಕ ಭಕುತಿ ಬಿಡಿಸಿ

ಸಂಭ್ರಮದಿಂದ ಕಾಯೊ ಕರುಣಾನಿಧೆ

ಶಂಬರಾರಿಯಜನಕ ಮುದ್ದುಮೋಹನವಿಠಲ

ಕಂಬದಿಂದಲಿ ಬಂದು ಭಕುತನ್ನಸಲಹಿದ ದೇವ 3


ಅಟ್ಟತಾಳ

ಏನೇನುದಾನ ಅನಂತ ಮಾಡಲೇನು

ಕಾನನದಲಿ ಪೋಗಿ ತಿರುಗಿತಿರುಗಿದಂತೆ

ಜ್ಞಾನದಿಂದಲಿ ತಾರತಮ್ಯಾನುಸಾರ ನಿನ್ನ

ಧ್ಯಾನವನ್ನ ಒಂದು ಕ್ಷಣವಾದರೂತೋರಿಸೊ

ವಾನರ ವಂದ್ಯ ಮುದ್ದುಮೋಹನವಿಠಲ

ನಾನಾವಿಧದಿಂದ ನಂಬಿದೆನೊ ಹರಿಯೇ4


ಆದಿತಾಳ

ನೀನೆ ಅನಾಥಬಂಧು ನೀನೆ ಅದ್ಭುತಮಹಿಮ

ನೀನೆ ಅಸುರಾಂತಕ ನೀನೆ ಅಮರಾದಿವಂದ್ಯ

ನೀನೆ ಭವರೋಗ ವೈದ್ಯ ನೀನೆ ಭಕ್ತವತ್ಸಲ

ನೀನೆ ಪರಿಪೂರ್ಣ ಸುಖ ನೀನೆ ಪರಂಜ್ಯೋತಿ

ನೀನೆ ಪರಬ್ರಹ್ಮ ನೀನೆ ಪುರುಷೋತ್ತಮ

ನೀನೆ ಪುಣ್ಯೈಶ್ವರ್ಯ ನೀನೆ ನಿರ್ಮಲ ಜ್ಞಾನ

ನೀನೆ ಶಶಿ ಕೋಟಿಲಾವಣ್ಯ ನೀನೆ ಮುದ್ದುಮೋಹನ ವಿಠಲ

ನೀನೆ ವೇಗದಿ ಬಂದು ನೀನೆ ರಕ್ಷಿಸು ಎನ್ನನು 5


ಜೊತೆ

ಸ್ವಾಮಿ ಪುಷ್ಕರಣಿವಾಸ ಕಾಮಿತಫಲದಾನೆ

ಶ್ರೀಮನೋಹರ ನಮ್ಮ ಮುದ್ದುಮೋಹನ ವಿಠಲ

***