ಗೌರಿ ಗಜಮುಖನ ಮಾತೆ l ಗುಣಗಣ ಭರಿತೆ
ಶೌರಿ ಸಖನಂಗಸಂಗೀ ಸಂಪೂರ್ತೆ ll ಪ ll
ಸೌರಭ ಶುಭ ತನು ವಾರಿಜನೇತ್ರಳೆ
ವೀರಸತಿಯೆ ದಯವಾರಿಧಿ ಪಾಲಿಸು ll ಅ ಪ ll
ತುಂಗ ಮಂಗಳೇ ದೇವಿ l ಕಲಿಗೆ ಭೈರವೀ
ರಂಗಾನ ನವವಿಧ ಭಕ್ತಿ ಸಂಗ ನೀಡುವಿ
ಹಿಂಗದೆ ಪೊರಿಯೆ ತಾಯೇ l ಭಕ್ತ ಸಂಜೀವೆ
ತಿಂಗಳ ಮುಖಿವರಗರಿವೆ l ನಮ್ಮ ಶಂಭುವೆ
ಭಂಗಬಟ್ಟೇನು ನುಂಗುವ ಭವದೊಳು
ಮಂಗಳ ಕರುಣಾಪಾಂಗದಿ ನೋಡೆನ್ನ
ಹಿಂಗಿಸು ಭವ ಭಯ ಗಂಗೆಯ ಧರನಂಘ್ರಿ-
ಭೃಂಗಳೆ ಬೋದಯಾಕಂಗಳೆ ಕರುಣಿಸು ll 1 ll
ಇಂದ್ರಾದಿ ಸುರಗುರುವೆ l ದೇವ ತರುವೆ
ನೊಂದು ನಾನಾ ಪರಿ ನಿನ್ನ ಬೇಡುವೆ
ಕುಂದನೆಣಿಸದಲೆ ಶಿವ ಶಂಕರಿ ಕಾವೆ
ಸಂದೇಹ ಕಳಿ ವಿಭುವೆ ll ವೀರಜತನುವೆ
ವಂದಿಪೆ ತತ್ಪದ ದ್ವಂದ್ವಕೆ ಪರಿಪರಿ
ನೊಂದವನಾ ಮ್ಯಾಲ್ಹೊಂದಿಸು ಕರುಣವ
ಮಂದಸ್ಮಿತೆ ಮುಕುಂದನ ಮನದಲಿ
ವಂದಿಸು ಅನಿಮಿತ್ತ ಬಂಧುವೆ ರಕ್ಷಿಸು ll 2 ll
ಕಸ್ತೂರಿ ಕುಂಕುಮ ಫಾಲೆ l ರನ್ನಾದ ಓಲೆ
ವಸ್ತುಗಳಿಟ್ಟ ಹಿಮವಂತನ ಬಾಲೆ
ಶಿಸ್ತಿನ ಶುಭ್ರಾಂಬರಧಾರೆ ವನಮಾಲೆ
ಮಸ್ತಕದ ಕಿರೀಟ ವದನೆ ತಾಂಬೂಲೆ
ಮಸ್ತಕದಲಿ ಸಿರಿ ಹಸ್ತಗಳಿಟ್ಟೆನ್ನ
ದುಸ್ತರದ ಹಾದಿಗಳಸ್ತಮಮಾಳ್ಪುದು
ವಿಸ್ತರ ಮಹಿಮ ಜಯೇಶವಿಟ್ಠಲ
ವಸ್ತುವ ನೀಡಮ್ಮ ಹಸ್ತಿಯ ಗಮನೆ ll 3 ll
***
ಗೌರಿ ಗಜಮುಖನ ಮಾತೆ ಗುಣಗಣಭರಿತೆ ।
ತುಂಗಮಂಗಳೇ ದೇವಿ | ಕಲಿಗೆ ಭೈರವೀ ।
ಇಂದ್ರಾದಿ ಸುರಗುರುವೆ | ದೇವತರುವೇ
ಕಸ್ತೂರಿ ಕುಂಕುಮ ಫಾಲೆ | ರನ್ನಾದ ಓಲೆ