ಕಾವಿಯ ಕಲ್ಲಿನ ತಿಲುಕವಿಡಕ್ಕ
ಕಾವಿಯ ಕಲ್ಲಿನ ತಿಲುಕ ಪ.
ಕಾವಿಯ ಕಲ್ಲಿನ ತಿಲುಕವನಿಟ್ಟರೆ
ಕಾಯುವ ಶ್ರೀಹರಿ ಸತತ ಕಾಣಕ್ಕ ಅ.ಪ.
ಕಾವಿಯ ತಿಲುಕವು ಕಲುಷವ ಕಳೆವುದು
ಕಾವಿಯ ತಿಲುಕವು ಕಲಿಬಾಧೆ ಕಳೆವುದು
ಕಾವಿಯ ತಿಲುಕವು ಕೋಪತಾಪಗಳನ್ನು
ಜೀವನ ಬಳಿಯಲ್ಲಿ ಬರಲೀಸದಕ್ಕ 1
ಕಾವಿಯ ತಿಲುಕವು ಕವಿತೆಯ ಮಾಳ್ಪರಿಗೆ
ಭಾವಶುದ್ಧಿಯನಿತ್ತು ಭಕ್ತಿ ಹೆಚ್ಚಿಸುವುದು
ಕಾವಿಯ ಮಹಿಮೆಯ ಪಾವನ ಗುರು
ಮಧ್ವರಾಯರೆ ಬಲ್ಲರಕ್ಕ 2
ಕಾವಿಯ ತಿಲುಕವು ಗುರುಭಕ್ತಿ ಕೊಡುವುದು
ಕಾವಿಯ ತಿಲುಕವು ವೈವಿಧ್ಯ ಕಳೆವುದು
ಕಾವಿಯ ತಿಲುಕವು ಕಳೆಯ ಹೆಚ್ಚಿಸುವುದು
ಶ್ರೀ ವರನನು ಮನದಿ ತೊರುವುದಕ್ಕ 3
ಕಾವಿಯ ತತ್ವ ದಾಸರೆ ಬಲ್ಲರು
ಕಾವಿಯೆ ಭೂಷಣ ದಾಸ ಶಿರಸಿಗೆ
ಕಾವಿ ಇಲ್ಲದ ವ್ಯಾಸ ದಾಸಕೂಟವು ಇಲ್ಲ
ಕಾವಿಯೆ ಸಂಸಾರ ನಾವೆಯಕ್ಕ 4
ಕಾವಿಯ ಮಹಿಮೆ ತಂದೆ ಮುದ್ದುಮೋಹನ ಗುರು
ಭಾವಿಸಿ ಪೇಳಲು ಅರಿತು ಧರಿಸಿಹೆನು
ಪಾವನ ಗೋಪಾಲಕೃಷ್ಣವಿಠ್ಠಲ ವ್ಯಾಸ
ಕಾವಿಯ ಧರಿಸಿ ಮುನಿಯಾದ ಬದರಿಯಲಿ 5
****