ರಾಗ - : ತಾಳ -
ವಿಟ್ಠಲಾ ಕಳೆವುದವಿದ್ಯಾ ಪಟಲಾ l
ನಿಟಿಲಾಕ್ಷನ ಸಖ ಸಂ l ಕಟ ಕಳೆ ನಿಷ್ಕುಟಿಲನ ಮಾಡುತ ll ಪ ll
ತುರಗ ಗ್ರೀವಾಭಿಧನೆಂಬಸುರಾ l ವೇದಾಪಹಾರ
ನೆರವೇರಿಸೆ ಸ್ವೀಕರಿಸ್ಯವತಾರಾ l ಹಯಮುಖನಾಕಾರ l
ಅರಿಶಿರ ಸರಸದಿ ಕತ್ತರಿಸುತ ನೀ
ಸುರರುಗಳನು ಬಹು ಪರಿಪೋಷಿಸಿದೈ ll 1 ll
ಧರೆಯನಪಹರಿಸಲು ಸುರವೈರೀ l ವರಹಾವತಾರಿ
ತ್ವರದಿ ಹಿರಣ್ಯಾಕ್ಷನ ಸಂಹಾರೀ l ನೀನಾದೆ ಮುರಾರಿ l
ಧರಣಿಯ ಕೋರೆಯ ದಾಡಿಯಲೆತ್ತುತ
ಸುರ ಜೇಷ್ಠಗೆ ತಂದೊಪ್ಪಿಸಿದೈಯ್ಯ ll 2 ll
ತುರಗವ ನೀನೇರುತ ಬಂದೂ l ನಿನ ಪುರದೋಳಂದು
ಇರೆ ಧೇನೂ ಪಾಲಾರ್ಯರು ಅಂದು l ನೋಡಿ ಚಕಿತರಂದೂ
ಗುರುಗೋವಿಂದವಿಟ್ಠಲಾ ಲೇನಾಹಿ ಎಂದು
ಒರೆದೋಡಿದೆ ನೀ ದರುಶನ ಕೊಡದೇ ll 3 ll
***